
ನಾಪೋಕ್ಲು ಏ.17NEWS DESK : ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಪಂದ್ಯಗಳಲ್ಲಿ ಬಿದ್ದಂಡ, ಚೋಯಮಾದಂಡ, ಕುಲ್ಲಚಂಡ, ಪಾಡೆಯಂಡ, ಮೇರಿಯಂಡ, ಕರಿನೆರವಂಡ ತಂಡಗಳು ಮುನ್ನಡೆ ಸಾಧಿಸಿದವು.
ದಿನದ ಮೊದಲ ಪಂದ್ಯದಲ್ಲಿ ಬಿದ್ದಂಡ ಮೇಕೆರಿರ ವಿರುದ್ಧ 1-0 ಅಂತರದ ಜಯಗಳಿಸಿದರೆ ಚೋಯ ಮಾಡಂಡ ಪಟ್ಟಡ ವಿರುದ್ಧ -1 0 ಅಂತರದ ಜಯ ಗಳಿಸಿತು. ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ನಂತರ ನಡೆದ ಟೈ ಬ್ರೇಕರ್ ನಲ್ಲಿ ಕುಲ್ಲಚಂಡ 6-5 ರ ಮುನ್ನಡೆಯೊಂದಿಗೆ ಮುಂದಿನ ಸುತ್ತು ಪ್ರವೇಶಿಸಿತು.ಮಲ್ಲಂಗಡ ಮತ್ತು ಪಾಡೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಡೆಯಂಡ 5-1 ರ ಮುನ್ನಡೆ ಸಾಧಿಸಿತು ಮೇರಿಯಂಡ ಕೋಟೆರ ವಿರುದ್ಧ 2-1ಅಂತರದ ಜಯಗಳಿಸಿದರೆ ಕರಿನೆರವಂಡ ಮಲ್ಲಮಾಡ ವಿರುದ್ಧ 3-0 ಅಂತರದ ಜಯಗಳಿಸಿತು. ಬೊಟ್ಟೋಳಂಡ ಚೊಟ್ಟೇರ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿತು.ಬೊವ್ವೇರಿಯಂಡ ಚಿಮ್ಮಣಮಾಡ ವಿರುದ್ಧ 3-1ರ ಅಂತರದಿಂದ ನೆರವಂಡ ಕೊಂಗಂಡ ವಿರುದ್ಧ 1-0 ಅಂತರದಿಂದ, ಅಪ್ಪನೆರವಂಡ ಗಂದಂಗಡ ವಿರುದ್ಧ 4 -1 ಅಂತರದಿಂದ ಗೆಲುವು ಸಾಧಿಸಿತು.ಕಲಿಯಂಡ ಮಂಡೀರ (ನೆಲಜಿ) ವಿರುದ್ಧ 4-0 ಅಂತರದಿಂದ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಇಂದಿನ ಪಂದ್ಯಗಳು ::
ಮೈದಾನ.-1
9 ಗಂಟೆಗೆ. ಸಣ್ಣುವಂಡ-ಐಚಂಡ
10 ಗಂಟೆಗೆ. ಮುದ್ದಂಡ-ಚೇಂದೀರ
11 ಗಂಟೆಗೆ . ಕೊಲ್ಲಿರ-ಮುಂಡಚಾಡೀರ
2 ಗಂಟೆಗೆ . ಪಳಂಗಂಡ-ಕಡೇಮಾಡ
3 ಗಂಟೆಗೆ. ಮೇರಿಯಂಡ-ಬಾರಿಯಂಡ
ಮೈದಾನ -2
9 ಗಂಟೆಗೆ. ಕುಟ್ಟಂಡ-ಕನ್ನಂಡ
10 ಗಂಟೆಗೆ. ಸೋಮೇಯಂಡ-ಮಾತಾರಂಡ
1 ಗಂಟೆಗೆ . ತೀತಿಮಾಡ-ನಂಬುಡಮಾಡ
2 ಗಂಟೆಗೆ. ನಾಪಂಡ-ಮನೆಯಪಂಡ
ವರದಿ : ದುಗ್ಗಳ ಸದಾನಂದ.







