ಮಡಿಕೇರಿ ಮಾ.12 NEWS DESK : ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ಕುಂಬಾರಕಟ್ಟೆ, ತಟ್ಟೆಕೆರೆ, ಪಾಲದಳ ಗಿರಿಜನ ಹಾಡಿಗಳಿಗೆ ಪ್ರಧಾನ ಮಂತ್ರಿ ಜನ್-ಮನ್ ಯೋಜನೆಯಡಿಯಲ್ಲಿ 1 ಕೋಟಿ 40ಲಕ್ಷ ರೂ.ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಸಲುವಾಗಿ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಸಭೆ ನಡೆಯಿತು.
ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಅಮ್ಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲಾಯಿತು. ಅಲ್ಲದೆ ಈ ಜನವಸತಿ ಪ್ರದೇಶದ ಸ್ವಲ್ಪ ಭಾಗಗಳು ಅರಣ್ಯ ಪ್ರದೇಶದಲ್ಲಿ ಇದ್ದು, ಕೇಂದ್ರ ಸರ್ಕಾರ ಮಾರ್ಗ ಸೂಚಿಯಂತೆ ಈ ಭಾಗಗಳಿಗೂ ನೀರು ಒದಗಿಸಲು ಸಭೆಯ ಮೂಲಕ ಶಿಫಾರಸು ಮಾಡಲಾಯಿತು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಅಭಿವೃದ್ಧಿ ಅಧಿಕಾರಿ ಸುರೇಶ್, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ , ಪಡಿಞರಂಡ ಕವಿತಾ ಪ್ರಭು, ಜೆ.ಕೆ.ಅಪ್ಪಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.







