

ಸುಂಟಿಕೊಪ್ಪ ಮೇ 10 NEWS DESK : ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಸುಂಟಿಕೊಪ್ಪ ಹೋಬಳಿ ಪ್ರೌಢಶಾಲೆಯ ವಿದ್ಯಾರ್ಧಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 84 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ್ತ ಶ್ರೇಣಿಯಲ್ಲಿ 21 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 57 ಹಾಗೂ ದ್ವಿತೀಯ ಶ್ರೇಣಿಯಲ್ಲಿ 6 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಪಿ.ಡಿ.ಡಿಲಿಶಾ ಮುತ್ತಮ್ಮ 608 ಅಂಕಗಳಿಸಿ ಶೇ. 97.28 ಅಂಕಗಳನ್ನು ಗಳಿಸಿದ್ದು, ದ್ವಿತೀಯ ಸ್ಥಾನದಲ್ಲಿ ನಿಶ್ಮಿತಾ 597 ಅಂಕಗಳಿಸಿ ಶೇ. 95.52 ಅಂಕಗಳನ್ನು ಗಳಿಸಿದ್ದಾರೆ, ಆಯುಶ್ ಗೌಡ ಶೇ.93.28 ಅಂಕಗಳೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಸಂತಮೇರಿ 92 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ ಓರ್ವ ಬಾಲಕ, 5 ಮಂದಿ ಬಾಲಕಿಯರು ಒಟ್ಟು 6 ಮಂದಿ ತೇರ್ಗಡೆಗೊಂಡರೇ, ಪ್ರಥಮ ಶ್ರೇಣಿಯಲ್ಲಿ 27 ಮಂದಿ ಬಾಲಕರು, 25 ಮಂದಿ ಬಾಲಕಿಯರು ಸೇರಿ ಒಟ್ಟು 52 ತೇರ್ಗಡೆಗೊಂಡಿದ್ದಾರೆ.
ದ್ವಿತೀಯ ಶ್ರೇಣಿಯಲ್ಲಿ 19 ಮಂದಿ ಬಾಲಕರು 5 ಮಂದಿ ಬಾಲಕಿಯರು ತೇರ್ಗಡೆಗೊಂಡಿದ್ದು, ತೃತೀಯ ಶ್ರೇಣಿಯಲ್ಲಿ 9 ಮಂದಿ ಬಾಲಕರು, ಓರ್ವ ಬಾಲಕಿ ತೇರ್ಗಡೆಗೊಂಡಿದ್ದಾರೆ. ಈ ಪೈಕಿ ಲೋಹಿತ್ ಆರ್. 577 ಶೇ. 92.32, ಶಿಫಾ.ಎಸ್. 560 89.60, ಜಿ.ಪೂಜಿತ ಪೂಜಾರಿ ಶೇ.88.80 ಅಂಕಗಳೊಂದಿಗೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 40 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಉನ್ನತ ಶ್ರೇಣಿಯಲ್ಲಿ 7 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 13 ಮಂದಿ, ದ್ವಿತೀಯ ಶ್ರೇಣಿಯಲ್ಲಿ 15 ಮಂದಿ, ತೃತೀಯ ಶ್ರೇಣಿಯಲ್ಲಿ 4 ಮಂದಿ ಉತ್ತೀರ್ಣರಾಗಿದ್ದು, ಒಟ್ಟು 39 ಮಕ್ಕಳು ಉತ್ತೀರ್ಣರಾಗುವುದರೊಂದಿಗೆ ಶೇಕಡ 98 ಪಡೆದುಕೊಂಡಿತು.
ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ 28 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಪ್ರಥಮ ಶ್ರೇಣಿಯಲ್ಲಿ 14 ಮಂದಿ,ದ್ವಿತೀಯ ಶ್ರೇಣಿಯಲ್ಲಿ 8 ಮಂದಿ, ತೃತೀಯ ಶ್ರೇಣಿಯಲ್ಲಿ 06 ಮಂದಿ ಉತ್ತೀರ್ಣಗೊಂಡಿದ್ದಾರೆ. ಅತ್ಯುನ್ನತ್ತ ಶ್ರೇಣಿಯನ್ನು ಓರ್ವ ವಿದ್ಯಾರ್ಥಿನಿ 1 ಮಂದಿ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.
7ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ 21 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 20 ಉತ್ತೀರ್ಣಗೊಂಡಿದ್ದು, ಶೇ. 95.23% ಫಲಿತಾಂಶ ಪಡೆದುಕೊಂಡಿದೆ. ಕಾನ್‍ಬೈಲ್ ಸರಕಾರಿ ಪ್ರಾಢಶಾಲೆ ಹತ್ತನೇ ತರಗತಿಯಲ್ಲಿ 12 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.








