Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮತ್ತೆ ಮರಳಿ ಬಂದಿದೆ ಯುಗಾದಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮತ್ತೆ ಮರಳಿ ಬಂದಿದೆ ಯುಗಾದಿ

ಏಪ್ರಿಲ್ 8, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

NEWS DESK : ಚೈತ್ರ ಮಾಸದ ಶುಕ್ಲ ಪಕ್ಷ ಪಾಡ್ಯಮಿಯ ಚಾಂದ್ರಮಾನ ಯುಗಾದಿ ಹಬ್ಬ. ಇದು ಉತ್ತರಾಯಣ ಪುಣ್ಯಕಾಲದಲ್ಲಿ ಹೊಸ ವರುಷದ ಪ್ರಾರಂಭದ ದಿನವಾಗಿ ಹಿಂದೂ ಜನಾಂಗ ಬಾಂದವರ ಪವಿತ್ರ ದಿನವಾಗಿದೆ.

ಯುಗಾದಿಯ ಅರ್ಥ ಯುಗದ ಅಧಿ. ಯುಗಾದಿ ಎಂಬ ಪದ ಸಂಸ್ಕೃತ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳಿಂದ ಕೂಡಿದ್ದಾಗಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ ಆದಿ ಎಂದರೆ ಆರಂಭ ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮ ದೇವನು ಸೃಷ್ಟಿಯನ್ನು ಸೃಷ್ಟಿಸಿದ ದಿನ. ಚೈತ್ರ ಶುದ್ಧ ಪಾಡ್ಯದಂದು ಸೂರ್ಯ ಉದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ತಿಂಗಳು, ವರ್ಷ ಇವುಗಳನ್ನು ಆರಂಭಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ವೇದಗಳ ಕಾಲದಿಂದಲು ಈ ಹಬ್ಬದ ಮಹಿಮೆ ಇದೆ (ಎಲ್ಲ ಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಕುರಿತು ಬರೆಯಲಾಗಿದೆ). ಶ್ರೀ ರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪಟ್ಟಾಬೀಷೇಕಾವಾದ ದಿನವೆಂದು ಹೇಳಲಾಗಿದೆ. ಈ ದಿನ ಮಂಗಳಕಾರ್ಯಗಳನ್ನು ಮಾಡಲು ಉತ್ತಮ ದಿನವಾಗಿರುತ್ತದೆ. ಯುಗಾದಿಯನ್ನು ಸೌರಮಾನ ಯುಗಾದಿ ಹಾಗೂ ಚಾಂದ್ರಮಾನ ಯುಗಾದಿ ಹೀಗೆ ಎರಡು ಬಗ್ಗೆಗಳಲ್ಲಿ ಆಚರಣೆ ಮಾಡುವರು. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಾಮಾನ ಯುಗಾದಿ ಎನ್ನುವರು. ಸೂರ್ಯನು ಮೇಷ ರಾಶಿಗೆ (ಬಂದಾಗ) ಸೌರಮಾನ ಯುಗಾದಿ (ವಿಷು) ಎಂದು ಆಚರಣೆ ಮಾಡುತ್ತಾರೆ.

ಹೊಸ ವರ್ಷದ ಪ್ರಾರಂಭದ ಸಡಗರ ಸಂಭ್ರಮ ಎದ್ದು ಕಾಣುತ್ತದೆ. ಮನೆ ಮಂದಿ ಎಲ್ಲ ಬೇಗನೆ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಮನೆಯ ಬಾಗಿಲುಗಳಿಗೆ ತಳೀರು ತೋರಣಗಳನ್ನು ಕಟ್ಟಿ ಅದಕ್ಕೆ ಬೇವಿನ ಸೊಪ್ಪಿನ ಗೊಂಚಲುಗಳನ್ನು ಸಿಕ್ಕಿಸಿ ಕಟ್ಟಿ ಮನೆ ಮುಂದೆ ರಂಗೋಲಿ ಹಾಕಿ ಶೃಂಗಾರ ಮಾಡುತ್ತಾರೆ. ನಂತರ ಮನೆಗಳಲ್ಲಿ ಪೂಜೆ ಮಾಡಿ ತಮ್ಮಿಷ್ಟದ ದೇವಾಲಯಗಳಿಗೆ ತೆರಳಿ ಪೂಜೆಮಾಡುವುದು ವಾಡಿಕೆಯಾಗಿದೆ. ದೇವರ ಪೂಜೆಯ ನಂತರ ಹಿರಿಯರ ಆರ್ಶೀವಾದ ಪಡೆಯುವುದು ವಿವಿಧ ಬಗೆಯ ಸಿಹಿ ಊಟವನ್ನು ತಯಾರು ಮಾಡಿ ಸೇವಿಸುವುದು ಹಬ್ಬದೂಟವಾಗಿದೆ. ಯುಗಾದಿಯ ವಿಶೇಷವಾದ ಬೇವು-ಬೆಲ್ಲದ ಮಿಶ್ರಣವನ್ನು ಸೇವಿಸುವುದು ಮಹತ್ವವಾಗಿದೆ. ಸುಖ-ದುಃಖ, ರಾತ್ರಿ-ಹಗಲು, ಇವು ಬೇವು-ಬೆಲ್ಲದ ಸಂಕೇತವಾಗಿದು ಮನುಷ್ಯನ ಜೀವನದಲ್ಲಿ ಕಷ್ಟ, ಸುಖ, ಒಳಿತು, ಕೆಡುಕು, ಅವಿಬಾಜ್ಯ ಅಂಗಗಳಾಗಿದ್ದು ಇವೆಲ್ಲವನ್ನು ಸಮತೋಲನದೊಂದಿಗೆ ಮನುಷ್ಯ ಬದುಕಬೇಕಿದೆ ಮನುಷ್ಯ ಜೀವನ ಸುಖ, ನೋವು ನಲಿವುಗಳ ಸಮ್ಮಿಶ್ರವಾಗಿದ್ದು ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕಾರ ಮಾಡುವುದೆಂದು, ಯುಗಾದಿಯ ದಿನದಂದು ಬೇವು-ಬೆಲ್ಲವನ್ನು ಸೇವಿಸುವುದು ಆಗಿದೆ. ಬೇವಿನ ಎಲೆ ಸೇವಿಸುವುದು ಆರೋಗ್ಯಕೆ ಒಳಿತು ಅಲ್ಲದೇ ಆಯಸ್ಸು ವೃದ್ಧಿಯಾಗುತ್ತದೆ ಎಂದು ಆರ್ಯುವೇದದಲ್ಲಿ ತಿಳಿಸಲಾಗಿದೆ.

ಇಂದಿನ ಮುಂದುವರೆದ ಆಧುನಿಕ ನಾಗರಿಕತೆಯಿಂದ ನಮ್ಮ ಪುರಾತನ ಆಚಾರ-ವಿಚಾರ ಸಂಸ್ಕೃತಿ ಕಲೆ ಸಾಹಿತ್ಯ, ಇಂದು ಮಾರೆಯಾಗುತ್ತಿರುವುದನ್ನು ನಾವುಗಳು ಕಾಣಬಹುದಾಗಿದೆ. ಹಿಂದು ಸಂಸ್ಕೃತಿಯ ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಆಧಾರ ಸ್ಥಂಬಗಳು ಇವುಗಳನ್ನು ಕಡೆಗಣಿಸಿದೆ ಆಚರಣೆ ಮಾಡುವಂತಹಾಗಬೇಕು ಒಂದೊಂದು ಹಬ್ಬ ಅದರದೇ ಆದ ಹಿನ್ನಲೇ ಹಾಗೂ ವಿಶೇಷತೆಯನ್ನು ಹೊಂದಿದೆ ಅಲ್ಲದೇ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದರು.. ಅವುಗಳನ್ನು ನಾವುಗಳು ಅರ್ಥ ಪೂರ್ಣವಾಗಿ ಆಚರಿಸುವಂತಹಾಗಬೇಕು. ಆಚರಿಸಲು ಪ್ರೇರಣೆ ನೀಡುವಂತಾಗಬೇಕು ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಪದ್ಧತಿಗಳ ಅರಿವಾಗುತ್ತದೆ. ಎಲ್ಲರಿಗೂ ಹೊಸ ವರ್ಷ ಹರುಷ ತರಲಿ ಹೊಸ ವರ್ಷದ ಶುಭಾಶಯಗಳೊಂದಿಗೆ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತದೆ.
ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತ್ತಿದೆ.

ಲೇಖನ : ಪಿ.ಪಿ.ಸುಕುಮಾರ, ಹಾಕತ್ತೂರು 

Follow us Follow us
Share. WhatsApp Facebook Twitter Email Telegram Copy Link

Related Posts

ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

ಅಕ್ಟೋಬರ್ 22, 2026

ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ : ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ

ಅಕ್ಟೋಬರ್ 22, 2026

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ : ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ

ಅಕ್ಟೋಬರ್ 22, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.22 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ…

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.