
ಸಿದ್ದಾಪುರ ಮೇ 10 NEWS DESK : ಮಾಲ್ದಾರೆಯ ಬಾಡಗ ಬಾಣಂಗಾಲದ ಜನತಾ ಕಾಲೋನಿಯ ಶ್ರೀ ಅನಂತನಾಗ ದೇವಾಲಯದ 16ನೇ ವರ್ಷದ ವಾರ್ಷಿಕ ಪೂಜೆ ಇಂದು ಸಂಜೆ (ಮೇ 10) ಹಾಗೂ ಮೇ 11 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮೇ 11 ರಂದು ಬೆಳಗ್ಗೆ 7.30ಕ್ಕೆ ಪಂಚಗವ್ಯ, ಬಿಂಬಶುದ್ಧಿ, ಗಣಹೋಮ, 8 ಗಂಟೆಗೆ ಆಶ್ಲೇಷ ಬಲಿ, ಆಶ್ಲೇಷ ಹೋಮ, 10.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ತೀರ್ಥ ಪ್ರಸಾದ ಹಾಗೂ ಹರಕೆ ಮತ್ತು ವಿಶೇಷ ಪೂಜೆಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.








