
ಸುಂಟಿಕೊಪ್ಪ ಏ.15 NEWS DESK : ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಗದ್ದೆಹಳ್ಳ, ಕೆದಕಲ್, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ಮಾದಾಪುರ, ಗರಗಂದೂರು ಇನ್ನಿತರ ಕಡೆಗಳಲ್ಲಿ ಹಿಂದೂ ಮಲಯಾಳಿ ಭಾಂದವರು ಬಿಶು ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕೇರಳದಲ್ಲಿ ಸಂಭ್ರಮದಿಂದ ಆಚರಿಸುತ್ತಿರುವ ಬಿಶು ಹಬ್ಬವನ್ನು ಕೊಡಗಿನ ಹಿಂದೂ ಮಲಯಾಳಿ ಭಾಂದವರು ಸಂಭ್ರಮದಿಂದ ಆಚರಿಸುತ್ತಾರೆ. ದವಸ ದಾನ್ಯ ಹೂ ಹಣ್ಣು ಹಂಪಲು (ಕಣಿ) ಹಳದಿ ಬಣ್ಣದ ಬಿಶು ಪುಷ್ಪ ಇರಿಸಿ ಬಿಶು ಹಬ್ಬ ದೇವರನಾಡು ಕೇರಳದಲ್ಲಿ ಹಿಂದೂ ಮಲಯಾಳಿ ನೆಲೆಸಿರುವ ಎಲ್ಲಾ ರಾಜ್ಯ ಹಾಗೂ ವಿದೇಶಗಳಲ್ಲೂ ಬಿಶು ಹಬ್ಬವನ್ನು ಆಚರಿಸುತ್ತಾರೆ.
ಸುಂಟಿಕೊಪ್ಪ ಸುರೇಶ್ ಗೋಪಿ ಮನೆಯಲ್ಲಿ ಫಲಪುಷ್ಪಗಳನ್ನು ಇರಿಸಿ ಪೂಜೆಯನ್ನು ಸಲ್ಲಿಸಿದರು. ಹಿಂದೂ ಮಾಲಯಾಳಿಗಳ ಮನೆಂiÀಲ್ಲಿ ದವಸ ಧಾನ್ಯ, ಹೂ ಹಣ್ಣು ಹಂಪಲು (ಕಣಿ) ಹಳದಿ ಬಣ್ಣದ ಬಿಶು ಪುಷ್ಪ ಇರಿಸಿ ಬಿಶು ಹಬ್ಬ ಬರಚಿಸಿ ಹೊಸ ಬಟ್ಟೆ ಧರಿಸಿ ಇನ್ನಿತರ ತರಕಾರಿಗಳಿಂದ ತಯಾರಿಸಿದ ಭಕ್ಷ ಬೋಜನ ಸವಿಯುವುದು ಬಿಶು ಹಬ್ಬದ ವಿಶೇಷವಾಗಿದೆ.






