
ಮಡಿಕೇರಿ ಮೇ 11 NEWS DESK : ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರ ಮೇಕೇರಿ ಮಸೀದಿಯ ಮಖಾಂ ಉರೂಸ್ ಶ್ರದ್ಧಾಭಕ್ತಿಯಿಂದ ನಡೆಯಿತು.
ಜನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ ನೆರವೇರಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಮಖಾಂ ಝಿಯಾರತ್, ರಾತ್ರಿ ಧಾರ್ಮಿಕ ಉಪನ್ಯಾಸ ನಡೆಯಿತು.
ಐದು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ, ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರ, ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, ಸಂದಲ್ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಕಾರ್ಯಕ್ರಮದಲ್ಲಿ ಧಾರ್ಮಿಕ ನೇತರರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.









