Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
  • *ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*
  • *ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*
  • *ವಾಹನ, ದನ ಕಳವು ಪ್ರಕರಣದ ಆರೋಪಿಗಳ ಬಂಧನ*
  • *ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*
  • *ಸೋಮವಾರಪೇಟೆ : ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತುಕೊಳ್ಳಿ : ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಲಹೆ*
  • * ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*
  • *ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*
  • *ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*
  • *ಕಸಾಪ ಸಂತಾಪ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಪತ್ರಕರ್ತ ಅನಿಲ್ ಎಚ್.ಟಿ ಬರೆದಿರುವ ‘ಅಯೋಧ್ಯೆ’ ಪುಸ್ತಕ ಬಿಡುಗಡೆ : ರಾಮನ ವ್ಯಕ್ತಿತ್ವವನ್ನು ನಾವು ಗೌರವಿಸಬೇಕು : ಸಾಹಿತಿ ಗಜಾನನ ಶರ್ಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಪತ್ರಕರ್ತ ಅನಿಲ್ ಎಚ್.ಟಿ ಬರೆದಿರುವ ‘ಅಯೋಧ್ಯೆ’ ಪುಸ್ತಕ ಬಿಡುಗಡೆ : ರಾಮನ ವ್ಯಕ್ತಿತ್ವವನ್ನು ನಾವು ಗೌರವಿಸಬೇಕು : ಸಾಹಿತಿ ಗಜಾನನ ಶರ್ಮ*

ಫೆಬ್ರವರಿ 24, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.24 NEWS DESK : ಶ್ರೀ ರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದಶ೯ ಮತ್ತು ಪ್ರೀತಿಯ ಅಂಶಗಳೇ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ. ಶ್ರೀರಾಮನನ್ನು ಮನಸ್ಸಿಗೆ ಹಚ್ಚಿಕೊಂಡಲ್ಲಿ ಆತನಲ್ಲಿದ್ದ ಮಾನವ ಗುಣದ ಅನೇಕ ಋಣಾತ್ಮಕತೆಗಳ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಶ್ರೀರಾಮನನ್ನು ಹೃದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶಮ೯ ಪ್ರತಿಪಾದಿಸಿದ್ದಾರೆ.

ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಪತ್ರಕತ೯ ಅನಿಲ್ ಹೆಚ್.ಟಿ. ಬರೆದ ‘ಅಯೋಧ್ಯೆ ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟ್ರಮಂದಿರ’ ಪುಸ್ತಕವನ್ನು ಬಿಡುಗಡೆ ಮಾಡಿ ಗಜಾನನ ಶರ್ಮ ಮಾತನಾಡಿದರು.

ಎಂತಹ ಕಷ್ಟವನ್ನಾದರೂ ನಗುಮೊಗದಿಂದಲೇ ಸ್ವೀಕರಿಸಬೇಕು ಎಂಬ ಗುಣವನ್ನು ಕಲಿಸಿಕೊಟ್ಟವನು ರಘುರಾಮ. ಜಗದೇಕ ಸುಂದರಿಯಾಗಿ ಬಂದ ಶೂರ್ಪನಖಿ ಹಾಗೂ ಲಂಕೆಯ ಸಿಂಹಾಸನದ ಸೆಳೆತಗಳಿಗೆ ಕೂಡ ಶ್ರೀರಾಮ ಒಳಗಾಗಲಿಲ್ಲ. ಅಶ್ವಮೇಧ ಯಾಗ ಮಾಡುವಾಗ ಎಲ್ಲರೂ ಮತ್ತೊಂದು ಮದುವೆಯಾಗು ಎಂದಾಗಲೂ ಅದನ್ನೊಪ್ಪದೇ ತಾನು ನಂಬಿದ್ದ ಸೀತೆಯ ಪ್ರತಿಮೆಯನ್ನೇ ಪಕ್ಕದಲ್ಲಿರಿಸಿಕೊಂಡವ ರಾಮ. ಆತನ ಕಣ್ಣಿಗೆ ಅಳಿಲಿನ ಸೇವೆ, ಕಡು ಬಡವಿ ಶಬರಿಯ ಭಕ್ತಿಯೂ ಕಂಡಿತ್ತು. ಸೇವಕನಿಗೂ ತನ್ನ ಕುಟುಂಬದಲ್ಲಿ ಸ್ಥಾನ ಕಲ್ಪಿಸಿದ. ರಾಮನ ಬದುಕೇ ಪ್ರೀತಿಯ ಬದುಕಾಗಿತ್ತು. ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸಬಾರದೇ’ ಎಂದು ಗಜಾನನ ಶಮ೯ ಪ್ರಶ್ನಿಸಿದರು.

ತಾವು ಬರೆದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಹಾಡು ಹುಟ್ಟಿದ ಬಗೆಯನ್ನು ಸವಿವರವಾಗಿ ವಿವರಿಸಿದ ಡಾ.ಗಜಾವನ ಶಮ೯, ತನ್ನ ಗುರು ರಾಘವೇಶ್ವರ ಶ್ರೀಗಳ ಬೇಡಿಕೆಯಂತೆ ರಾಮನ ಬಗ್ಗೆ ಹಾಡು ಬರೆಯಲು ಚಿಂತಿಸುತ್ತಿದ್ದಾಗಲೇ ಕೇರಳದಲ್ಲಿ ತಂಪುಪಾನೀಯದ ಜಾಹೀರಾತಿನಲ್ಲಿದ್ದ ದಿಲ್ ಮಾಂಗೇ ಮೋರ್ ಎಂಬ ಸಂದೇಶ ಕಾಣಿಸಿತು. ಇದನ್ನೇ ಸ್ಪೂತಿ೯ಯಾಗಿರಿಸಿಕೊಂಡು ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಎಂದು ಬರೆದೆ. ಈ ಹಾಡಿನಲ್ಲಿ ರಾಮನ ಜತೆಗೇ ರಾಮನನ್ನು ನಂಬಿದ್ದ ಎಲ್ಲರ ಗುಣವಿಶೇಷತೆಗಳೂ ಇವೆ. ಸರಳ ಪದಪುಂಜಗಳಲ್ಲಿ ರೂಪಿತಗೊಂಡ ಈ ಹಾಡು ಈ ರೀತಿಯಲ್ಲಿ ವಿಶ್ವವಿಖ್ಯಾತವಾಗುತ್ತದೆ ಎಂದು ನಿರೀಕ್ಷಿಯೇ ಇರಲಿಲ್ಲ. ಎಲ್ಲವೂ ರಾಮನ ಮಹಿಮೆಯಾಗಿದೆ ಎಂದರು. ಈ ಹಾಡು ಬರೆದು 10 ವಷ೯ಗಳೇ ಕಳೆದರೂ ಇಂದಿಗೂ ಅನೇಕರ ಮನಸ್ಸಿನಂತೆ ಜೀವನಕ್ಕೂ ಈ ಹಾಡು ಬಹಳ ಆಪ್ತವಾಗಿರುವುದು ಹಾಡು ಬರೆದ ತನಗೇ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಗಜಾನನ ಶಮ೯ ಹೇಳಿದರು. ಅಯೋಧ್ಯೆಗೇ ತೆರಳಿ ಪತ್ರಕತ೯ ಅನಿಲ್ ಬರೆದ ಅಯೋಧ್ಯೆ ಕೃತಿಯು ಜನರ ಪ್ರೀತಿಯ ಮಂದಿರದಂತೆ ಭಾರತೀಯರ ಹೆಮ್ಮೆಯ ರಾಷ್ಟ್ರೀಯ ಮಂದಿರವಾಗಿ ಕಂಗೊಳಿಸಿರುವ ಚಿತ್ರಣವನ್ನು ಮನಸ್ಸಿಗೆ ತಟ್ಟುವಂತೆ ಪದಗಳಲ್ಲಿ ತಿಳಿಸಿದೆ ಎಂದೂ ಗಜಾನನ ಶಮ೯ ಹೆಮ್ಮೆಪಟ್ಟರು.

ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ, ‘ವೀರಪ್ಪನ್ ಇದ್ದಂತ ಸಂದರ್ಭದಲ್ಲಿ, ಕೋವಿಡ್ ಕಾಲದಲ್ಲಿ ಅತ್ಯುತ್ತಮ ವರದಿಗಳನ್ನು ಅನಿಲ್ ಹೆಚ್.ಟಿ. ಬರೆದರು. ಈಗ ಅಯೋಧ್ಯೆ ಪುಸ್ತಕವನ್ನು ಅಷ್ಟೇ ಅತ್ಯುತ್ತಮವಾಗಿ ರಚಿಸಿದ್ದಾರೆ’ ಎಂದು ಶ್ಲಾಘಿಸಿದರು. ಅನಿಲ್ ಬರಹದಲ್ಲಿ ವಿನೂತನ ಶೈಲಿಯಿದೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಭಾವವೇ ಅನಿಲ್ ಬರಹಕ್ಕೆ ಸ್ಪೂತಿ೯ಯಾಗಿರುವುದು ವಿಶೇಷ ಎಂದೂ ಚಿದ್ವಿಲಾಸ್ ಹೇಳಿದರು.

ಅಯೋಧ್ಯೆ ಕೖತಿಕಾರ ಅನಿಲ್ ಹೆಚ್.ಟಿ. ಮಾತನಾಡಿ, ಲಾಕ್ ಡೌನ್ ಡೈರಿ ನಂತರದ ತನ್ನ ಕೖತಿ ಅಯೋಧ್ಯೆ ಅನೇಕ ಓದುಗರ ಬೇಡಿಕೆಯನುಸಾರ ಪ್ರಕಟಿತವಾಗಿದೆ. ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಕೊಡಗಿನ ಜನತೆ ಕೂಡ 2.200 ಕಿಮೀ. ದೂರದ ಅಯೋಧ್ಯೆಯಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸಿದ್ದು ಕೂಡ ಅಯೋಧ್ಯೆ ಪುಸ್ತಕ ಪ್ರಕಟಣೆಗೆ ಕಾರಣವಾಯಿತು ಎಂದು ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ ಎಲ್ಲ ಭಾಷೆಯ ಹಾಡುಗಳು ಕೇಳಿ ಬರುತ್ತಿದ್ದವು. ಅದರಲ್ಲಿ 4 ನೇ ಹಾಡಾಗಿ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಕೇಳಿ ಬಂದು ರೋಮಾಂಚನಕ್ಕೆ ಕಾರಣವಾಯಿತು. ಅಯೋಧ್ಯೆ ಕೖತಿ ಓದಿದ ಬಳಿಕ ದೇವನಗರಿಗೆ ತೆರಳಬೇಕು ಎಂಬ ಭಾವನೆ ಮೂಡಿದರೆ ತನ್ನ ಪ್ರಯತ್ನ ಸಾಥ೯ಕವಾದಂತೆ. ಹಾಗೇ ಅಯೋಧ್ಯೆ ಕೖತಿ ಓದಿ ಇಲ್ಲಿ ಸಂಪೂಣ೯ ಅಯೋಧ್ಯೆಯ ಚಿತ್ರಣವಿದೆ. ಅಯೋಧ್ಯೆಗೆ ತೆರಳುವುದು ಯಾತಕ್ಕೆ ಎನ್ನಿಸಿದರೂ ತನ್ನ ಶ್ರಮ ಸಾಥ೯ಕವಾದಂತೆ ಎಂದು ಹೇಳಿದರು. ಪ್ರತೀಯೋವ೯ರು ದೈವನಗರದಂತೆ ಕಂಗೊಳಿಸುತ್ತಿರುವ ಅಯೋಧ್ಯೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದೂ ಅನಿಲ್ ಮನವಿ ಮಾಡಿದರು.

ಇದೇ ಸಂದಭ೯ ಸರಿಗಮಪ ರಿಯಾಲಿಟಿ ಶೋನ ಸ್ಪಧಿ೯, ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡನ್ನು ಸುಶ್ಯಾವ್ಯವಾಗಿ ಹಾಡು ಬರೆದ ಸಾಹಿತಿ ಮುಂದೆಯೇ ಹಾಡುವ ಮೂಲಕ ಅಪಾರ ಮೆಚ್ಚುಗೆಗೆ ಕಾರಣರಾದರು. ಲೇಖಕಿ ಕೆ.ಜಯಲಕ್ಷ್ಮಿ ನಿರೂಪಿಸಿದ ಕಾಯ೯ಕ್ರಮದಲ್ಲಿ ಅತಿಥಿಗಳ ಪರಿಚಯನ್ನು ಪತ್ರಕತ೯ ಕುಡೆಕಲ್ ಸಂತೋಷ್, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಮಾಡಿದರು. ರೀನಾ ಅನಿಲ್ , ಎಸ್.ಎಸ್. ಸಂಪತ್ ಕುಮಾರ್ ಕಾಯ೯ಕ್ರಮ ನಿವ೯ಹಿಸಿದರು. ಚಿತ್ರಾನಂಜಪ್ಪ, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ ರಾಮಸ್ತುತಿ ಹಾಡಿದರು.

ಸಾಹಿತಿ ಡಾ.ಗಜಾನನ ಶಮಾ೯ , ನಾಗರತ್ನ ಶಮಾ೯ ದಂಪತಿಯನ್ನು ಕೊಡಗಿನ ಜನತೆಯ ಪರವಾಗಿ ಹಿರಿಯ ಪತ್ರಕತ೯ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಹೆಚ್.ಎಸ್.ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಹೆಚ್.ಟಿ. ಅವರನ್ನು ಸಮಥ೯ ಕನ್ನಡಿಗ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕಿಕ್ಕಿರಿದು ಸೇರಿದ್ದ ಸಾಹಿತ್ಯ ಪ್ರೇಮಿಗಳು :: ಸಾಹಿತ್ಯ ಸಂಬಂಧಿತ ಕಾಯ೯ಕ್ರಮಗಳಿಗೆ ಹೆಚ್ಚಿನ ಸಭಿಕರು ಸೇರುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ಸತ್ಕಾರ್ ಸಭಾಂಗಣದಲ್ಲಿ ಅಯೋಧ್ಯೆ ಕೃತಿ ಲೋಕಾಪ೯ಣೆ ಸಂದಭ೯ ನೂರಾರು ಸಾಹಿತ್ಯ ಪ್ರೇಮಿಗಳು ಕಿಕ್ಕಿರಿದು ಸೇರಿದ್ದು, ಗಮನಾಹ೯ವಾಗಿತ್ತು. ಸಾಮಾನ್ಯವಾಗಿ ಕವಿತೆಗಳ ಪುಸ್ತಕಕ್ಕೆ ಕವಿತೆಯಲ್ಲಿ ಆಸಕ್ತಿ ಉಳ್ಳವರು, ಸಾಹಿತ್ಯ ಪುಸ್ತಕಕ್ಕೆ ಸಾಹಿತ್ಯದಲ್ಲಿ ಆಸಕ್ತರು ಮಾತ್ರ ಹಾಜರಿರುತ್ತಾರೆ. ಆದರೆ ಅಯೋಧ್ಯೆ ಕೖತಿ ಲೋಕಾಪ೯ಣೆ ಸಂದಭ೯ ಸಮಾಜದ ಎಲ್ಲಾ ವಗ೯ದ ಸಾಹಿತ್ಯ, ಕಲಾಪ್ರೇಮಿಗಳೂ ಕಿಕ್ಕಿರಿದು ಸೇರಿದ್ದು ವಿಶೇಷವಾಗಿದೆ. ಮಡಿಕೇರಿಯಲ್ಲಿ ಸಭಿಕರ ಕೊರತೆ ಇಲ್ಲ ಎಂಬುದಕ್ಕೆ ಈ ಕಾಯ೯ಕ್ರಮ ಉದಾಹರಣೆಯಾಗಿದೆ ಎಂದು ಅತಿಥಿಯಾಗಿದ್ದ ಪತ್ರಕತ೯ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿಶೇಷಚೇತನರಿಗೆ ಕ್ರೀಡಾಕೂಟ : ಕ್ರೀಡೆಯಿಂದ ದೈಹಿಕ, ಮಾನಸಿಕ ದೃಢತೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026

*ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*

ಮಾರ್ಚ್ 16, 2026

*ಕೊಡಗಿನ ವಿವಿಧೆಡೆ ಸ್ವಚ್ಛತಾ ಅಭಿಯಾನ*

ಮಾರ್ಚ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.16 NEWS DESK : ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ಸ್ಥಳಗಳು,…

*ಹೋಂ ನರ್ಸಿಂಗ್ ಕೇರ್ ಟೇಕರ್ ನಿಂದ ಕಳ್ಳತನ : ಆರೋಪಿಯ ಬಂಧನ*

ಮಾರ್ಚ್ 16, 2026

*ವಾಹನ, ದನ ಕಳವು ಪ್ರಕರಣದ ಆರೋಪಿಗಳ ಬಂಧನ*

ಮಾರ್ಚ್ 16, 2026

*ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ*

ಮಾರ್ಚ್ 16, 2026

*ಸೋಮವಾರಪೇಟೆ : ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತುಕೊಳ್ಳಿ : ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಲಹೆ*

ಮಾರ್ಚ್ 16, 2026

* ಸೋಮವಾರಪೇಟೆ : ಮಾ.27 ರಂದು ಶ್ರೀ ರಾಮನವಮಿ ಉತ್ಸವ*

ಮಾರ್ಚ್ 16, 2026

*ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಗ್ರಾಹಕರ ಗಮನಕ್ಕೆ : ಜಿಲ್ಲಾಡಳಿತದಿಂದ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ*

ಮಾರ್ಚ್ 16, 2026

*ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ : “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಅನುಭವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ*

ಮಾರ್ಚ್ 16, 2026

*ಕಸಾಪ ಸಂತಾಪ*

ಮಾರ್ಚ್ 15, 2026

*ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವ*

ಮಾರ್ಚ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.