ಮಡಿಕೇರಿ ನ.27 : ಮಂಗಳೂರಿನ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದಾರೆ.
ಐಗೂರಿನ ಸಿಂಚನ ಪ್ರಭಾಕರ್ ಹಾಗೂ ಕೆ.ಆರ್.ಅನರ್ಘ್ಯ ಪೂವಯ್ಯ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕೆ.ಆರ್.ಆರಾಧ್ಯ ಪೂವಯ್ಯ ಹಾಗೂ ಹರ್ಷಲ್ ಬೆಳ್ಳಿ ಪದಕ, ನಂಗಾರು ನಿರುಷ್, ಚಿರಾಗ್, ಯಶ್ವಂತ್ ಪೂಜಾರಿ, ಬಿಂದು ಬೆಳ್ಯಪ್ಪ, ವಿವಾನ್ ಗೌಡ ಹಾಗೂ ಮನ್ವಿತ್ ಮೋಹನ್ ಕಂಚಿನ ಪದಕ ಗೆದ್ದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ತರಬೇತುದಾರ ಎನ್.ಸಿ.ಸುದರ್ಶನ್ ತರಬೇತಿ ನೀಡಿದ್ದಾರೆ.







