
ಕುಶಾಲನಗರ NEWS DESK ಏ.15 : ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2024-25 ನೇ ಸಾಲಿಗೆ ಪ್ರಥಮ ಬಿ.ಎ. ಬಿ.ಕಾಂ, ಬಿಸಿಎ, ಮತ್ತು ಬಿಬಿಎ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಏಪ್ರಿಲ್ 20 ರಿಂದ ಕಾಲೇಜಿನ ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಪ್ರವೇಶ ಪಡೆಯಬಹುದು. ಕಾಲೇಜಿನಲ್ಲಿ ಎಲ್ಲಾ ವಿಷಯಗಳಿಗೂ ಪೂರ್ಣಕಾಲಿಕ ಅಧ್ಯಾಪಕರುಗಳು , ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರನ್ನು ಒಳಗೊಂಡಿದ್ದು, ಕಾಲೇಜಿನಲ್ಲಿ ಸರ್ಕಾರದ ಸೌಲಭ್ಯಗಳಾದ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಹಾಸ್ಟೆಲ್ ವ್ಯವಸ್ಥೆ ಲಭ್ಯವಿದೆ. ಇದರೊಂದಿಗೆ ಡಿಜಿಟಲ್ ಗ್ರಂಥಾಲಯ, ಸುಸಜ್ಜಿತವಾದ ಕ್ರೀಡಾ ಮೈದಾನ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ,ಮನೋರಂಜನ ಕಾರ್ಯಕ್ರಮಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ. ಸಂಖ್ಯೆ +91 94804 48000, +919663557448, +919844897554 ಅನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಪ್ರವೀಣ್ ಕುಮಾರ್ ಅವರು ತಿಳಿಸಿದ್ದಾರೆ.








