ಮಡಿಕೇರಿ ಮಾ.11 NEWS DESK : ಮಂಗಳೂರಿನಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ಪ್ರಾಂತ ಬೈಠಕ್‍ನಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗ ದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಕೊಡಗು ಜಿಲ್ಲಾ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಾಧ್ಯಕ್ಷರಾಗಿ ಎಸ್.ಸುರೇಶ್, ಜಿಲ್ಲಾ ಕಾರ್ಯದರ್ಶಿಯಾಗಿ ರಮೇಶ್ ಪುದಿಯೊಕ್ಕಡ, ಕೋಶಾಧ್ಯಕ್ಷರಾಗಿ ಸಂಪತ್ ಕುಮಾರ್, ಉಪಾಧ್ಯಕ್ಷರಾಗಿ ಪರಮೇಶ್ ಕೂತಿ, ಡಿ.ನರಸಿಂಹ ಸುಂಟಿಕೊಪ್ಪ, ಸಹ ಕಾರ್ಯದರ್ಶಿಗಳಾಗಿ ಡಿ.ಸಂತೋಷ್ ಕುಶಾಲನಗರ, ಯತೀಶ್ ವಿರಾಜಪೇಟೆ, ವಕೀಲರಾದ ಹೇಮಚಂದ್ರ ಸೋಮವಾರಪೇಟೆ ಆಯ್ಕೆಯಾಗಿದ್ದಾರೆ.
ಮಾತೃಶಕ್ತಿ ಜಿಲ್ಲಾ ಪ್ರಮುಖ್ ಆಗಿ ಉಮಾವತಿ, ಸಹ ಪ್ರಮುಖ್ ಆಗಿ ಪೂರ್ಣಿಮಾ ಸುರೇಶ್, ಭಜರಂಗದಳದ ಜಿಲ್ಲಾ ಸಂಯೋಜಕರಾಗಿ ಪ್ರವೀಣ್ ಸಿದ್ದಾಪುರ, ಸಹ ಸಂಯೋಜಕರಾಗಿ ಕವನ್ ಕಾರ್ಯಪ್ಪ ಗೋಣಿಕೊಪ್ಪ, ನವೀನ್ ಪೂಜಾರಿ ಮಡಿಕೇರಿ ಹಾಗೂ ಸಜಿ ಭರತ್ ಸೋಮವಾರಪೇಟೆ ನೇಮಕಗೊಂಡಿದ್ದಾರೆ.
ಜಿಲ್ಲಾ ದುರ್ಗಾ ವಾಹಿನಿಯ ಸಂಯೋಜಕರಾಗಿ ಪಾರುವಂಗಡ ರಿಷ್ತ ಚಂಗಪ್ಪ ಗೋಣಿಕೊಪ್ಪ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಬೈಠಕ್‍ನಲ್ಲಿ ಜವಾಬ್ದಾರಿ ನೀಡಲಾಯಿತು.








