Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*
  • *ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*
  • *ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*
  • *ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*
  • *ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*
  • *ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*
  • *ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*
  • *”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವರು ಕೊಡವರಲ್ಲದವರನ್ನು ಮದುವೆಯಾಗಬಾರದು, ರಾಜಕೀಯ ವ್ಯಕ್ತಿಗಳಿಗೆ ಕೊಡವ ಉಡುಪನ್ನು ತೊಡಿಸಿ, ಒಡಿಕತ್ತಿ, ಪೀಚೆ ಕತ್ತಿ ನೀಡಬಾರದು : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅಖಿಲ ಕೊಡವ ಸಮಾಜ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವರು ಕೊಡವರಲ್ಲದವರನ್ನು ಮದುವೆಯಾಗಬಾರದು, ರಾಜಕೀಯ ವ್ಯಕ್ತಿಗಳಿಗೆ ಕೊಡವ ಉಡುಪನ್ನು ತೊಡಿಸಿ, ಒಡಿಕತ್ತಿ, ಪೀಚೆ ಕತ್ತಿ ನೀಡಬಾರದು : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅಖಿಲ ಕೊಡವ ಸಮಾಜ*

ಆಗಷ್ಟ್ 8, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಪೊನ್ನಂಪೇಟೆ NEWS DESK ಆ.8 : ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯನ್ನು ಕಂಡ ಕಂಡವರು ದುರ್ಬಳಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥೆಗಳು ನಡೆದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅಖಿಲ ಕೊಡವ ಸಮಾಜ ತಿಳಿಸಿದೆ. ವಿವಿಧ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಅಖಿಲ ಕೊಡವ ಸಮಾಜದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೊಡವ ಜನಾಂಗದ ಹಿರಿಯಣ್ಣನಂತಿರುವ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಸೇರಿದಂತೆ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಭಾಗಿಯಾಗಿ ಈ ಮಹತ್ವದ ನಿರ್ಣಯದೊಂದಿಗೆ ಇತರ ವಿಷಯ ಚರ್ಚಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸಾಂಪ್ರದಾಯಿಕ ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆಯಾಗುತ್ತಿದ್ದು ಕೊಡವೇತರರು ಕೂಡ ಇದರ ದುರ್ಬಳಕೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್’ವೊಂದರಲ್ಲಿ ನಡೆದ ಮದುವೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆ ಆಗಿದ್ದನ್ನು ಖಂಡಿಸಲಾಯಿತು. ಸಾಂಪ್ರದಾಯಿಕ ಕೊಡವ ಉಡುಪು ಧರಿಸಿದಲ್ಲದೆ, ನಮ್ಮ ಪವಿತ್ರವಾದ ಪತ್ತಾಕ್ ನೀಡಲಾಗಿದೆ, ಇದರೊಂದಿಗೆ ಪಾದರಕ್ಷೆ ಹಾಕಿಕೊಂಡು ಗೊತ್ತುಗುರಿ ಇಲ್ಲದವರಿಂದ ಬಾಳೆ ಕಡಿಸಿ ಕೊಡವ ಪದ್ದತಿಗೆ ಅವಮಾನ ಮಾಡಿದ್ದಾರೆ. ಈ ಹಿಂದೆ ಕೂಡ ಹೊರದೇಶದಲ್ಲಿ ನಮ್ಮವರೆ ನಮ್ಮ ಪವಿತ್ರ ಆಭರಣವಾದ ಪತ್ತಾಕ್’ಗೆ ಅವಮಾನ ಮಾಡಿದ್ದಾರೆ. ಕೊಡವಾಮೆಯ ಹೆಸರಿನಲ್ಲಿ ಇತರ ಜಾತಿ ಜನಾಂಗಕ್ಕೆ ನಮ್ಮ ಪವಿತ್ರವಾದ ಪತ್ತಾಕ್ ನೀಡಲಾಗಿದನ್ನು ಸಭೆ ಖಂಡಿಸಿತು. ಇತ್ತೀಚೆಗೆ ಕೊಡವ ಸಂಸ್ಕೃತಿ ಸಾಂಪ್ರದಾಯ ಹೈಜಾಕ್ ಆಗುತ್ತಿದ್ದು, ಆಯಾಯ ಜನಾಂಗಕ್ಕೆ ಅವರವರ ಪದ್ದತಿ ಸಂಸ್ಕೃತಿ ಶೋಭೆ ಹೊರತು ಅನ್ಯ ಸಂಸ್ಕೃತಿ ಶೋಭೆ ತರುವುದಿಲ್ಲ. ಇದು ಘರ್ಷಣೆಗೆ ಎಡೆ ಮಾಡಿಕೊಡುತ್ತದೆ ಇದಕ್ಕೆ ಅವಕಾಶ ನೀಡದೆ ಅವರವರ ಪದ್ದತಿ ಸಂಸ್ಕೃತಿಯನ್ನು ಆಚರಿಸಿಕೊಂಡು ಹೋದರೆ ನಮಗೂ ಕೂಡ ಅವರ ಸಂಸ್ಕೃತಿ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ ಹಾಗೂ ಹೆಮ್ಮೆ ಬರುತ್ತದೆ. ಆದರೆ ಕೊಡವರಲ್ಲದವರು ಹಾಗೂ ಕೊಡವ ಸಂಸ್ಕೃತಿ, ಆಚಾರ ವಿಚಾರ ಹೊಂದಿರದ ಜನಾಂಗ ಕೊಡವ ಸಂಸ್ಕೃತಿಯನ್ನು ದುರ್ಬಳಕೆ ಮಾಡುತ್ತಿರುವುದು ವಿಷಾದನೀಯ ಎಂಬ ಮಾತು ಕೇಳಿಬಂತು. ಬೇರೆ ಜಾತಿಯವರನ್ನು ಮದುವೆಯಾಗುವ ಕೊಡವತಿ ಹೆಣ್ಣು ಮಕ್ಕಳು ನಮ್ಮ ಪವಿತ್ರವಾದ ಪತ್ತಾಕ್ ಅನ್ನು ಕೊಂಡೊಯ್ಯುತ್ತಿದ್ದು,  ಈ ಪತ್ತಾಕ್ ಯಾವ ಜಾತಿ ಜನಾಂಗದ ಸೊತ್ತು ಎಂದು ಆಯಾಯ ಕುಟುಂಬ ಚಿಂತಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹ ಕುಟುಂಬಗಳ ಹೆಸರು ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಕುಟುಂಬ ಕ್ರಮ ಕೈಗೊಳ್ಳದಿದ್ದರೆ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಖಿಲ ಕೊಡವ ಸಮಾಜ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಯಿತು. ಕೊಡವರು ಕೊಡವರಲ್ಲದವರನ್ನು ಮದುವೆಯಾಗುವುದನ್ನು ನಿಲ್ಲಿಸಬೇಕು, ಒಂದು ವೇಳೆ ಮದುವೆಯಾದರೆ ಕೊಡವಾಮೆಯನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕು, ಯಾವುದೇ ಹೆಣ್ಣು ಆಕೆ ಮದುವೆಯಾಗುವ ಸಂಸಾರದ ಸಂಸ್ಕೃತಿಯನ್ನು ಪಾಲನೆ ಮಾಡಬೇಕು ಹೊರತು ಆಕೆ ಬಿಟ್ಟುಹೋದ ಜನಾಂಗದ ಸಂಸ್ಕೃತಿಯನ್ನು ಅಲ್ಲ. ಕೊಡವರು ಬೇಡವೆಂದು ಬಿಟ್ಟು ಹೋದ ಮೇಲೆ ಅವರ  ಪದ್ದತಿ ಸಂಸ್ಕೃತಿಯನ್ನು ಪಾಲನೆ ಮಾಡಲಿ. ಇಲ್ಲಿಯತನಕ ನಮಗೂ ನೋಡಿ ಸಾಕಾಗಿದೆ ಇನ್ನು ಮುಂದೆ ನೋಡಿಕೊಂಡು ಇರಲು ಸಾಧ್ಯವಿಲ್ಲ.  ಕೊಡವ ಸಾಂಪ್ರದಾಯವನ್ನು ಪಾಲಿಸದ ಜನಾಂಗ ಕೊಡವ ಉಡುಗೆ ತೊಡುಗೆ ಹಾಗೂ ಆಭರಣಗಳು ಮತ್ತು ಸಂಸ್ಕೃತಿಯನ್ನು ದುರ್ಬಳಕೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊರಗಿನಿಂದ ಬರುವ ಕೊಡವರಲ್ಲದ  ರಾಜಕೀಯ ವ್ಯಕ್ತಿಗಳಿಗೆ ಕೊಡವ ಉಡುಪನ್ನು ತೊಡಿಸಿ ನಮ್ಮ ಒಡಿಕತ್ತಿ ಪೀಚೆ ಕತ್ತಿ ಸೇರಿದಂತೆ ನಮ್ಮ ಸಾಂಪ್ರದಾಯಿಕ ಉಡುಗೆ ಅಥವಾ ಆಭರಣಗಳನ್ನು ನೀಡುವುದನ್ನು ಕೂಡ ನಿಲ್ಲಿಸಬೇಕು.  ಅದರ ಬದಲು ಕಾವೇರಮ್ಮೆ ಇಗ್ಗುತಪ್ಪನ ಭಾವಚಿತ್ರ ಅಥವಾ ಚಿನ್ನದ, ಬೆಳ್ಳಿಯ ಮೂರ್ತಿ ನಿಮ್ಮ ಶಕ್ತಿಗೆ ಅನುಸಾರವಾಗಿ ನೀಡಿ ಅವರು ಅದನ್ನು ಕೊಂಡೊಯ್ದು ಪೂಜಿಸಲಿ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೊಡವರು ಪರರಿಗೆ ಆಸ್ತಿ ಮಾರಾಟ ಮಾಡದಂತೆ ಹಾಗೂ ಅನಿವಾರ್ಯವಾದರೆ ಕೊಡವರಿಗೆ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಕೊಡವರ ಆಸ್ತಿ ಉಳಿದರೆ ಮಾತ್ರ ಕೊಡವಾಮೆ ಕೊಡವ ಸಂಸ್ಕೃತಿ ಉಳಿಯಲು ಸಾಧ್ಯ. ಬ್ರಿಟಿಷ್ ಸಂಸ್ಕೃತಿಗೆ ಮಾರು ಹೋಗದೆ ನಮ್ಮತನವನ್ನು ಉಳಿಸಿಕೊಳ್ಳಬೇಕು. ವಿರಾಜಪೇಟೆ ಕಾವೇರಿ ಆಶ್ರಮದ ವಿಷಯವಾಗಿ ಸುದೀರ್ಘ ಚರ್ಚೆ ನಡೆದು ಕೊಡವ ಜನಾಂಗದ ಹೆಮ್ಮೆಯ ಆಸ್ತಿಯಾಗಿರುವ ಕಾವೇರಿ ಆಶ್ರಮ ಯಾವುದೇ ಕಾರಣಕ್ಕೂ ಪರರ ಪಾಲಾಗದಂತೆ ಹಾಗೂ ಇದಕ್ಕೆ ಪೂರಕವಾದ ಹೋರಾಟಕ್ಕೆ ವಿವಿಧ ಕೊಡವ ಸಮಾಜಗಳು ಅಖಿಲ ಕೊಡವ ಸಮಾಜದೊಂದಿಗೆ ಕೈಜೊಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿಯೇ ಕಾವೇರಿ ಆಶ್ರಮದ ವಿಷಯವಾಗಿ ಸಭೆ ನಡೆಯಬೇಕು ಎಂಬ ತಿರ್ಮಾನ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ, ಕಾರ್ಯದರ್ಶಿ ಕೀತಿಯಂಡ ವಿಜಯ್, ಸಹ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸೇರಿದಂತೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸಭೆಯಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಸೇರಿದಂತೆ ವಿವಿಧ ಕೊಡವ ಸಮಾಜಗಳ ಹಾಗೂ ಕೊಡವ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಪ್ರಮುಖರಾದ ಕೊಲ್ಲೀರ ಉಮೇಶ್, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕೊಡವಾಮೆ ಕೊಂಡಾಟ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಳಿಯಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್,  ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ಅಮ್ಮತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್, ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ, ಕೊಡಗು ಏಕೀಕರಣ ರಂಗದ ಪ್ರಮುಖರಾದ ತೇಲಪಂಡ ಸೋಮಯ್ಯ, ಪ್ರಮುಖರಾದ ಮಾಚಿಮಾಡ ರವೀಂದ್ರ, ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಗರ್ವಾಲೆ ಕೊಡವ ಸಮಾಜದ ಅಧ್ಯಕ್ಷ ಶರ್ಕಂಡ ಸೋಮಯ್ಯ, ಪೊನ್ನಂಪೇಟೆ ಕೊಡವ ಸಮಾಜ ಉಪಾಧ್ಯಕ್ಷ ಚಿರಿಯಪಂಡ ಇಮ್ಮಿ ಉತ್ತಪ್ಪ,  ಸದಸ್ಯೆ ಮೂಕಳೇರ ಕಾವ್ಯ ಮದು ಕುಮಾರ್ ಸೇರಿದಂತೆ ಇತರರು ಮಾತನಾಡಿದರು. ಸಭೆಯ ಮೊದಲಿಗೆ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ ಸ್ವಾಗತಿಸಿದರೆ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಚಮ್ಮಟೀರ ಪ್ರವೀಣ್ ಉತ್ತಪ್ಪ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಮ್ಮತ್ತಿ ಕೊಡವ ಸಮಾಜದಿಂದ ಶಾಸಕ ಎ.ಎಸ್.ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕೆದಮುಳ್ಳೂರು : ಏ.3 ಮತ್ತು 4 ರಂದು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ*

ಮಾರ್ಚ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಮಾ.30 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ…

*ಶ್ರದ್ಧಾಭಕ್ತಿಯಿಂದ ಜರುಗಿದ ಕೆದಮುಳ್ಳೂರು ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 30, 2026

*ಕುಡಿಯುವ ನೀರಿನ ಅಭಾವ : ಪೊನ್ನಂಪೇಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು*

ಮಾರ್ಚ್ 30, 2026

*ಎಮ್ಮೆಮಾಡು ಪ್ರಕರಣ : ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಿರುವ ಕೊಡಗು ಪೊಲೀಸ್*

ಮಾರ್ಚ್ 30, 2026

*ಸೋಮವಾರಪೇಟೆ : ಮಹಿಳಾ ಸಂಘಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿ : ಸಾಹಿತಿ ಶ.ಗ.ನಯನತಾರ*

ಮಾರ್ಚ್ 30, 2026

*ಕೊಡಗು : ದೈವಕ್ಕೆ ಅಪಮಾನ ಆರೋಪ : ಸೂಕ್ತ ಕ್ರಮಕ್ಕೆ ಒತ್ತಾಯ*

ಮಾರ್ಚ್ 30, 2026

*ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸಾರ್ವಕಾಲಿಕ : ವಾಣಿ ಪುಷ್ಪರಾಜ್*

ಮಾರ್ಚ್ 30, 2026

*ಕೂಡಿಗೆ ಸೈನಿಕ ಶಾಲೆಗೆ ನಿರ್ದೇಶಕರ ಭೇಟಿ*

ಮಾರ್ಚ್ 30, 2026

*”ಮುಕ್ಕಾಟಿರ ಕ್ರಿಕೆಟ್ ನಮ್ಮೆ” ಏ.3 ರಿಂದ ಆರಂಭ : 289 ತಂಡಗಳ ನಡುವೆ ಹಣಾಹಣಿ : ಮೇ 1 ರಂದು ಅಂತಿಮ ಪಂದ್ಯ*

ಮಾರ್ಚ್ 30, 2026

*ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”*

ಮಾರ್ಚ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.