ಮಡಿಕೇರಿ ಏ.11 NEWS DESK : ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಶ್ರೀ ಬೇಟೆಗಾರ ದೇವಾಲಯದ ವಾರ್ಷಿಕ ಉತ್ಸವವು ಏ.13 ಮತ್ತು 14 ರಂದು ನಡೆಯಲಿದೆ.
ಏ.13 ರಂದು ಪಟ್ಟಣಿ ಹಬ್ಬ, ರಾತ್ರಿ ಹತ್ತು ಗಂಟೆಗೆ ಬೊಳ್ಳಾಟ ನೆರವೇರಲಿದೆ. ಏ.14 ರಂದು ಬೆಳಗ್ಗೆ 10 ಗಂಟೆಗೆ ದೇವರ ಕೋಲ ಹಾಗೂ ಮಧ್ಯಾಹ್ನ 3 ಗಂಟೆಗೆ ಎತ್ತು ಪೋರಾಟ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.







