ಮಡಿಕೇರಿ ಮಾ.6 NEWS DESK : ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ವತಿಯಿಂದ ಮಾ.9ರಂದು ಕಗ್ಗೋಡ್ಲುವಿನಲ್ಲಿ ಪ್ರಾಂತೀಯ ಸಮ್ಮೇಳನ ನಡೆಯಲಿದೆ ಎಂದು ಲಯನ್ಸ್ ಮಡಿಕೇರಿ ಅಧ್ಯಕ್ಷ ಡಿ.ಮಧುಕರ್ ಶೇಟ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಗ್ಗೋಡ್ಲು ಸಮೀಪದ ಕೂರ್ಗ್ ಅಂಬರದಲ್ಲಿ ಸಂಜೆ 4 ಗಂಟೆಗೆ ಲಯನ್ಸ್ ಇಂಟರ್ ನ್ಯಾಷನಲ್ 8ರ ಅಧ್ಯಕ್ಷ ಅಂಬೆಕಲ್ ನವೀನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ 14 ಪ್ರಾಂತ್ಯಗಳ ಲಯನ್ಸ್ ಸಂಸ್ಥೆಯ ಸದಸ್ಯರು, ಪ್ರಾಂತ್ಯ ಅಧ್ಯಕ್ಷರು, ಮಾಜಿ ಹಾಗೂ ಹಾಲಿ ಗವರ್ನರ್‍ಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಲಯನ್ಸ್ ಇಂಟರ್ ನ್ಯಾಷನಲ್ 8ರ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಜಿಲ್ಲೆಯಲ್ಲಿ 500ಕ್ಕೂ ಅಧಿಕ ಲಯನ್ಸ್ ಸದಸ್ಯರಿದ್ದಾರೆ. ಸಮ್ಮೇಳನದಲ್ಲಿ ಲಯನ್ಸ್‍ನ ವಾರ್ಷಿಕ ಕಾರ್ಯಕ್ರಮಗಳನ್ನು ಸದಸ್ಯರಿಗೆ ತಿಳಿಸಲಾಗುವುದು. ಪ್ರಮುಖರಾದ ಜಿ.ಎಸ್.ನಟೇಶ್, ಜಿ.ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದ ರಾಮಪ್ಪ, ಬಾಲಾಜಿ ಕಶ್ಯಪ್ ಹಾಗೂ ಡಾ.ಎಂ.ಜಿ.ಪಾಟ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಖಜಾಂಚಿ ಕೆ.ಎ.ಬೊಳ್ಳಪ್ಪ, ಲಯನ್ಸ್ ಸಂಸ್ಥೆಯ ಮುಖ್ಯ ಸಲಹೆಗಾರ ಪಿ.ಪಿ.ಸೋಮಣ್ಣ, ಸಹ ಕಾರ್ಯದರ್ಶಿ ಮದನ್ ಹಾಗೂ ನಿದೇರ್ಶಕ ಕೆ.ದಾಮೋಧರ್ ಉಪಸ್ಥಿತರಿದ್ದರು.







