
ಮಡಿಕೇರಿ ಏ.12 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಏ.13 ರಿಂದ 17 ರವರೆಗೆ 85 ವರ್ಷ ಮೇಲ್ಪಟ್ಟ ಹಿರಿಯನಾಗರೀಕ ಮತದಾರರು ಹಾಗೂ ಶೇ.40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ವಿಶೇಷ ಚೇತನ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಎಲೆಕ್ಟಾನ್ ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಿ, ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಹೋಂ ವೋಟಿಂಗ್ ನಡೆಯುವ ದಿನಾಂಕಗಳು: ಮಡಿಕೇರಿಯಲ್ಲಿ(208) ಏ.15 ರಿಂದ 17 ರವರೆಗೆ, ವಿರಾಜಪೇಟೆ(209) ಏ.15 ರಿಂದ 17ರವರೆಗೆ, ಪಿರಿಯಾಪಟ್ಟಣ(210) ಏ.14 ರಿಂದ 15ರವರೆಗೆ, ಹುಣಸೂರು(212) ಏ.15 ರಿಂದ 16ರವರೆಗೆ, ಚಾಮುಂಡೇಶ್ವರಿ(215) ಏ.13 ರಿಂದ 14ರವರೆಗೆ, ಕೃಷ್ಣರಾಜ(216) ಏ.13 ರಿಂದ 14ರವರೆಗೆ, ಚಾಮರಾಜ(217) ಏ.14 ರಿಂದ 15 ಹಾಗೂ ನರಸಿಂಹರಾಜ(218)ದಲ್ಲಿ ಏ.13 ರಿಂದ 14 ರವರೆಗೆ ಹೋಮ ವೋಟಿಂಗ್ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







