
ಮಡಿಕೇರಿ ಆ.28 NEWS DESK : ಕುಶಾಲನಗರ 220/11 ಕೆವಿ, ಸುಂಟಿಕೊಪ್ಪ 66/11 ಕೆವಿ ಮತ್ತು ಸೋಮವಾರಪೇಟೆ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಆ.29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕುಶಾಲನಗರ ಪಟ್ಟಣ, ಹೆಬ್ಬಾಲೆ ಶಿರಂಗಾಲ, ಕೂಡಿಗೆ, ರಸಲ್‍ಪುರ, ಭುವನಗಿರಿ, ಬಲಮುರಿ, ಹಾರಂಗಿ, ನಂಜರಾಯಪಟ್ಟಣ, ಎಸ್.ಎಲ್.ಎನ್, ಸಿದ್ದಲಿಂಗಪುರ ಕಾವೇರಿ ನಿಸರ್ಗಧಾಮ, ಸೋಮೇಶ್ವರ, ಕೂಡುಮಂಗಳೂರು, ಸುಂಟಿಕೊಪ್ಪ, ಮಳ್ಳೂರು, ಹೊಸಕೋಟೆ, ನಾಕೂರು, ಮಾದಾಪುರ, ಸೂರ್ಲಬ್ಬಿ, ಹಟ್ಟಿಹೊಳೆ, ಕಾಂಡನಕೊಲ್ಲಿ, ಗರ್ವಾಲೆ, ಬಿಳಿಗೇರಿ, ಕಂಬಿಬಾಣೆ, ಕೊಡಗರಹಳ್ಳಿ, ಉಪ್ಪುತೋಡು, ಚೆಟ್ಟಳ್ಳಿ, ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಮತ್ತಿಕಾಡು, ಕೆದಕಲ್, ಸೋಮವಾರಪೇಟೆ ಟೌನ್, ಶಾಂತಳ್ಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಐಗೂರು, ಬಜೇಗುಂಡಿ, ದೊಡ್ಡಮಳ್ತೆ, ಮಸಗೋಡು, ಕರ್ಕಳ್ಳಿ, ಹಾನಗಲ್ಲು, ಬೇಳೂರು, ಯಡವಾರೆ, ಕುಂಬೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅನಿತಾ ಬಾಯಿ ಕೋರಿದ್ದಾರೆ.








