ಚೆಟ್ಟಳ್ಳಿ ಆ.5 NEWS DESK : ಚೆಟ್ಟಳ್ಳಿ ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷ ಯೋಜನೆ ಕಾರ್ಯಕ್ರಮ ನಡೆಯಿತು.ಪ್ರಧಾನಮಂತ್ರಿ ಜನ್ ಧನ ಯೋಜನೆ ಮತ್ತು ಪ್ರಧಾನ ಮಂತ್ರಿ ಬೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಆರ್ಥಿಕಾ ಸಾಕ್ಷರತಾ ಸಮಾಲೋಚಕರಾದ ಬಿ.ಸಿ.ದಿವ್ಯಾ ಹಾಗೂ ಸಿ.ಜಿ.ಹರೀಶ್ ಬ್ಯಾಂಕ್ ಗ್ರಾಹಕರಿಗೆ ತಿಳಿಸಿದರು.
ಸಾಮಾನ್ಯ ಜನರಿಗೂ ಬ್ಯಾಂಕ್ ನ ಎಲ್ಲ ಯೋಜನೆಗಳ ಸೌಲಭ್ಯಗಳು ದೊರಕಬೇಕು ಹಾಗೂ ಸೈಬರ್ ಕ್ರೈಮ್ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಚೆಟ್ಟಳ್ಳಿ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ವಿಷ್ಣು, ಬ್ಯಾಂಕ್ ನ ಸಿಬ್ಬಂದಿಗಳು, ಗ್ರಾಹಕರು ಹಾಜರಿದ್ದರು.








