ಸೋಮವಾರಪೇಟೆ ಮಾ.20 NEWS DESK : ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಬಳಗದ ಅಧ್ಯಕ್ಷ ಹೆಚ್.ಮಂಜುನಾಥ್, ವಿರಕ್ತ ಮಠದ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮಿ, ಬಳಗದ ಜಗನ್ನಾಥ್, ನಿತನ್ ಮಿಟ್ಟು, ಸಂದೀಪ್, ಶರತ್, ಸುಬ್ರಮಣ್ಯ, ರಮೇಶ್, ಎಸ್.ಜೆ.ಎಂ.ಶಾಲೆಯ ಮುಖ್ಯೋಪಾಧ್ಯಾಯ ಮಾರಪ್ಪ ಇದ್ದರು.








