ನಾಪೋಕ್ಲು ಏ.4 NEWS DESK : ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಲಿಯಂಡ .ಎಂ ಹ್ಯಾರಿ ಮಂದಣ್ಣ ಆಯ್ಕೆಯಾಗಿದ್ದಾರೆ.
ಟ್ರಸ್ಟಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಬೊಪ್ಪಂಡ ಎಂ. ಬೋಪಯ್ಯ ನಿಧನರಾದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಸ್ಥಾನಕ್ಕೆ ಶಾಲಾ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಲಿಯಂಡ .ಎಂ ಹ್ಯಾರಿ ಮಂದಣ್ಣ ಅವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ನೆರವಂಡ ಸುನಿಲ್ ದೇವಯ್ಯ, ಕಾರ್ಯದರ್ಶಿಗಳಾಗಿ ನಾಯಕಂಡ ದೀಪಕ್ ಚೆಂಗಪ್ಪ ಆಯ್ಕೆಯಾದರು.
ನಿರ್ದೇಶಕರಗಳಾಗಿ ಕಲ್ಯಾಟoಡ .ಎಂ.ಪೂಣಚ್ಚ , ಮಕ್ಕಿ.ಎಸ್ ಸುಬ್ರಹ್ಮಣ್ಯ, ಬಿದ್ದಾಟoಡ. ಮುತ್ತಣ್ಣ, ಕುಂಬಂಡ ಗಣೇಶ್ , ಬೊಪ್ಪಂಡ ಎಂ.ಕುಶಾಲಪ್ಪ, ಬಿದ್ದಾಟoಡ ಎ. ಪಾಪ ಮುದ್ದಯ್ಯ , ಅಪ್ಪಾರಂಡ ಎಂ. ಅಪ್ಪಯ್ಯ , ಬೊಳ್ಳಚೆಟ್ಟಿರ ಎಂ.ಸುರೇಶ್ ,ಅಪ್ಪಚಟ್ಟೋಳಂಡ ನವೀನ್ ಅಪ್ಪಯ್ಯ , ಕಲಿಯಂಡ ಕೌಶಿಕ್ ಕುಶಾಲಪ್ಪ, ಚೌರಿರ ಎ.ಮಂದಣ್ಣ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.







