
ಮಡಿಕೇರಿ ಏ.20 NEWS DESK : ನಗರದ ಕನ್ನಂಡ ಬಾಣೆಯ ಶ್ರೀ ದೃಷ್ಠಿ ಗಣಪತಿ ದೇವಾಲಯದ 20ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಏ.22 ಮತ್ತು 23 ರಂದು ನಡೆಯಲಿದೆ.
ದೇವಾಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿದೆ.
ಏ.22 ರಂದು ಸಂಜೆ 6 ಗಂಟೆಗೆ ವಾಸ್ತು ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಪ್ರಸಾದ ಶುದ್ಧಿ, ಸುದರ್ಶನ ಹೋಮ, ತೀರ್ಥ ಪ್ರಸಾದ ಹಾಗೂ ಅನ್ನದಾನ ನಡೆಯಲಿದೆ.
ಏ.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಮೂಹಿಕ ಗಣಹೋಮ, ಆಶ್ಲೇಷಬಲಿ, ಕಲಶಪೂಜೆ, ನಾಗತಂಬಿಲ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9449292643, 9036082678, 9945459189 ಸಂಪರ್ಕಿಸಬಹುದಾಗಿದೆ.










