ಕಡಂಗ ಮಾ.11 NEWS DESK : ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಸೌಜನ್ಯ ಬಳಗದಿಂದ ಶಿಕ್ಷಣಕ್ಕೆ ಪೂರವಾದ ಕೊಡುಗೆ ನೀಡಲಾಯಿತು.
ಸೌಜನ್ಯ ಟ್ರಸ್ಟ್ ನ ಅಧ್ಯಕ್ಷ ರಂಗರಾಜ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನರಿಯಂದಡ ಗ್ರಾ.ಪಂ ಸದಸ್ಯ ಸುಬೀರ್ ಮಾತನಾಡಿ, ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸುತ್ತಿರುವ ಸೌಜನ್ಯ ಟ್ರಸ್ಟ್ ನ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸ್ಥಳೀಯ ದಾನಿಗಳಾದ ಉಡಿಯಂಡ ಡಿ.ಚೆಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿರುವ ಉತ್ತಮ ಸೌಲಭ್ಯವನ್ನು ಪಡೆದುಕೊಳ್ಳಿ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಫಾತಿಮಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ಕೆ.ಎಂ.ವಿಮಲಾ ನಿರೂಪಿಸಿದರು. ಶಾಲಾ ಮುಖ್ಯಶಿಕ್ಷಕರು ಪಿ.ಎಂ.ಶಾಂತಿಕುಮಾರಿ ಸ್ವಾಗತಿಸಿದರು. ಶಾಲೆಗೆ ನೀಡಿದ ಕೊಡುಗೆಗಳಬಗ್ಗೆ ಬಬಿತವಿವರಿಸಿದರು. ವತ್ಸಲಾ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ನೌಫಲ್ ಕಡಂಗ







