ಮಡಿಕೇರಿ ಏ.6 NEWS DESK : ಕೊಡವ ಕೂಟಾಳಿಯಡ ಕೂಟದ ವತಿಯಿಂದ ಏ.7 ರಂದು “ಪೆತ್ತವಡ ಆರೈಕೆ” ಎನ್ನುವ ನೂತನ ಕೊಡವ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯಲಿದ್ದು, ಇದರೊಂದಿಗೆ ಸಂಘಟನೆಯು ಇದುವರೆಗೆ ನಡೆಸಿದ ಕೊಡಗ್’ರ ಚುಪ್ಪಿ ಕೋಗಿಲೆಯ, ಸಮ್ಮಂದ ಅಡ್ಕುವ ಶಿಬಿರದ ಹಾಗೂ ಆಟ್ ಪಾಟ್ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಕೊಡವಾಮೆಲ್ ಪೆತ್ತವಡ ಆರೈಕೆ ಎನ್ನುವ ವಿಷಯದ ಬಗ್ಗೆ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮಂದ ಅಡ್ಕುವ ಪುಸ್ತಕ, ಮತ್ತು ಪೆತ್ತವಡ ಆರೈಕೆ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಇರಲಿದೆ ಎಂದು ಕೂಟದ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































