Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*
  • *ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*
  • *ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*
  • *ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*
  • *ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*
  • *ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*
  • *ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*
  • *ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮ : ಕಥೆ ಸರಳವಾಗಿದ್ದರೆ ಎಲ್ಲರನ್ನೂ ತಲುಪುತ್ತದೆ : ಪತ್ರಕರ್ತೆ ಉಷಾ ಪ್ರೀತಮ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮ : ಕಥೆ ಸರಳವಾಗಿದ್ದರೆ ಎಲ್ಲರನ್ನೂ ತಲುಪುತ್ತದೆ : ಪತ್ರಕರ್ತೆ ಉಷಾ ಪ್ರೀತಮ್*

ಮಾರ್ಚ್ 19, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.19 NEWS DESK : ಕಥೆಯ ರಚನೆಯ ಪ್ರಾರಂಭ ನಮ್ಮ ಮನೆಯಲ್ಲಿ ತಾಯಿ ಅಥವಾ ಅಜ್ಜಿ ಅವರು ಹೇಳುವ ಕಥೆಗಳಿಂದ ಪ್ರಾರಂಭವಾಗುತ್ತದೆ. ಅವರು ಹೇಳಿದ ಕಥೆಗಳನ್ನು ನೆನಪಿಸಿಕೊಂಡು ಅವುಗಳನ್ನು ಬರಹ ರೂಪಕ್ಕೆ ಇಳಿಸಿದರೆ, ಅವು ಉತ್ತಮವಾದ ಕತೆಗಳಾಗುತ್ತದೆ. ಎಂದು ಪತ್ರಕರ್ತೆ  ಉಷಾ ಪ್ರೀತಮ್ ನುಡಿದರು.

ಅವರು ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನಡೆದ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿನಿಧಿ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಥಾ ರಚನಾ ಕೌಶಲ್ಯದ ಕುರಿತು ಮಾತನಾಡಿದರು.

ಕಥೆ ಸರಳ ಭಾಷೆಯಲ್ಲಿ ಇರಬೇಕು ಆಗ ಅದು ಎಲ್ಲರ ಮನಸ್ಸನ್ನು ತಲುಪುತ್ತದೆ ಎಂದರು. ಕನ್ನಡದ ಹಲವಾರು ಕಥೆಗಾರರ ಉದಾಹರಣೆಗಳನ್ನು ನೀಡಿದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಶಕ್ತಿ ಪತ್ರಿಕೆ ಸಂಸ್ಥಾಪಕ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಜ್ಞಾಪಕಾರ್ತ ಅವರ ಪುತ್ರ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ  ಬಿ.ಜಿ ಅನಂತಶಯನ ಅವರು ದತ್ತಿ ಸ್ಥಾಪಿಸಿದ್ದು, ಕೊಡಗಿನ ಲೇಖಕರಿಗೆ ಕಥೆ ಬರೆಯುವ ಸ್ಪರ್ಧೆ ಏರ್ಪಡಿಸಿ ಜಯಗಳಿಸಿದವರನ್ನು ಗೌರವಿಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ದತ್ತಿಯನ್ನು ಸ್ಥಾಪಿಸಿದ್ದಾರೆ.  1954ರಲ್ಲಿ ನಂದಾದೀಪ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿ.ಎಸ್.ಗೋಪಾಲಕೃಷ್ಣರವರು ಕೊಡಗಿನ ಪತ್ರಿಕಾ ರಂಗದ ಭೀಷ್ಮ ಎಂದು ಗುರುತಿಸಿಕೊಂಡವರು. ಜಿಲ್ಲೆಯ ಪ್ರಪ್ರಥಮ ದೈನಿಕ ಪತ್ರಿಕೆ ಶಕ್ತಿಯನ್ನು ಪ್ರಾರಂಭಿಸಿದ ಬಿ.ಎಸ್.ಗೋಪಾಲಕೃಷ್ಣ ಕೊಡಗಿನ ಪ್ರಪ್ರಥಮ ಸಂಜೆ ಪತ್ರಿಕೆ ಸಂಧ್ಯಾ ವನ್ನು ಕೂಡ ಪ್ರಾರಂಭಿಸುತ್ತಾರೆ. ಚೇತನ ಎನ್ನುವ ವಾರಪತ್ರಿಕೆಯನ್ನು ಮತ್ತು ಬೆಂಗಳೂರಿನಿಂದ ಶಕ್ತಿ ಹೆಸರಿನ ವಾರಪತ್ರಿಕೆಯನ್ನು ಪ್ರಾರಂಭಿಸಿರುತ್ತಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಹಲವಾರು ಸಾಹಿತ್ಯಿಕ ಕೃತಿಗಳನ್ನು ನೀಡಿರುವ ಗೋಪಾಲಕೃಷ್ಣರವರ ಸಾಹಿತ್ಯ ಸೇವೆ ಮಹತ್ತರವಾದದ್ದು ಎಂದರು.  ಕೊಡಗು ಜಿಲ್ಲೆಯಲ್ಲಿ ಈಗಾಗಲೇ 32 ದತ್ತಿಗಳನ್ನು ಸ್ಥಾಪಿಸಲಾಗಿದ್ದು, ಈ ವರ್ಷ ನೂತನವಾಗಿ  12 ದತ್ತಿ ಸ್ಥಾಪಿಸಲಾಗಿದೆ ಎಂದರು.

 ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ  ಅಳಮೇಂಗಡ ಬೋಸ್ ಮಂದಣ್ಣ  ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವಿದ್ದು, ಹಿಂದೆ ಗೋಣಿಕೊಪ್ಪಲಿನಲ್ಲಿ ನಡೆದ ತಾಲೂಕು ಸಮ್ಮೇಳನದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಬಾಳೆಲೆಯಲ್ಲಿ ಸಮ್ಮೇಳನಗಳನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

         ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿಯ ಮುಕ್ತ ಕಥಾ ಸ್ಪರ್ದೆಯಲ್ಲಿ ಜಿಲ್ಲೆಯ  23 ಕತೆಗಾರರು ಭಾಗವಹಿಸಿದ್ದು ತೀರ್ಪುಗಾರರು ಮೌಲ್ಯಮಾಪನ ಮಾಡಿ ನೀಡಿದ ಪಲಿತಾಂಶದಂತೆ ಪ್ರಥಮ ಸ್ಥಾನವನ್ನು ಪಡೆದ  ಕುಶಾಲನಗರದ ಕುಕ್ಕನೂರು ರೇಷ್ಮಾ ಮನೋಜ್ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ನಾಪೋಕ್ಲಿನ ಮಧುಸೂಧನ್ ಬಿಳಿಗುಲಿ ಅವರನ್ನು ಗೌರವಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು.  ತೃತಿಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್  ಪಡೆದು ಕೊಂಡಿರುತ್ತಾರೆ.

ತೀರ್ಪುಗಾರರಾಗಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಡಾ.ಮುಲ್ಲೆಂಗಡ ರೇವತಿ ಪೂವಯ್ಯ ಮತ್ತು ಬಾಳಲೆ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಚಂದ್ರಶೇಖರ್ ಕಾರ್ಯನಿರ್ವಹಿಸಿದರು.

 ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ  ಚಿಮ್ಮಣಮಾಡ ಕೃಷ್ಣ ಗಣಪತಿ  ಮಾತನಾಡಿ,   ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಹಳ್ಳಿಯ ಮಟ್ಟದಲ್ಲಿ ಹಳ್ಳಿಯ ಶಾಲೆಗಳಲ್ಲಿ ಮಾಡುತ್ತಿರುವುದು ಒಂದು ಉತ್ತಮ ವಿಚಾರ ಎಂದರು. ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಳೇರ ದಯಾ ಚಂಗಪ್ಪ ಮಾತನಾಡುತ್ತಾ ಬಾಳೆಲೆ ಹೋಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸಮಿತಿ ರಚನೆಯ ಬಳಿಕ ಇದು ಮೊದಲ ಕಾರ್ಯಕ್ರಮವಾಗಿದ್ದು, ಇದೇ ರೀತಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಮಾದರಿ ಹೋಬಳಿ ಸಮಿತಿಯನ್ನಾಗಿಸಬೇಕಾಗಿ ಸಲಹೆಯಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಡಿಞಾರಂಡ ಪ್ರಭು ಕುಮಾರ್ ಮಾತನಾಡಿ,  ಬಾಳಲೆ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನ ಶ್ಲಾಘಿಸುತ್ತಾ ಮುಂದೆ ಇದೇ ರೀತಿ ಸಹಕಾರ ನೀಡಬೇಕೆಂದು ಕೋರಿದರು.

 ವೇದಿಕೆಯಲ್ಲಿ ಬಾಳೆಲೆ ಎಜುಕೇಶನ್ ಸೊಸೈಟಿಯ ನಿರ್ದೇಶಕ ಕಿರದಂಡ ದೇವಯ್ಯ, ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯನ್.ಕೆ.ಪ್ರಭು , ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ ವಿ ರಾಮಕೃಷ್ಣ ಮತ್ತು ಶ್ರೀಮತಿ ಶೀಲಾ ಬೋಪಣ್ಣ ಬಾಳೆಲೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಶ್ರೀಮತಿ ಸಿ. ವಿ ಚಂದ್ರಕಲಾ ಉಪಸ್ಥಿತರಿದ್ದರು.     ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ  ಮುಕ್ಕಾಟಿರ ಜಾನಕಿ ಕಾವೇರಪ್ಪ ಸ್ವಾಗತಿಸಿದರು, ಬಾಳೆಲೆಯ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಚಂದ್ರಶೇಖರ್ ಪ್ರಾರ್ಥಿಸಿದರು. ನಿರೂಪಣೆಯನ್ನು ಅದ್ಯಾಪಕರಾದ ಎಂ.ಪಿ. ರಾಘವೇಂದ್ರ, ಬಹುಮಾನ  ವಿವರಣೆಯ ವಿವರವನ್ನು ಉಪನ್ಯಾಸಕರಾದ ಡಿ.ಎನ್ ಸುಬ್ಬಯ್ಯ ನಡೆಸಿಕೊಟ್ಟರು.

ಬಾಲಕಿ ಸೃಷ್ಟಿ ವಿನೋದ್,  ಪೊಡಮಾಡ ಭವಾನಿ, ವತ್ಸಲಾ ನಾರಾಯಣ, ಸಿ.ವಿ.ಚಂದ್ರಕಲಾ‌ ಸಭೆಯಲ್ಲಿ ಹಾಡುಗಳನ್ನು ಹಾಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*

ಮಾರ್ಚ್ 17, 2026

*ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*

ಮಾರ್ಚ್ 17, 2026

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.17 NEWS DESK : ವಿರಾಜಪೇಟೆ ಸಮೀಪದ ಪ್ರಕೃತಿಯ ಸೊಬಗಿನ ನಡುವೆ ‘ಮಳೆ ದೇವರು’ಎಂದು ಹೆಸರುವಾಸಿಯಾಗಿರುವ ಮಲೆ ಮಹದೇಶ್ವರ…

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*

ಮಾರ್ಚ್ 17, 2026

*ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*

ಮಾರ್ಚ್ 17, 2026

*ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*

ಮಾರ್ಚ್ 17, 2026

*ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*

ಮಾರ್ಚ್ 17, 2026

*ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*

ಮಾರ್ಚ್ 17, 2026

*ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*

ಮಾರ್ಚ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.