
ವಿರಾಜಪೇಟೆ ಜೂ.24 NEWS DESK : ವಿರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗೋಣಿಕೊಪ್ಪಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಹೊಸೂರು ಶ್ರೀ ಮಹದೇಶ್ವರ ದೇವಾಲಯದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.
ದೇವಾಲಯದ ಹೊರ ಆವರಣದಲ್ಲಿ ತಂಡದ ಸ್ವಯಂ ಸೇವಕರು ಹಣ್ಣಿನ ಗಿಡಗಳು ಮತ್ತು ಇತರ ಮರಗಳ ಗಿಡಗಳನ್ನು ನೆಟ್ಟರು.
ಈ ಸಂದರ್ಭ ಕೃಷಿ ಅಧಿಕಾರಿಗಳಾದ ಹರೀಶ್, ವೇಣು ಮಂದಣ್ಣ ಮತ್ತು ಸ್ವಯಂ ಸೇವಕರಾದ ಜಯಪ್ರಕಾಶ್, ಅಭಿಷೇಕ್, ದಿನೇಶ್, ತೀರ್ಥಕುಮಾರ್, ಕಿರಣಕುಮಾರ್, ಪದ್ಮ, ಗೌರಿ, ಅವ್ವಿ, ಚಂದ್ರು, ಸಂದೀಪ್ ಹಾಜರಿದ್ದರು.








