
ಮಡಿಕೇರಿ ಏ.15 NEWS DESK : ಕಾಂತೂರು-ಮೂರ್ನಾಡು ಶ್ರೀಪನ್ನಂಗಾಲ ದೇವಿಯ ವಾರ್ಷಿಕೋತ್ಸವವು ಏ.18 ಮತ್ತು 19 ರಂದು ನಡೆಯಲಿದೆ.
ಏ.18 ರಂದು ಬೆಳಿಗ್ಗೆ ದೇವರ ಶುದ್ಧ, ಕಳಸ ಪೂಜೆ, ಕೆರೆ ಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಹಾಗೂ ಸಂಜೆ 7 ಗಂಟೆಗೆ ಕುರುಂದ ಬಾರಣಿ ಜರುಗಲಿದೆ.
ಏ.19 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಚಾಮುಂಡಿ ಉತ್ಸವ, ಕುರುಂದಾಟ ದೇವರ ಜಳಕ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಹಾಗೂ ತಕ್ಕ ಮುಖ್ಯಸ್ಥರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.








