ಗೋಣಿಕೊಪ್ಪ ಮಾ.16 : ಉಚಿತ ಮಾನಸಿಕ ಆರೋಗ್ಯ ದುಷ್ಟಟ ಅವಲಂಬನೆ ಮತ್ತು ಮರುವಿನ ಕಾಯಿಲೆ ಬಗ್ಗೆ ತಿಳುವಳಿಕಾ ಮಾಪನ ತಪಾಸಣ ಬೃಹತ್ ಶಿಬಿರ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಲ್ಲಿ ನಡೆಯಿತು.
ಮೈಸೂರಿನ ಶ್ರೀ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆ ಮತ್ತು ವಿವೇಕ ಆಸ್ಪತ್ರೆ, ಪೊನ್ನಂಪೇಟೆ ರಾಮಕೃಷ್ಣ ಸೇವಾ ಆಶ್ರಮ ಆಸ್ಪತ್ರೆ ಮತ್ತು ರಾಮಕೃಷ್ಣ ಶಾರದಾಶ್ರಮ ಸಹಯೋಗದೊಂದಿಗೆ ಶಿಬಿರವನ್ನು ಆಯೋಜಿಸಲಾಯಿತು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತನಂದಾ ಜೀ ಶಿಬಿರಕ್ಕೆ ಚಾಲನೆ ನೀಡಿದರು.
ಮುಂದಿನ ತಿಂಗಳ ನಾಲ್ಕನೇ ಶನಿವಾರದಂದು ಶಿಬಿರವನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುಮಾರು 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ತಪಾಸಣೆಗೆ ಒಳಪಟ್ಟರು. ರಾಮಕೃಷ್ಣ ಸೇವಾಶ್ರಮದ ವೈದ್ಯಕೀಯ ಮುಖ್ಯಸ್ಥ ಡಾ.ಕಾರ್ಯಪ್ಪ, ವಿವೇಕ ಆಸ್ಪತ್ರೆಯ ಮನೋವೈದ್ಯ ಡಾ. ಸುರೇಶ್ ಭಾರ್ಗವ್ ಮನೋ ತಜ್ಞರದ ಅರವಿಂದ್ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.








