ಮಡಿಕೇರಿ ಮಾ.8 NEWS DESK : ಹಳೆ ಕೂಡಿಗೆ ಸಮೀಪ ಕಾವೇರಿ ನದಿಗೆ ಸ್ನಾನಕ್ಕಿಳಿದ ಸಂದರ್ಭ ನೀರಿನಲ್ಲಿ ಸಿಲುಕಿ ಮೃತಪಟ್ಟ ಯುವಕರ ಮೃತದೇಹಗಳು ಪತ್ತೆಯಾಗಿದೆ. ಮೂವರು ಯುವಕರಲ್ಲಿ ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು(23) ಮೃತದೇಹ ಗುರುವಾರ ಸಂಜೆ ಪತ್ತೆಯಾಗಿತ್ತು. ಸತತ ಕಾರ್ಯಾಚರಣೆಯ ಬಳಿಕ ಇಂದು ಬೆಳಗ್ಗೆ ಕಣಿವೆಯ ಹಕ್ಕೆ ಗ್ರಾಮದ ಸಚಿನ್(22) ಹಾಗೂ ಮುಳ್ಳುಸೋಗೆ ಜನತಾಕಾಲನಿಯ ವಿನೋದ್(23) ಅವರುಗಳ ಮೃತದೇಹ ಪತ್ತೆಯಾಗಿದೆ.
ಐವರು ಸ್ನೇಹಿತರು ಕಾವೇರಿ ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ ಸಂದರ್ಭ ಮೂವರು ಕೂಡ ಮೃತಪಟ್ಟಿದ್ದರು.











