Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*
  • *ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*
  • *ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*
  • *ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*
  • *ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*
  • *ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*
  • *ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*
  • *ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೋಟರಿ ಮಿಸ್ಟಿ ಹಿಲ್ಸ್ ನಿಂದ ವಿನೂತನವಾಗಿ ಕಾಗಿ೯ಲ್ ವಿಜಯ್ ದಿವಸ್ ಆಚರಣೆ : ಬೆಳಗಿದ 527 ಹಣತೆಗಳು, ಮೊಳಗಿದ ದೇಶಭಕ್ತಿಗೀತೆ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೋಟರಿ ಮಿಸ್ಟಿ ಹಿಲ್ಸ್ ನಿಂದ ವಿನೂತನವಾಗಿ ಕಾಗಿ೯ಲ್ ವಿಜಯ್ ದಿವಸ್ ಆಚರಣೆ : ಬೆಳಗಿದ 527 ಹಣತೆಗಳು, ಮೊಳಗಿದ ದೇಶಭಕ್ತಿಗೀತೆ* 

ಜುಲೈ 27, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.27 NEWS DESK : ಕಾಗಿ೯ಲ್ ಕದನದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 527 ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾಗಿ೯ಲ್ ವಿಜಯ ದಿನವನ್ನು ಭಾವನಾತ್ಮಕಾಗಿ ಆಚರಿಸಲಾಯಿತು.
ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ  ಸಾವ೯ಜನಿಕರೂ ಸೇರಿದಂತೆ ರೋಟರಿ ಸದಸ್ಯರು 527 ಹಣತೆಗಳನ್ನು ಬೆಳಗಿಸಿದರು, ಕಾಗಿ೯ಲ್ ಸಮರದಲ್ಲಿ ಭಾರತದ ಹೆಮ್ಮೆಯ 527 ಯೋಧರು 25 ವಷ೯ಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು, ಈ ಯೋಧರ ತ್ಯಾಗಬಲಿದಾನದ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು  ರೋಟರಿ  ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು.
ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಮಡಿಕೇರಿಯ  ಮದ್ರಾಸ್ ರೆಜಿಮೆಂಟ್ ನಲ್ಲಿ 22 ವಷ೯ಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್ ಗಳನ್ನು ಪಡೆದು  ಸೇನೆಯಿಂದ ನಿವೖತ್ತರಾದ  ಸೇನಾಧಿಕಾರಿ ಬಿ,ಕೆ, ಲೋಕೇಶ್ ಮತ್ತು ಪತ್ನಿ  ಕಲ್ಪನ ಲೋಕೇಶ್  ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.
ಸನ್ಮಾನಿತರಾದ ಲೋಕೇಶ್ ಮಾತನಾಡಿ, ನಿವೖತ್ತಿ ನಂತರವೂ ಸಮಾಜದಲ್ಲಿ ಗೌರವವನ್ನು ಸದಾ ಕಾಲ ಪಡೆಯುವ ಸ್ಥಾನ ಎಂದರೆ ಅದು ಯೋಧನದ್ದಾಗಿದೆ, ಸೈನ್ಯದಲ್ಲಿ ಅನೇಕ ವಷ೯ಗಳ ಕಾಲ ದೇಶರಕ್ಷಣೆಯ ಕತ೯ವ್ಯ ನಿವ೯ಹಿಸಿ ನಿವೖತ್ತರಾಗಿ ತವರು ನೆಲಕ್ಕೆ ಬಂದು ನೆಲಸಿದ ಸಂದಭ೯ ಸಂಘಸಂಸ್ಥೆಗಳು ಅಂಥ ಯೋಧರನ್ನು ಗುರುತಿಸಿ ಗೌರವಿಸುವ  ಪರಂಪರೆ ಶ್ಲಾಘನೀಯ, ಯೋಧನ ಮನತೃಪ್ತಿಗೂ ಇಂಥ ಸನ್ಮಾನ ಕಾರಣವಾಗುತ್ತದೆ ಎಂದರು.  ಮುಂದಿನ ಜನ್ಮಗಳಲ್ಲಿಯೂ ತನ್ನನ್ನು ಸೈನಿಕನನ್ನಾಗಿ ಮಾಡು ಎಂದು ದೇವರಲ್ಲಿ ಕೋರುವುದಾಗಿ ಹೇಳಿದ ಲೋಕೇಶ್, ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ದೇಶಸೇವೆಯ ಸ್ಮರಣೆಯಲ್ಲಿ ತನ್ನ ಮಕ್ಕಳಿಗೂ ಕಾಯ೯ಪ್ಪ, ತಿಮ್ಮಯ್ಯ ಎಂದೇ ಹೆಸರಿಟ್ಟಿರುವುದಾಗಿ ಹೇಳಿದರು.

ಯೋಧರನ್ನು ಗೌರವಿಸಿ ::  ಕಾಗಿ೯ಲ್ ಕದನದಲ್ಲಿ ವೀರಮರಣವನ್ನಪ್ಪಿದ ಮನೋಜ್ ಕುಮಾರ್ ಭಾಟಿಯಾ ಬಗ್ಗೆ ಮನಸೆಳೆಯುವಂತೆ ಮಾತನಾಡಿದ ಸುಂಟಿಕೊಪ್ಪದ 9ನೇ ತರಗತಿ ವಿದ್ಯಾಥಿ೯ನಿ ಶ್ರೀಷ, ಭಾರತೀಯ ಯೋಧರ ತ್ಯಾಗಬಲಿದಾನಕ್ಕೆ ಮೌಲ್ಯ ಕಟ್ಟಲಾಗದು, ಅವರ ಹೋರಾಟ, ಕತ೯ವ್ಯ ನಿಷ್ಟೆ ಊಹೆಗೂ ನಿಲುಕದ್ದು ಎಂದರಲ್ಲದೇ, ಸೈನಿಕರು ಅಥವಾ ಮಾಜಿ ಸೈನಿಕರನ್ನು ಕಂಡಾಗ ಅವರಿಗೆ ನಮಸ್ಕರಿಸುವ ಮೂಲಕ ದೇಶಸೇವೆ ನಿಟ್ಟಿನಲ್ಲಿ ಅವರ ಕತ೯ವ್ಯ ಸ್ಮರಿಸುವಂತೆ  ಮಾಡುವುದೇ ಯೋಧರಿಗೆ ನಾವು ಸಲ್ಲಿಸುವ ಮನಪೂವ೯ಕ ಕೖತಜ್ಞತೆಯಾಗಿದೆ ಎಂದರು.

ಮನಸೆಳೆದ ದೇಶಭಕ್ತಿಗೀತೆಗಳು ::  ಕಾಗಿ೯ಲ್ ವಿಜಯ ದಿನದ ಅಂಗವಾಗಿ ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ , ಸಂಧ್ಯಾ ಚಿದ್ವಿಲಾಸ್ ಅವರು ಕಾಯ೯ಕ್ರಮದಲ್ಲಿ ಹಾಡಿದ  ರಾಷ್ಟ್ರದೇವಗೆ, ಪ್ರಾಣದೀವಿಗೆ, ಸೇವೆಯಾಗಲಿ ನಾಡಿಗೆ ಎಂಬ  ದೇಶ ಭಕ್ತಿಗೀತೆ ಮನಸೆಳೆಯಿತು.  ಭಾರತೀಯ ಯೋಧರ ತ್ಯಾಗಬಲಿದಾನ, ಶೌಯ೯ದ ಪ್ರತೀಕವಾಗಿದ್ದ ಈ ಹಾಡಿಗೆ ಪ್ರೇಕ್ಷಕರು ತಲೆದೂಗಿದರು, ಇದೇ ಕಾಯ೯ಕ್ರಮದಲ್ಲಿ ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ    ವಿದ್ಯಾಥಿ೯,  ವಿದ್ಯಾಥಿ೯ನಿಯರು ಅನೇಕ ದೇಶಭಕ್ತಿಗೀತೆಗಳನ್ನು ಉಪನ್ಯಾಸಕಿ ಕೆ.ಜಯಲಕ್ಷ್ಮಿ ಮಾಗ೯ದಶ೯ನದಲ್ಲಿ ಹಾಡಿ ಗಮನ ಸೆಳೆದರು.  5 ವಷ೯ದ ಮಿನುಗು ಭಾರತದ ತಿರಂಗದ ಮಹತ್ವದ ಬಗ್ಗೆ ತೊದಲು ನುಡಿಯಲ್ಲಿಯೇ ಹಾಡಿ ಮೆಚ್ಚುಗೆ ಗಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧು, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ವಲಯ ಸೇನಾನಿ ಅನಿತಾಪೂವಯ್ಯ, ಕಾಯ೯ಕ್ರಮ ಸಂಚಾಲಕ  ಅನಿಲ್ ಹೆಚ್.ಟಿ.,ಪ್ರಮುಖರಾದ ಬಿ.ಜಿ.ಅನಂತಶಯನ, ಕೇಶವಪ್ರಸಾದ್ ಮುಳಿಯ, ಡಾ.ಚೆರಿಯಮನೆ ಪ್ರಶಾಂತ್, ಕೆ.ಕೆ.ವಿಶ್ವನಾಥ್,  ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆಯ ಅಧಿಕಾರಿ ಚಿನ್ನಸ್ವಾಮಿ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಮುರಳೀಧರ್, ಯೋಗ ಗುರು ಕೆ.ಕೆ.ಮಹೇಶ್  ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ  ಎಸ್.ಸಿ.ಸತೀಶ್, ಸದಸ್ಯೆ ಸಬಿತಾ, ಸ್ಕೌಟ್ ಮತ್ತು ಗೌಡ್ಸ್ ನ ಸಂಚಾಲಕ ರಂಜಿತ್, ರಮೇಶ್ ಹೊಳ್ಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಕಾಯ೯ಕ್ರಮದಲ್ಲಿ ಪಾಲ್ಗೊಂಡವರು ಕಾಗಿ೯ಲ್ ಸಮರದ ಹುತಾತ್ಮರ ಸ್ಮರಣೆಯಲ್ಲಿ 527 ಹಣತೆಗಳನ್ನು ಬೆಳಗಿಸುವ ಮೂಲಕ ಭಾವನಾತ್ಮಕವಾಗಿ ಯೋಧಪರಿವಾರಕ್ಕೆ ಗೌರವ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ…

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*

ಮಾರ್ಚ್ 29, 2026

*ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*

ಮಾರ್ಚ್ 29, 2026

*ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.