ಮಡಿಕೇರಿ ಡಿ.4 : ಪೊನ್ನಂಪೇಟೆ 66/11 ಕೆವಿ ಮತ್ತು ಶ್ರೀಮಂಗಲ 33/11 ಕೆವಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ಡಿಸೆಂಬರ್, 06 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲು, ಹರಿಶ್ಚಂದ್ರಪುರ, ರಾಜಾಪುರ, ಮಳ್ಳೂರು, ನಿಟ್ಟೂರು, ಕೊಟ್ಟಗೇರಿ, ಬಿಳೂರು, ದೇವನೂರು ನಲ್ಲೂರು, ಹೆಬ್ಬಾಲೆ, ಹರಿಹರ, ಕುಮೂಟೂರು, ನೋಖ್ಯ, ಮಾಯಾಮುಡಿ, ಬಾಳೆಲೆ ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಕಾನೂರು, ಕುಟ್ಟ, ಕೆ.ಕೆ.ಆರ್, ಟೀ ಎಸ್ಟೇಟ್, ತೆರಾಲು, ಪರಕಟಕೇರಿ ಬಿರುನಾಣಿ, ಬಾಡಗರಕೇರಿ, ನೆಮ್ಮಲೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಇಇ ಅನಿತಾ ಬಾಯಿ ಕೋರಿದ್ದಾರೆ.







