Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*
  • *ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಜಂಬೂರಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ : ಮಕ್ಕಳ ಮನಸ್ಸಿಗೆ ಮೌಲ್ಯಗಳ ಸ್ಪರ್ಶ ನೀಡಲು ಕರೆ*
  • *ಮುಂದುವರೆದ ವಸತಿ ರಹಿತರ ಅಹೋರಾತ್ರಿ ಧರಣಿ*
  • *ವಾಂಡರ‍್ಸ್ ಶಿಬಿರ ಸಮಾರೋಪ : ಮಕ್ಕಳು ದೇಶ ಭಕ್ತರಾಗಿ ಬಾಳಬೇಕು : ಕ್ಯಾ.ಕಿಮ್ಮುಡಿರ ಶಿವಪ್ರಕಾಶ್*
  • *ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ*
  • *ಹಾರಂಗಿಯಿಂದ 500 ಕ್ಯೂಸೆಕ್ ನೀರು ಹರಿಸಲು ಆದೇಶ*
  • *ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*
  • *ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಾವೇರಿ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಬೃಹತ್ ಹೋರಾಟ ಮತ್ತು ಕಾನೂನಿನ ಮೊರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಾವೇರಿ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಬೃಹತ್ ಹೋರಾಟ ಮತ್ತು ಕಾನೂನಿನ ಮೊರೆ*

ಅಕ್ಟೋಬರ್ 8, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.8 NEWS DESK : ದಕ್ಷಿಣ ಭಾರತದ ಸುಮಾರು ಎಂಟು ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ತನ್ನ ತವರು ಜಿಲ್ಲೆ ಕೊಡಗಿನಲ್ಲೇ ನಿರ0ತರವಾಗಿ ಕಲುಷಿಗೊಳ್ಳುತ್ತಿದೆ. ನದಿ ಮಾಲಿನ್ಯವನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆ ವಿವಿಧ ಹಂತದ ಹೋರಾಟದೊಂದಿಗೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿರುವುದಾಗಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಕೊಡಗು ಮೋಡೆಲ್ ಫಾರೆಸ್ಟ್ ಟ್ರಸ್ಟ್ ನ ಉಪಾಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನದಿ ಮತ್ತು ಪರಿಸರ ಸ್ನೇಹಿ ಸಂಘಟನೆಗಳ ಸಹಕಾರದೊಂದಿಗೆ ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸುವುದಾಗಿ ಹೇಳಿದರು. ಕಾವೇರಿ ನದಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಸುಮಾರು 810 ಕಿ.ಲೋ ಮೀಟರ್ ಹರಿದು ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ. ದುರಾದೃಷ್ಟವಶಾತ್ ಭಾಗಮಂಡಲದಿಂದಲೇ ನದಿ ಕಲುಷಿತಗೊಳ್ಳುತ್ತಿದೆ. ತ್ಯಾಜ್ಯದ ನೀರು ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಸೇರ್ಪಡೆಗೊಳ್ಳುತ್ತಿದೆ. ಇದೇ ರೀತಿ ನಾಪೋಕ್ಲು, ಬೇತ್ರಿ, ಕೊಂಡಂಗೇರಿ, ನೆಲ್ಲಿಹುದಿಕೇರಿ, ಕರಡಿಗೋಡು, ಗುಡ್ಡೆಹೊಸೂರು, ಕುಶಾಲನಗರ, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಹೊಟೇಲ್, ಲಾಡ್ಜ್ ಮತ್ತು ಅಂಗಡಿಗಳ ತ್ಯಾಜ್ಯ ಸೇರ್ಪಡೆಗೊಂಡು ಕಾವೇರಿ ನದಿ ನೀರು ಮಲೀನವಾಗುತ್ತಿದೆ. ಇದರಿಂದ ಕಾವೇರಿ ನೀರಿನ ಗುಣಮಟ್ಟ ಕುಶಾಲನಗರ ಭಾಗದಲ್ಲಿ 2023 ರ ವರದಿ ಪ್ರಕಾರ “ಸಿ” ದರ್ಜೆಗೆ ತಲುಪಿದೆ. ಕುಡಿಯಲು ಕೂಡ ನದಿ ನೀರು ಯೋಗ್ಯವಲ್ಲ ಎನ್ನುವ ಮಾಹಿತಿ ದೊರೆತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಿ.ಪಿ.ಮುತ್ತಣ್ಣ ಆರೋಪಿಸಿದರು. ಮಲೀಗೊಂಡಿರುವ ನದಿ ನೀರು ವನ್ಯಜೀವಿ ವಲಯ ಮತ್ತು ಮೀಸಲು ಅರಣ್ಯದ ಮೂಲಕ ಹರಿಯುತ್ತಿರುವುದರಿಂದ ಪ್ರಾಣಿಗಳು, ಸಸ್ಯವರ್ಗ ಮತ್ತು ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುಡುವ ಭೀತಿ ಇದೆ. ಮಡಿಕೇರಿ ನಗರಸಭೆಗೆ ಎಸ್.ಟಿ.ಪಿ ಯೋಜನೆಗೆ ಸರಕಾರ ಜಾಗ ಮಂಜೂರು ಮಾಡಿದ್ದರು ಇದುವರೆಗು ಕಾಮಗಾರಿ ಪ್ರಾರಂಭಗೊಂಡಿಲ್ಲ. ಯು.ಜಿ.ಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಸರಕಾರದ ಹಣ ಪೋಲು ಮಾಡಲಾಗಿದೆ. ಕುಶಾಲನಗರದಲ್ಲಿ ಯು.ಜಿ.ಡಿ ಮತ್ತು ಎಸ್.ಟಿ.ಪಿ ಯೋಜನೆಯು ಶೇ.70 ರಷ್ಟು ಮುಗಿದಿದ್ದರು ಉಳಿದ ಕಾಮಗಾರಿಯನ್ನು ನಡೆಸದೆ ಇರುವುದರಿಂದ ಕಾವೇರಿ ನದಿ ಮತ್ತಷ್ಟು ಮಲೀನವಾಗಬಹುದು ಎಂದರು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಮಾಡಲಾಗಿದೆ. ಗೋಣಿಕೊಪ್ಪವನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಲು ಸಿದ್ಧವಾಗಿದ್ದು, ಇದರಿಂದ ಗದ್ದೆಗಳು ಮತ್ತು ಬಾಣೆ ಜಾಗಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಜನಸಂಖ್ಯೆ ಹೆಚ್ಚಾಗಿ ಈ ಭಾಗದ ಲಕ್ಷ್ಮಣ ತೀರ್ಥ ನದಿ ಮಲೀನವಾಗುತ್ತದೆ. ಇದರಿಂದ ನಾಗರಹೊಳೆ ಅರಣ್ಯದ ಮೇಲು ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಎಸ್.ಟಿ.ಪಿ ಮತ್ತು ಯು.ಜಿ.ಡಿ ಯೋಜನೆಯನ್ನು ಗ್ರಾಮ ಪಂಚಾಯತ್ ವ್ಯಾಪ್ತಿಗೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಟ್ಟಡ ನಿರ್ಮಾಣ ಒತ್ತುವರಿ, ನದಿ ಮಾಲಿನ್ಯ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಎಲ್ಲಾ ವಿವರಗಳನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಸಲ್ಲಿಸುವ ವ್ಯವಸ್ಥೆಯಾದರೆ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಸಿರು ನ್ಯಾಯಾಪೀಠದ ಆದೇಶದಂತೆ ನದಿಯ ಬಫರ್ ಜೋನ್ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಬಫರ್ ಜೋನ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು, ರೆಸಾರ್ಟ್‍ಗಳು ನಿರ್ಮಾಣವಾಗಿವೆ. ಕುಶಾಲನಗರ ತಾಲೂಕಿನಲ್ಲಿ ದುಬಾರೆ, ನಿಸರ್ಗಧಾಮ, ಕುಶಾಲನಗರ ಪಟ್ಟಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ಉದ್ದೇಶಕ್ಕೆ ಬಫರ್ ಜೋನ್ ಕಾನೂನು ಬಾಹಿರ ಭೂ ಪರಿವರ್ತನೆ ಮಾಡಲಾಗಿದೆ. ಇವುಗಳಲ್ಲದೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾವೇರಿ ನದಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು. ಕಾವೇರಿ ನದಿಯ ಪಾವಿತ್ರ್ಯತೆ ಮತ್ತು ಕೊಡಗನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟಕ್ಕೆ ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಸಿ.ಪಿ.ಮುತ್ತಣ್ಣ ತಿಳಿಸಿದರು. ವಿರಾಜಪೇಟೆ ನಾಗರಿಕಾ ಸೇವಾ ಸಮಿತಿಯ ಪ್ರಮುಖ ಡಾ.ಈ.ರಾ.ದುರ್ಗಾಪ್ರಸಾದ್ ಮಾತನಾಡಿ ವಿರಾಜಪೇಟೆ ಭಾಗದಲ್ಲಿ ನದಿ, ತೊರೆ, ಕೆರೆ, ತೋಡುಗಳು ಅಕ್ರಮವಾಗಿ ಒತ್ತುವರಿಗೊಂಡು ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿವೆ. ಈ ಕಟ್ಟಡಗಳ ತ್ಯಾಜ್ಯಗಳು ನದಿಯನ್ನು ಸೇರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೇತ್ರಿ ಭಾಗದಲ್ಲಿ ಇದು ವ್ಯಾಪಕವಾಗಿದ್ದು, ಅಧಿಕಾರಿಗಳು ನದಿ ಸಂರಕ್ಷಣೆಗೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು. ತಕ್ಷಣ ಅಕ್ರಮ ಒತ್ತುವರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ತೆರವುಗೊಳಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಸೇವ್ ಕಾವೇರಿ ಸಂಘಟನೆಯ ಶರತ್ ಸೋಮಣ್ಣ, ಗೋಪಿನಾಥ್, ಮಾದೇಟಿರ ಕಾಳಯ್ಯ ಹಾಗೂ ಚೇಂದಂಡ ಮಿಥುನ್ ಪೊನ್ನಪ್ಪ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*

ಮೇ 8, 2026

*ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 8, 2026

*ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮೇ 8, 2026

*ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 8 NEWS DESK : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್6 ಭಾಗಮಂಡಲ ಫೀಡರ್‍ನಲ್ಲಿ ಮೇ, 11…

*ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮೇ 8, 2026

*ಜಂಬೂರಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ : ಮಕ್ಕಳ ಮನಸ್ಸಿಗೆ ಮೌಲ್ಯಗಳ ಸ್ಪರ್ಶ ನೀಡಲು ಕರೆ*

ಮೇ 8, 2026

*ಮುಂದುವರೆದ ವಸತಿ ರಹಿತರ ಅಹೋರಾತ್ರಿ ಧರಣಿ*

ಮೇ 8, 2026

*ವಾಂಡರ‍್ಸ್ ಶಿಬಿರ ಸಮಾರೋಪ : ಮಕ್ಕಳು ದೇಶ ಭಕ್ತರಾಗಿ ಬಾಳಬೇಕು : ಕ್ಯಾ.ಕಿಮ್ಮುಡಿರ ಶಿವಪ್ರಕಾಶ್*

ಮೇ 8, 2026

*ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ*

ಮೇ 8, 2026

*ಹಾರಂಗಿಯಿಂದ 500 ಕ್ಯೂಸೆಕ್ ನೀರು ಹರಿಸಲು ಆದೇಶ*

ಮೇ 8, 2026

*ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*

ಮೇ 8, 2026

*ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 

ಮೇ 8, 2026

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.