ಹುಣುಸೂರು ಮೇ 31 NEWS DESK : ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವನ್ನು ಹುಣುಸೂರು ಪೊಲೀಸರು ಬೇಧಿಸಿದ್ದಾರೆ. ಸುಮಾರು 40 ಗೋವುಗಳನ್ನು ರಕ್ಷಿಸಿರುವ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಹುಣಸೂರು ತಾಲ್ಲೂಕಿನ ರತ್ನಪುರಿಯ ಮನೆಯೊಂದರ ಪಕ್ಕದ ಗೋದಾಮಿನಲ್ಲಿ ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ತುಂಬಿದ್ದ ಹಾಲಿನ ವಾಹನ ಸೇರಿದಂತೆ ಮೂರು ಗೋಡ್ಸ್ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಹುಣಸೂರು ನಗರ ಠಾಣಾಧಿಕಾರಿಗಳಾದ ಸಂತೋಷ್ ಕಶ್ಯಪ್, ರಾಮಚಂದ್ರನಾಯ್ಕ, ಅಚ್ಚುತ್ತನ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು.








