Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಇಸ್ಮಾಯಿಲ್ ಕಂಡಕರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ*
  • *ಯಶಸ್ವೀ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು*
  • *ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*
  • *ವಿರಾಜಪೇಟೆಯಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಹಿಂದೂ ಜನ ಜಾಗೃತಿ ಸಭೆ : ನಾಪೋಕ್ಲುವಿನಲ್ಲಿ ಶಾಂತಿ ಸಭೆ*
  • *ಏ.2 ರಿಂದ ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಚಿಲಿಪಿಲಿ ಮಕ್ಕಳ ವಿಶೇಷ ಶಿಬಿರ*
  • *ಭಾಗಮಂಡಲ : ಕಾಡಂಚಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ*
  • *ಏ.02 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ*
  • *ರೈತರ ಮಕ್ಕಳಿಂದ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಸಾರ್ವಜನಿಕರ ಗಮನಕ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆಯಲ್ಲಿ ಗೌರಿ-ಗಣೇಶ ಜನತ್ಸೋವ ಸಮಿತಿಗಳ ಪೂರ್ವಭಾವಿ ಸಭೆ : ಗಣೇಶೋತ್ಸವವು ಸಾಮರಸ್ಯದ ಹಬ್ಬವಾಗಿ ಆಚರಣೆಯಾಗಲಿ :ಶಾಸಕ ಎ.ಎಸ್.ಪೊನ್ನಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆಯಲ್ಲಿ ಗೌರಿ-ಗಣೇಶ ಜನತ್ಸೋವ ಸಮಿತಿಗಳ ಪೂರ್ವಭಾವಿ ಸಭೆ : ಗಣೇಶೋತ್ಸವವು ಸಾಮರಸ್ಯದ ಹಬ್ಬವಾಗಿ ಆಚರಣೆಯಾಗಲಿ :ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 26, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಆ.26 NEWS DESK :  ರಾಜ್ಯಾದ್ಯಂತ ಪ್ರಖ್ಯಾತವಾಗಿರುವ ವಿರಾಜಪೇಟೆಯ ಐತಿಹಾಸಿಕ ಗೌರಿ- ಗಣೇಶ ಉತ್ಸವ ಕಾನೂನು ಕಟ್ಟಳೆಗಳನ್ನು ಪಾಲನೆ ಮಾಡುವುದರೊಂದಿಗೆ ವಿಜೃಂಭಣೆಯಿಂದ, ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡದೆ ಸಾಮರಸ್ಯದ ಹಬ್ಬವಾಗಿ ಆಚರಣೆಯಾಗಲಿ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ನಗರದ ಪುರಸಭಾಂಗಣದಲ್ಲಿ ಆಯೋಜಿತ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದ ಶೋಭಾಯಾತ್ರೆಯಲ್ಲಿ ಮಂಟಪಗಳು ಚಲಿಸುವ ಮುಕ್ಯ ರಸ್ತೆ ಒಳಗೊಂಡಂತೆ ಗುಂಡಿ ಬಿದ್ದ ನಗರದ ರಸ್ತೆಗಳನ್ನು ದುರಸ್ತಿ ಪಡಿಸಿವುದು ಸೇರಿದಂತೆ ಪಾದಚಾರಿ ಹಾದಿಯ ಕಾಮಗಾರಿಗಳಿಗೆ ಮಲೆಹಾನಿ ಪರಿಹಾರ ಹಣವನ್ನು ಬಳಕೆ ಮಾಡುವಂತೆ ತಹಶೀಲ್ದಾರ್ ಗೆ ಸ್ಪಷ್ಟ ಸೂಚನೆಯನ್ನು ನೀಡಿದರು. ಉತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ ಸುವ್ಯವಸ್ಥೆಯೊಂದಿಗೆ ಹಬ್ಬ ಆಚರಿಸಲು ಸಹಕರಿಸಯವಂತೆ ಮನವಿ ಮಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆಗೆ ಕಾರಣರಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಪುರಸಭಾ ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾತನಾಡಿ, ಉತ್ಸವದ ಸಂದರ್ಭ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲಿಸುವ ಮೂಲಕ ಪರಿಸರ ಕಾಪಾಡಿ. ಡಿಜೆ ಶಬ್ದ ಮಾಲಿನ್ಯ ಕಡಿವಾಣ ಹಾಕುವಂತೆ ಮನವಿ ಮಾಡಿ, ಇತಿಹಾಸ ಪ್ರಸಿದ್ಧ ಗಡಿಯಾರ ಕಂಬದ ಬಳಿ ಸಿಡಿಮದ್ದು ಸಿಡಿಸಿದರೆ ಗಡಿಯಾರ ಕಂಬಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿ, ಪ್ಲಾಸ್ಟ್ ಆಫ್ ಪ್ಯಾರೀಸ್‍ನಿಂದ ನಿರ್ಮಿಸಿದ ಗಣಪನ ವಿಗ್ರಹಗಳನ್ನು ಉತ್ಸವದಲ್ಲಿ ಬಳಸದಿರಿ. ಇದಕ್ಕೆ ಬದಲಾಗಿ ಪರಿಸರಕ್ಕೆ ಪೂರಕವಾದ ನೈಸರ್ಗಿಕ ಬಣ್ಣ ಮತ್ತು ಮಣ್ಣಿನ ಗಣಪ ಬಳಸುವಂತೆ ತಿಳಿಸಿದರು. ಉಪ ಪೊಲೀಸ್ ಅಧೀಕ್ಷಕ ಮೋಹನ್ ಮಾತನಾಡಿ, ವೀರಾಜಪೇಟೆ ಪೊಲೀಸ್ ಉಪವಿಭಾಗದಲ್ಲಿ 101 ಗಣಪತಿ ಪ್ರತಿಷ್ಟಾಪನೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಗ್ರಾಮಾಂತರ ವಿಭಾಗದ 21 ಕಡೆಗಳಲ್ಲಿ ಗಣಪತಿ ಪ್ರತಿಷ್ಟಾಪನೆ ನಡೆಯಲಿದೆ. ಗೋಣಿಕೊಪ್ಪಲಿನಲ್ಲಿ ಒಟ್ಟು 15 ಹಾಗೂ ಶ್ರೀಮಂಗಲದಲ್ಲಿ 6 ಗಣಪ ಪ್ರತಿಷ್ಟಾಪನೆ ಮತ್ತು ವಿಸರ್ಜನೋತ್ಸವ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

ಡಿಜೆಗೆ ಅನುಮತಿ ಇಲ್ಲ : ಗಣಪತಿ ವಿಸರ್ಜನೋತ್ಸವ ಸಂದರ್ಭ ಸೆ.17ರಂದು ರಾತ್ರಿ ಯಾವದೇ ಅಹಿತಕರ ಘಟನೆ ನಡೆಯದಂತೆ ಅಪರಾಧ ನಿಗ್ರಹ ಪೊಲೀಸ್ ಪಡೆಯಿಂದ ವಿಡಿಯೋ ದಾಖಲಾತಿ ಮಾಡಲಾಗುತ್ತದೆಂದು ತಿಳಿಸಿದ ಡಿವೈಎಸ್‍ಪಿ ಮೋಹನ್, ಡಿಜೆ ಬಳಕೆಗೆ ಅನುಮತಿ ಇಲ್ಲ.ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ತಿಳಿಸಿದರಲ್ಲದೆ, ಪ್ರತಿಷ್ಟಾಪಿಸಲಾಗುವ ಗಣಪತಿ ಮೂರ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ಸಮಿತಿಯದ್ದೆಂದು ಸ್ಪಷ್ಟಪಿಸಿದರು. ಗೌರಿ ಗಣೇಶೋತ್ಸವ ಸಮಿತಿ ಒಕ್ಕೂಟ ಅಧ್ಯಕ್ಷ ಶಬರೀಶ್ ಅವರು ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಅವರು ಎಲ್ಲ ಉತ್ಸವ ಸಮಿತಿಗಳನ್ನು ಒಳಗೊಂಡ ಒಕ್ಕೂಟ ರಚನೆ ಹಾಗೂ ಬೈಲಾ ರಚನೆ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ಮಾದಂಡ ತಿಮ್ಮಯ್ಯ ಅವರು ಮಾತನಾಡಿ, ವೀರಾಜಪೇಟೆಯಲ್ಲಿ ಈ ಬಾರಿ 22 ಗೌರಿ ಗಣೇಶೋತ್ಸವ ಸಮಿತಿಯಿಂದ ಅದ್ಧೂರಿ ಉತ್ಸವದ ಆಚರಣೆ ನಡೆಯಲಿದೆ. ಗೌರಿ ಗಣೇಶೋತ್ಸವಕ್ಕೆ ಸರ್ಕಾರದ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಇಸ್ಮಾಯಿಲ್ ಕಂಡಕರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ*

ಮಾರ್ಚ್ 31, 2026

*ಯಶಸ್ವೀ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು*

ಮಾರ್ಚ್ 31, 2026

*ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*

ಮಾರ್ಚ್ 31, 2026

*ಯಶಸ್ವೀ ಕಾರ್ಯಾಚರಣೆ : ಅರಣ್ಯಕ್ಕೆ ಮರಳಿದ ಕಾಡಾನೆ ಹಿಂಡು*

ಮಾರ್ಚ್ 31, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.31 : ತಿತಿಮತಿ ಅರಣ್ಯ ವಲಯಕ್ಕೆ ಒಳಪಡುವ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ…

*ಚೇನಂಡ ಐನ್ ಮನೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ಕೊಡವ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರದ ಭರವಸೆ*

ಮಾರ್ಚ್ 31, 2026

*ವಿರಾಜಪೇಟೆಯಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 31, 2026

*ಹಿಂದೂ ಜನ ಜಾಗೃತಿ ಸಭೆ : ನಾಪೋಕ್ಲುವಿನಲ್ಲಿ ಶಾಂತಿ ಸಭೆ*

ಮಾರ್ಚ್ 31, 2026

*ಏ.2 ರಿಂದ ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಚಿಲಿಪಿಲಿ ಮಕ್ಕಳ ವಿಶೇಷ ಶಿಬಿರ*

ಮಾರ್ಚ್ 31, 2026

*ಭಾಗಮಂಡಲ : ಕಾಡಂಚಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ*

ಮಾರ್ಚ್ 31, 2026

*ಏ.02 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ*

ಮಾರ್ಚ್ 31, 2026

*ರೈತರ ಮಕ್ಕಳಿಂದ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 31, 2026

*ಸಾರ್ವಜನಿಕರ ಗಮನಕ್ಕೆ*

ಮಾರ್ಚ್ 31, 2026

*ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ*

ಮಾರ್ಚ್ 31, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.