ಮಡಿಕೇರಿ ನ.29 : ಮಂಗಳೂರಿನ ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸೋಮವಾರಪೇಟೆಯ ಕ್ರಿಯೇಟಿವ್ ಅಕಾಡೆಮಿ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿ ಬಿ.ಆರ್.ಹರ್ಷಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾನೆ.
ಈತ ಸೋಮವಾರಪೇಟೆಯ ಬಿ.ಎಸ್.ರೋಹಿತ್ ಹಾಗೂ ಶಿಲ್ಪ ದಂಪತಿಯ ಪುತ್ರ. ಕೊಡಗಿನ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಸೋಸಿಯೇಷನ್‍ನ ತರಬೇತುದಾರ ಎನ್.ಸಿ.ಸುದರ್ಶನ್ ಅವರ ಬಳಿ ಹರ್ಷಲ್ ತರಬೇತಿ ಪಡೆದಿದ್ದಾನೆ.







