
ಮಡಿಕೇರಿ ಜೂ.24 NEWS DESK : ಬೆಳಕು ಟ್ರಸ್ಟ್ ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಮೂಕಳೇರ ಟೈನಿ ಪೂಣಚ್ಚ (ತಾಮನೆ ಮುಕ್ಕಾಟೀರ ನಾಲ್ಕೇರಿ) ಅವರ ಸಾಹಿತ್ಯ ಸೇವೆಗಾಗಿ ರಾಷ್ಟ್ರ ಮಟ್ಟದ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.








