Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಂಬೂರುವಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ (ಕೋಲ)*
  • *ನೆಲ್ಯಹುದೀಕೇರಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ* 
  • *ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ : ಶಾಂತಮಲ್ಲಿಕಾರ್ಜುನ ಶ್ರೀಗಳಿಗೆ ಆಹ್ವಾನ*
  • *ಬೆನೆಡಿಕ್ಟ್ ಆರ್ ಸಲ್ಡಾನ ಅವರಿಗೆ ಬೀಳ್ಕೊಡುಗೆ*
  • *ವಿರಾಜಪೇಟೆ ಕಾವೇರಿ ಕಾಲೇಜಿನ ಪದವಿ ವಿಭಾಗದ ನೂತನ ಪ್ರಾಂಶುಪಾಲರಾಗಿ ಡಾ.ಕುಪ್ಪಂಡ ವೀಣಾ ಅಧಿಕಾರ ಸ್ವೀಕಾರ*
  • *ಸರ್ಕಾರ ಗ್ರಾ.ಪಂ ಅಭಿವೃದ್ಧಿಗೆ ನೀಡಿರುವ ಅಧಿಕಾರ ಚಲಾಯಿಸಿ : ಡಿ.ಆರ್.ಪಾಟೀಲ*
  • *ಮೇ 5 ರಂದು ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ*
  • *ಮೇ 16 ಮತ್ತು 17 ರಂದು ಮಡಿಕೇರಿಯಲ್ಲಿ ಕುಲಾಲ-ಕುಂಬಾರ ಬಾಂಧವರ ಕ್ರೀಡೋತ್ಸವ ಮತ್ತು ಸಮ್ಮಿಲನ*
  • *ಗೌಡ ಕುಟುಂಬಗಳ “ಕುಟುಂಬ-2026” ಪಂದ್ಯಾವಳಿ ಆರಂಭ*
  • *ಕೊಡಗು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ : ಸಮುದಾಯ ಬಾಂಧವರ ಒಗ್ಗಟ್ಟಿಗೆ ಗಣ್ಯರ ಕರೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಿಎನ್‌ಸಿ ಯಿಂದ 29ನೇ ವರ್ಷದ “ಕಕ್ಕಡ-18” ಆಚರಣೆ : ಕೊಡವರ ಉಳಿವಿಗಾಗಿ ಕೊಡವಲ್ಯಾಂಡ್ ಹೋರಾಟಕ್ಕೆ ಬೆಂಬಲ ಅಗತ್ಯ : ವಿಹೆಚ್‌ಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪ್ರತಿಪಾದನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಿಎನ್‌ಸಿ ಯಿಂದ 29ನೇ ವರ್ಷದ “ಕಕ್ಕಡ-18” ಆಚರಣೆ : ಕೊಡವರ ಉಳಿವಿಗಾಗಿ ಕೊಡವಲ್ಯಾಂಡ್ ಹೋರಾಟಕ್ಕೆ ಬೆಂಬಲ ಅಗತ್ಯ : ವಿಹೆಚ್‌ಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಪ್ರತಿಪಾದನೆ*

ಆಗಷ್ಟ್ 2, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.2 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ “ಕಕ್ಕಡ-18” ಆಚರಣೆ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿರಾಟ್ ಹಿಂದೂಸ್ಥಾನ್ ಸಂಗಮ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ, ಜಗದೀಶ್ ಶೆಟ್ಟಿ ಅವರು ಕೊಡವರ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ “ಕೊಡವ ಲ್ಯಾಂಡ್” ಪರವಾದ ಹೋರಾಟಕ್ಕೆ ಸರ್ವರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಸಮುದಾಯದ ಕೊಡವರು ಮತ್ತು ಕೊಡವ ನೆಲೆ ಉಳಿಯಬೇಕಾದರೆ “ಕೊಡವ ಲ್ಯಾಂಡ್” ಘೋಷಣೆ ಅಗತ್ಯವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶದಲ್ಲಿ ಹಿಂದೂ ಧರ್ಮದಡಿ ವಿಶಿಷ್ಟ ಆಚಾರ, ವಿಚಾರ, ಸಂಸ್ಕೃತಿಯನ್ನು ಅನುಸರಿಸುವ ಅನೇಕ ಸಮುದಾಯಗಳಿವೆ. ಇವುಗಳಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯ ಕೂಡ ಒಂದು. 1956 ರವರೆಗೆ ಸ್ವತಂತ್ರವಾಗಿ ಪ್ರತ್ಯೇಕವಾಗಿದ್ದ ಕೊಡವರ ಜನ್ಮಭೂಮಿ ಬಲವಂತ ಮತ್ತು ಕೊಡವರ ವಿರೋಧದ ನಡುವೆ ಕರ್ನಾಟಕದೊಂದಿಗೆ ವಿಲೀನವಾಯಿತು. ಅಂದಿನಿಂದ ಇಂದಿನವರೆಗೆ ಕೊಡವರು ದ್ವಿತೀಯ ದರ್ಜೆಯ ನಾಗರೀಕರಂತೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟಿ ಆರೋಪಿಸಿದರು.
ಸುಮಾರು 500 ವರ್ಷಗಳ ಹಿಂದೆ ಅಮೆರಿಕದಲ್ಲಿ ಮೂಲನಿವಾಸಿ ರೆಡ್ ಇಂಡಿಯನ್ಸ್ ನಾಶವಾದರು. ಅವರ ನೆಲೆಯನ್ನು ವಶಕ್ಕೆ ಪಡೆದ ಅಮೆರಿಕ ಇಂದು ಯುರೋಪಿಯನ್ನರ ಕೈಯಲ್ಲಿದೆ. ಬರ್ಮಾದಿಂದ ಬಂದ ಕೂಕಿಗಳು ಹಿಂದೂ ಧರ್ಮದಡಿ ಬರುವ ಮಣಿಪುರದ ಬುಡಕಟ್ಟು ಸಮುದಾಯ ಮೇಟಿಗಳಿಗೆ ನಿರಂತರ ಕಿರುಕುಳ ನೀಡುತ್ತಿದೆ. ಈಶಾನ್ಯ ಭಾಗದಲ್ಲೂ ಬುಡಕಟ್ಟು ಸಮುದಾಯ ಸಂಕಷ್ಟವನ್ನು ಎದುರಿಸುತ್ತಿದೆ. ಇದೇ ರೀತಿಯ ಬದುಕು ಆದಿಮಸಂಜಾತ ಕೊಡವರದ್ದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿಎನ್‌ಸಿ ನಡೆಸುತ್ತಿರುವ “ಕೊಡವ ಲ್ಯಾಂಡ್” ಪರ ಹೋರಾಟಕ್ಕೆ ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಬೆಂಬಲಕ್ಕೆ ನಿಂತು ಕಾನೂನು ಹೋರಾಟದ ಬೆಂಬಲ ನೀಡುತ್ತಿದ್ದಾರೆ. ಆದರೆ ಇದನ್ನು ಸಹಿಸದ ಭೂಮಾಫಿಯಾಗಳು, ಕಾರ್ಪೋರೇಟ್ ವಲಯಗಳು, ಅರ್ಬನ್ ನಕ್ಸಲರು, ಕೊಡವ ವಿರೋಧಿ ತುಕುಡೆ ಗ್ಯಾಂಗ್ ಗಳು, ಇತ್ತೀಚೆಗಷ್ಟೇ ಕೊಡಗು ಜಿಲ್ಲೆಗೆ ಬಂದು ಸೇರಿಕೊಂಡವರು ಕಾನೂನು ಹೋರಾಟಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಬೇಡಿಕೆ ನ್ಯಾಯ ಸಮ್ಮತವಾಗಿದ್ದರೆ ಮಾತ್ರ ಹೋರಾಟಗಾರರ ಬೆಂಬಲಕ್ಕೆ ನಿಲ್ಲುತ್ತಾರೆ. ಸಿಎನ್‌ಸಿಯ ಬೇಡಿಕೆಗಳಲ್ಲಿ ಸತ್ಯಾಂಶ ಇದೆ ಎನ್ನುವ ಕಾರಣಕ್ಕೆ ಸ್ವಾಮಿ ಬೆಂಬಲವಾಗಿ ನಿಂತಿದ್ದಾರೆ. ಒಂದು ವಿಚಾರ ಸತ್ಯವೆಂದು ದೃಢವಾದಲ್ಲಿ ಅದನ್ನು ಕೈಗೆತ್ತಿಕೊಂಡು ಗುರಿ ಸಾಧಿಸುವವರೆಗೆ ಮತ್ತು ತಾರ್ತಿಕ ಅಂತ್ಯ ಹಾಡುವವರೆಗೆ ಬಿಡುವುದಿಲ್ಲ. ಇದು ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜಾಯಮಾನವಾಗಿದೆ. ಕರ್ನಾಟಕ ರಾಜ್ಯದಡಿ, ಭಾರತದ ಸಂವಿಧಾನದ ಆಶಯಕ್ಕೆ ಪೂರಕವಾಗಿ ಸಿಎನ್‌ಸಿ ಸಂಘಟನೆ ನ್ಯಾಯ ಸಮ್ಮತವಾದ ಹೋರಾಟ ನಡೆಸುತ್ತಿದೆ ಎಂದರು.

ಸಿಎನ್‌ಸಿ ಮಾದರಿಯಲ್ಲೇ ಹೋರಾಟ ನಡೆಸಿದ ಲಡಾಕಿ ಜನಾಂಗ ಹಾಗೂ ಗೂರ್ಖಾಗಳಿಗೆ ಸ್ವಾಮಿ ಬೆಂಬಲ ನೀಡಿದ್ದಾರೆ. ಕೊಡವರ ಜನ್ಮಭೂಮಿ, ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಹಾಗೂ ಕೊಡವರ ಹಿತ ಕಾಯಲು ನಿರಂತರವಾಗಿ ಹೋರಾಟ ನಡೆಸುತ್ತಾ ಜನರ ವಿಶ್ವಾಸ ಗಳಿಸಿರುವ ಎನ್.ಯು.ನಾಚಪ್ಪ ಅವರಿಗೆ ಜಯ ಸಿಗುವುದು ಖಚಿತವಾಗಿದೆ. ಆದರೆ ಸರ್ವ ಕೊಡವರು ಒಗ್ಗಟ್ಟಿನಿಂದ ತನು, ಮನ, ಧನದೊಂದಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲವನ್ನು ಅವರಿಗೆ ನೀಡುವುದು ಅಗತ್ಯವಾಗಿದೆ ಎಂದು ಜಗದೀಶ್ ಶೆಟ್ಟಿ ತಿಳಿಸಿದರು.
“ಕಕ್ಕಡ-18” ಆಚರಣೆಯ ನೇತೃತ್ವ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು, ಆರ್ಟಿಕಲ್ 244ನೇ ವಿಧಿ ಮತ್ತು 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು, ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು, ಕೊಡವರು, ಅವರ ಪಾರಂಪರಿಕ ಭೂಮಿ, ಭಾಷೆ, ಪರಿಸರ, ಜಲಸಂಪನ್ಮೂಲ, ಜಾನಪದ ಪರಂಪರೆ, ರಾಜಕೀಯ ಅಸ್ಮಿತೆ ಮತ್ತು ಐತಿಹಾಸಿಕ ನಿರಂತರತೆ, ಸಾಂಪ್ರದಾಯಿಕ ಆವಾಸಸ್ಥಾನಗಳನ್ನು ಗುರುತಿಸಬೇಕು ಮತ್ತು ರಾಜ್ಯಾಂಗ ಖಾತ್ರಿ ನೀಡಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ರಾಷ್ಟ್ರ ಸಂಸ್ಥೆ ಯುಎನ್‌ಒ ಒಡಂಬಡಿಕೆಯಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ಅತ್ಯಂತ ಸೂಕ್ಷ್ಮವಾದ ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯದ ಪ್ರಕೃತಿ ಆರಾಧನೆಗೆ ಪೂರಕವಾದ ಜಾನಪದೀಯ ವಿಶಿಷ್ಟ ಆಚರಣೆಯಾದ “ಕಕ್ಕಡ-18” ನ್ನು ಮುಂದಿನ ಕೊಡವ ಯುವ ಪೀಳಿಗೆಗೆ ಹಾಗೂ ವಿಶ್ವಕ್ಕೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ಕಳೆದ 29 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಮಾತೃಭೂಮಿ, ಜಲದೇವಿ, ವನದೇವಿ, ಕೃಷಿ ಪದ್ಧತಿ, ಯೋಧ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಕೊಡವರ ಜನಪದೀಯ ಧಾರ್ಮಿಕ ಮತ್ತು ಪ್ರಾಕೃತಿಕ ಆಚರಣೆಗಳಲ್ಲಿ “ಕಕ್ಕಡ-18” ಕೂಡ ಒಂದಾಗಿದೆ. ನಾಟಿ ಮತ್ತಿತರ ಕೃಷಿ ಕಾರ್ಯದ ಮೂಲಕ ಭೂದೇವಿಗೆ ನಮಿಸುವ ಕೊಡವ ರೈತರು ಪ್ರಕೃತಿದತ್ತವಾಗಿ ದೊರೆಯುವ 18 ವಿವಿಧ ಔಷಧೀಯ ಗುಣ ಹೊಂದಿರುವ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ, ಮದ್ದುಪುಟ್ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿಯುತ್ತಾರೆ. ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ, ಅಲ್ಲದೆ ಪ್ರಕೃತಿಗೆ ಪೂರಕವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಕೊಡವ ಪೂರ್ವಜರು ಕೊಡವಭೂಮಿಯಲ್ಲಿ ದೊರೆಯುವ ಪ್ರಾಕೃತಿಕ ಗಿಡಮೂಲಿಕೆಗಳ ಸತ್ವ ಮತ್ತು ಆರೋಗ್ಯವರ್ಧಕ ಶಕ್ತಿಯ ಪರಿಚಯವನ್ನು ಈ ಸಮಾಜಕ್ಕೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಾಚಪ್ಪ ತಿಳಿಸಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳ್ಳುವವರೆಗೆ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದ ಅವರು, ಭೂಮಾಫಿಯಾ, ಲೇಔಟ್ ಮಾಫಿಯಾ, ರೆಸಾರ್ಟ್ ಮಾಫಿಯಾ, ಕಾರ್ಪೋರೇಟ್ ವಲಯ ಮತ್ತು ರಾಜಕೀಯ ನಂಟು ಹೊಂದಿರುವ ಆರ್ಥಿಕ ಅಪರಾಧಿಗಳಿಂದ ಕೊಡವ ಭೂಮಿಯನ್ನು ರಕ್ಷಿಸಿಕೊಳ್ಳಲು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ಒಂದೇ ಪರಿಹಾರವೆಂದು ಅಭಿಪ್ರಾಯಪಟ್ಟರು.
ಸಭೆ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿತು. ಅಲ್ಲದೆ ಸಿಎನ್‌ಸಿ ಯ ಬೇಡಿಕೆಗಳ ಪರ ನಿರ್ಣಯ ಕೈಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು “ಕಕ್ಕಡ-18” ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್ ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ “ಕಕ್ಕಡ-18” ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ನಂದೇಟಿರ ಕವಿತಾ, ಬೊಟ್ಟಂಗಡ ಸವಿತ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವಂಡ ನಿಶ, ನಂದಿನೆರವಂಡ ಬೀನ ಅಯ್ಯಣ್ಣ, ಮುದ್ದಿಯಡ ಲೀಲಾವತಿ, ನಂದಿನೆರಂಡ ರಕ್ಷಿತಾ ನಿಖಿಲ್, ಪೂರ್ಣಿಮ ಶೆಟ್ಟಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಜಮ್ಮಡ ಮೋಹನ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಕಾಂಡೇರ ಸುರೇಶ್, ಕಿರಿಯಮಾಡ ಶೆರಿನ್, ಮಂದಪಂಡ ಮನೋಜ್, ಅರೆಯಡ ಗಿರೀಶ್, ನಂದೇಟಿರ ರವಿ, ಪುದಿಯೋಕ್ಕಡ ಪೃಥ್ವಿ, ಅಳ್ಮಂಡ ನೆಹರು, ಪಟ್ಟಮಾಡ ಕುಶ, ಬೇಪಡಿಯಂಡ ದಿನು, ಚೋಳಪಂಡ ನಾಣಯ್ಯ, ಪುದಿಯೋಕ್ಕಡ ಕಾಶಿ, ಮಣವಟ್ಟಿರ ಚಿಣ್ಣಪ್ಪ, ಉದಿಯಂಡ ಚೆಂಗಪ್ಪ, ನಂದಿನೆರವಂಡ ವಿಜು, ನಂದಿನೆರವಂಡ ಅಯ್ಯಣ್ಣ, ಕಾಟುಮಣಿಯಂಡ ಉಮೇಶ್, ಪುಟ್ಟಿಚಂಡ ಡಾನ್, ಪಂದಿಯಂಡ ಮಾಚಯ್ಯ, ನೆರ್ಪಂಡ ಜಿಮ್ಮಿ ಚಂಗಪ್ಪ, ಚಂಙಣಮಕ್ಕಡ ವಿನು, ಸಾದೇರ ರಮೇಶ್, ಚಂಡೀರ ರಾಜ, ಕುಂಜಿಲಂಡ ದೊರೆ, ಪಟ್ಟಮಾಡ ಪೃಥ್ವಿ ದೇವಯ್ಯ, ನಂದಿನೆರವಂಡ ಅಪ್ಪಯ್ಯ, ಕೂಪದೀರ ಸಾಬು, ಐಲಪಂಡ ಮಿಟ್ಟು, ಬಾಚಿನಾಡಂಡ ಗಿರೀಶ್, ಬಾಚಿನಾಡಂಡ ಕವನ್, ಪಾರ್ವಂಗಡ ದಿವಿನ್ ಗಣಪತಿ, ನಂದಿನೆರವಂಡ ದಿನೇಶ್, ನಂದಿನೆರವಂಡ ರವಿ ಕುಟ್ಟಪ್ಪ, ನಂದಿನೆರವಂಡ ನಂದ, ಕೆಚ್ಚೆಟ್ಟೀರ ಶಂಭು, ನಂದಿನೆರವಂಡ ಬೊಪ್ಪಣ್ಣ, ಅರೆಯಡ ಸಾವನ್ ಕೊಡವ, ಮಂದಪಂಡ ಸೂರಜ್, ಬೊಪ್ಪಂಡ ಸೂರಜ್, ನಂದಿನೆರವಂಡ ನಿಖಿಲ್, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಮೀದೇರಿರ ತಿಮ್ಮಯ್ಯ, ಕೊಣಿಯಂಡ ಸಂಜು, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದಾ, ಅಳ್ಮಂಡ ಲವ, ಸೊಮೇಯಂಡ ರೇಷ ತಿಮ್ಮಯ್ಯ, ಕುಞಮಾಡ ಕಾವೇರಪ್ಪ, ತಡಿಯಂಗಡ ನಿತೇಶ್ ಸೋಮಯ್ಯ, ವಿಜೇಂದ್ರ ಶೆಟ್ಟಿ, ಬಾಚಿರ ಚಿಣ್ಣಪ್ಪ, ಪೊಯೆಟ್ಟಿರ ನಂದ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಂಬೂರುವಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ (ಕೋಲ)*

ಮೇ 3, 2026

*ನೆಲ್ಯಹುದೀಕೇರಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ* 

ಮೇ 3, 2026

*ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ : ಶಾಂತಮಲ್ಲಿಕಾರ್ಜುನ ಶ್ರೀಗಳಿಗೆ ಆಹ್ವಾನ*

ಮೇ 3, 2026

*ನೆಲ್ಯಹುದೀಕೇರಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ* 

ಮೇ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 3 NEWS DESK : ವಿರಾಜಪೇಟೆ ವ್ಯಾಪ್ತಿಯ ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ತೋಟಗಳಿಗೆ…

*ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ : ಶಾಂತಮಲ್ಲಿಕಾರ್ಜುನ ಶ್ರೀಗಳಿಗೆ ಆಹ್ವಾನ*

ಮೇ 3, 2026

*ಬೆನೆಡಿಕ್ಟ್ ಆರ್ ಸಲ್ಡಾನ ಅವರಿಗೆ ಬೀಳ್ಕೊಡುಗೆ*

ಮೇ 3, 2026

*ವಿರಾಜಪೇಟೆ ಕಾವೇರಿ ಕಾಲೇಜಿನ ಪದವಿ ವಿಭಾಗದ ನೂತನ ಪ್ರಾಂಶುಪಾಲರಾಗಿ ಡಾ.ಕುಪ್ಪಂಡ ವೀಣಾ ಅಧಿಕಾರ ಸ್ವೀಕಾರ*

ಮೇ 3, 2026

*ಸರ್ಕಾರ ಗ್ರಾ.ಪಂ ಅಭಿವೃದ್ಧಿಗೆ ನೀಡಿರುವ ಅಧಿಕಾರ ಚಲಾಯಿಸಿ : ಡಿ.ಆರ್.ಪಾಟೀಲ*

ಮೇ 3, 2026

*ಮೇ 5 ರಂದು ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ*

ಮೇ 3, 2026

*ಮೇ 16 ಮತ್ತು 17 ರಂದು ಮಡಿಕೇರಿಯಲ್ಲಿ ಕುಲಾಲ-ಕುಂಬಾರ ಬಾಂಧವರ ಕ್ರೀಡೋತ್ಸವ ಮತ್ತು ಸಮ್ಮಿಲನ*

ಮೇ 3, 2026

*ಗೌಡ ಕುಟುಂಬಗಳ “ಕುಟುಂಬ-2026” ಪಂದ್ಯಾವಳಿ ಆರಂಭ*

ಮೇ 3, 2026

*ಕೊಡಗು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ : ಸಮುದಾಯ ಬಾಂಧವರ ಒಗ್ಗಟ್ಟಿಗೆ ಗಣ್ಯರ ಕರೆ*

ಮೇ 3, 2026

*ಹಾಕಿ ಕ್ರೀಡೆಗೆ ಕೇಂದ್ರ ಸರಕಾರದಿಂದ ಪ್ರೋತ್ಸಾಹ, ಇದು ಕೊಡುಗೆಯಲ್ಲ, ಸರಕಾರದ ಜವಾಬ್ದಾರಿ : ಕೇಂದ್ರ ಸಚಿವ ಮನ್ ಸುಖ್ ಮಾಂಡವಿಯಾ ಭರವಸೆ*

ಮೇ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.