Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕರ್ನಾಟಕ ಅಂಡರ್-17 ಫುಟ್ಬಾಲ್ ತಂಡಕ್ಕೆ ಮಡಿಕೇರಿಯ ನಾಲ್ವರು ವಿದ್ಯಾರ್ಥಿಗಳು*
  • *ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 
  • *ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*
  • *ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣಕ್ಕೆ ಹೋಮ-ಹವನ : ದಸಂಸ ಖಂಡನೆ*
  • *ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವೀಕ್ಷಣೆ*
  • *ವಿರಾಜಪೇಟೆಯಲ್ಲಿ ವಿಶ್ವಛಾಯಾಗ್ರಹಣ ದಿನಾಚರಣೆ : ಮನಸ್ಸು ಕೇಂದ್ರೀಕರಿಸಿ ಉತ್ತಮ ಛಾಯಾಚಿತ್ರ ತೆಗೆಯಿರಿ : ಡಾ.ಎಸ್.ವಿ.ನರಸಿಂಹನ್ ಕರೆ*
  • *ಆ.21 ರಂದು ರೋಟರಿ ಮಿಸ್ಟಿ ಹಿಲ್ಸ್ ನಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮ*
  • *ನಾಗರಪಂಚಮಿ ಬದಲು ಬಸವ ಪಂಚಮಿ ಆಚರಿಸಿದ ಮಾನವ ಬಂಧುತ್ವ ವೇದಿಕೆ*
  • *ಕಾಡಾನೆ ಉಪಟಳ ತಡೆಗೆ ಬಿಡುಗಡೆಗೊಂಡ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ : ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
  • *ವಿಧಾನಸೌಧದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ, ಗೋಣಿಕೊಪ್ಪ ದಸರಾ : 2 ಸಾವಿರ ಪೊಲೀಸರ ನಿಯೋಜನೆ : ಜಂಬೋ ತಂಡಗಳ ಕಾರ್ಯಾಚರಣೆ : 800 ಸಿಸಿ ಕ್ಯಾಮರಾ ಅಳವಡಿಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

*ಮಡಿಕೇರಿ, ಗೋಣಿಕೊಪ್ಪ ದಸರಾ : 2 ಸಾವಿರ ಪೊಲೀಸರ ನಿಯೋಜನೆ : ಜಂಬೋ ತಂಡಗಳ ಕಾರ್ಯಾಚರಣೆ : 800 ಸಿಸಿ ಕ್ಯಾಮರಾ ಅಳವಡಿಕೆ*

ಅಕ್ಟೋಬರ್ 8, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಅ.8 : ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವ ಮತ್ತು ದಕ್ಷಿಣ ಕೊಡಗಿನ ಗೋಣಿಕೊಪ್ಪಲು ದಸರಾ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆಗಳನ್ನು ಕಾಪಾಡುವ ನಿಟ್ಟಿನಲ್ಲಿ 2 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದಸರಾ ಉತ್ಸವವನ್ನು ಶಾಂತಿಯುತವಾಗಿ ಆಚರಿಸುವ ಸಲುವಾಗಿ ಇಬ್ಬರು ಎಎಸ್‌ಪಿ, 7 ಡಿವೈಎಸ್‌ಪಿ, 27 ವೃತ್ತ ನಿರೀಕ್ಷಕರು, 80 ಪಿಎಸ್‌ಐ, 126 ಎಎಸ್‌ಐ, 975 ಪೊಲೀಸ್ ಸಿಬ್ಬಂದಿಗಳು, 360 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ 16 ಡಿಎಆರ್, 8 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲು ಅಗತ್ಯ ಕ್ರಮಗಳನ್ನು ಈಗಾಗಲೆ ಕೈಗೊಳ್ಳಲಾಗಿದೆ ಎಂದರು.
::: 8 ‘ಜಂಬೋ’ ತಂಡಗಳ ನಿಯೋಜನೆ :::
ಮಡಿಕೇರಿ ದಸರಾ ಉತ್ಸವದ ಶೋಭಾಯಾತ್ರೆಯ ಸಂದರ್ಭ ಲಕ್ಷಾಂತರ ಮಂದಿ ನಗರಕ್ಕೆ ಆಗಮಿಸುತ್ತಾರೆ. ಈ ಹಂತದಲ್ಲಿ ಮಹಿಳೆೆಯರು ಮತ್ತು ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ, ಜನಸಂದಣಿ ಹೆಚ್ಚಾಗಿರುವ ಕಡೆಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವ, ಅಸಭ್ಯವಾಗಿ ವರ್ತಿಸುವ, ಸಂಚಾರಕ್ಕೆ ತೊಡಕನ್ನುಂಟುಮಾಡುವ ಕಿಡಿಗೇಡಿಗಳ ಬಗ್ಗೆ ನಿಗಾ ಇಡಲು ಒಬ್ಬರು ಎಸ್‌ಐ ನೇತ್ಥತ್ವದ 15 ಜನ ಸಿಬ್ಬಂದಿಗಳನ್ನು ಒಳಗೊಂಡ 8 ಜಂಬೋ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಕಿಡಿಗೇಡಿಗಳ ಬಗ್ಗೆ ನಿಗಾ ವಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆಯೆಂದು ತಿಳಿಸಿದರು.
::: ಚಿತಾ ಪಡೆ-ಡ್ರೋನ್ ಹದ್ದಿನ ಕಣ್ಣು :::
ನಗರದ ಅಂಚಿನ ಪ್ರದೇಶಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ಉತ್ಸವದ ಸಂದರ್ಭ ದುಷ್ಕೃತ್ಯಗಳನ್ನು ಎಸಗುವ ಯಾವುದೇ ಪ್ರಯತ್ನಗಳನ್ನು ತಡೆಗಟ್ಟುವ ಸಲುವಾಗಿ 10 ಚಿತಾ ಬೈಕ್‌ಗಳನ್ನು ಬಳಸಲಾಗುತ್ತದೆ ಮತ್ತು ಡ್ರೋನ್ ಮೂಲಕ ನಗರ ವ್ಯಾಪ್ತಿಯ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲಾಗುತ್ತದೆಂದು ಸ್ಪಷ್ಟಪಡಿಸಿದರು.
::: 800 ಸಿಸಿ ಕ್ಯಾಮರಾ ಅಳವಡಿಕೆ :::
ದಸರಾ ಶೋಭಾಯಾತ್ರೆಯಲ್ಲಿ ಮಂಟಪಗಳು ಸಾಗುವ ಹಾದಿಯಲ್ಲಿ ನಡೆಯುವ ಯಾವುದೇ ಚಟುವಟಿಕೆಗಳನ್ನು ಈಗಾಗಲೆ ಅಳವಡಿಸಿರುವ ಸಿಸಿ ಟಿವಿಗಳೊಂದಿಗೆ ನಗರ ವ್ಯಾಪ್ತಿಯಲ್ಲಿ ವಾಣಿಜ್ಯ ಮತ್ತು ಇತರೆ ಕಟ್ಟಡಗಳಲ್ಲಿ ಅಳವಡಿಸಿರುವ ಸುಮಾರು 800 ಸಿಸಿ ಟಿವಿಗಳನ್ನು ಕಣ್ಗಾವಳಿಗೆ ಬಳಸಿಕೊಳ್ಳಲಾಗುತ್ತದೆಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದರು.
ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸ್ಕೈ ಸೆಂಟ್ರಿ ನಿಯೋಜಿಸಿ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಗುತ್ತದೆ. ಇದಕ್ಕಾಗಿ ನೈಟ್ ವಿಷನ್ ಬೈನಾಕ್ಯುಲರ್ ಮತ್ತು ಕ್ಯಾಮೆರಾಗಳನ್ನು ಬಳಸಲಾಗುತ್ತದೆಂದು ತಿಳಿಸಿದ ಅವರು, ಉತ್ಸವದ ಹಂತದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗ ಕೈ ಜೋಡಿಸುವಂತೆ ಮನವಿ ಮಾಡಿದರು.
ನಗರ ವ್ಯಾಪ್ತಿಯಲ್ಲಿನ ಹಳೆಯ ಕಟ್ಟಡಗಳ ಬಗ್ಗೆ ಅದರ ಮಾಲೀಕರೆ ನಿಗಾವಹಿಸಿ, ಅಲ್ಲಿ ಯಾವುದೇ ವ್ಯಕ್ತಿಗಳು ಬರಲು ಅವಕಾಶ ನೀಡದಂತೆ ಎಸ್‌ಪಿ ಕೆ. ರಾಮರಾಜನ್ ಇದೇ ಸಂದರ್ಭ ಮನವಿ ಮಾಡಿದರು.
ನಾಲ್ಕು ಸಹಾಯವಾಣಿ ಕೇಂದ್ರ- ಮಡಿಕೇರಿ ನಗರ ವ್ಯಾಪ್ತಿಯ ಗಾಂಧಿ ಮೈದಾನ, ಜನರಲ್ ತಿಮ್ಮಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಹಳೇ ಖಾಸಗಿ ಬಸ್ ನಿಲ್ದಾಣಗಳಲ್ಲಿ ಒಟ್ಟು 4 ಸಹಾಯವಾಣಿ ಕೇಂದ್ರಗಳನ್ನು ದಸರಾ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ತುರ್ತು ಸ್ಪಂದನೆಗಾಗಿ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
::: ವಾಹನ ಪ್ರವೇಶ ನಿರ್ಬಂಧ :::
ಮಡಿಕೇರಿ ದಸರಾ ಶೋಭಾಯಾತ್ರೆ ನಡೆಯುವ ಅ.12 ರಂದು ಮಧ್ಯಾಹ್ನ 3 ಗಂಟೆಯಿAದ ಮರುದಿನ ಅ.13 ರ ಬೆಳಗೆ 10 ಗಂಟೆಯವರೆಗೆ ಮಡಿಕೇರಿ ನಗರದ ಒಳಗೆ ವಾಹನಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
::: ಆಟೋ ರಿಕ್ಷಾ ಸೌಲಭ್ಯ :::
ಮಡಿಕೇರಿ ದಸರಾ ವೀಕ್ಷಣೆಗೆ ಮಂಗಳೂರು ಕಡೆಯಿಂದ ಬರುವವರು ತಾಳತ್ ಮನೆಯ ಬಳಿ ವಾಹನ ನಿಲುಗಡೆ ಮಾಡಬೇಕು ಮತ್ತು ವಿರಾಜಪೇಟೆ ಕಡೆಯಿಂದ ಬರುವವರಿಗೆ ಮೇಕೇರಿಯವರೆಗೆ ಬರಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ತಾಳತ್‌ಮನೆ ಮತ್ತು ಮೇಕೇರಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದವರೆಗೆ ಬರಲು ಬಾಡಿಗೆ ಆಟೋ ರಿಕ್ಷಾಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಸಂದರ್ಭ ಬದಲಿ ಮಾರ್ಗಗಳ ವ್ಯವಸ್ಥೆಯನ್ನು ಮಾಡಲಾಗಿದೆಯೆಂದು ಎಸ್‌ಪಿ. ರಾಮರಾಜನ್ ತಿಳಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕರ್ನಾಟಕ ಅಂಡರ್-17 ಫುಟ್ಬಾಲ್ ತಂಡಕ್ಕೆ ಮಡಿಕೇರಿಯ ನಾಲ್ವರು ವಿದ್ಯಾರ್ಥಿಗಳು*

ಆಗಷ್ಟ್ 19, 2026

*ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 

ಆಗಷ್ಟ್ 19, 2026

*ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*

ಆಗಷ್ಟ್ 19, 2026

*ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ* 

ಆಗಷ್ಟ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, ಆ.16 NEWS DESK : ಕುಶಾಲನಗರ ತಾಲ್ಲೂಕಿನ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಬೆಂಗಳೂರಿನ…

*ವಿರಾಜಪೇಟೆ : ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು : ಕೋಮಲ*

ಆಗಷ್ಟ್ 19, 2026

*ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣಕ್ಕೆ ಹೋಮ-ಹವನ : ದಸಂಸ ಖಂಡನೆ*

ಆಗಷ್ಟ್ 19, 2026

*ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವೀಕ್ಷಣೆ*

ಆಗಷ್ಟ್ 19, 2026

*ವಿರಾಜಪೇಟೆಯಲ್ಲಿ ವಿಶ್ವಛಾಯಾಗ್ರಹಣ ದಿನಾಚರಣೆ : ಮನಸ್ಸು ಕೇಂದ್ರೀಕರಿಸಿ ಉತ್ತಮ ಛಾಯಾಚಿತ್ರ ತೆಗೆಯಿರಿ : ಡಾ.ಎಸ್.ವಿ.ನರಸಿಂಹನ್ ಕರೆ*

ಆಗಷ್ಟ್ 19, 2026

*ಆ.21 ರಂದು ರೋಟರಿ ಮಿಸ್ಟಿ ಹಿಲ್ಸ್ ನಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮ*

ಆಗಷ್ಟ್ 19, 2026

*ನಾಗರಪಂಚಮಿ ಬದಲು ಬಸವ ಪಂಚಮಿ ಆಚರಿಸಿದ ಮಾನವ ಬಂಧುತ್ವ ವೇದಿಕೆ*

ಆಗಷ್ಟ್ 19, 2026

*ಕಾಡಾನೆ ಉಪಟಳ ತಡೆಗೆ ಬಿಡುಗಡೆಗೊಂಡ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ : ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*

ಆಗಷ್ಟ್ 19, 2026

*ವಿಧಾನಸೌಧದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು*

ಆಗಷ್ಟ್ 19, 2026

*ಸಚಿವ ನಾಗೇಂದ್ರ ವಜಾಕ್ಕೆ ಒತ್ತಾಯ : ಸೋಮವಾರಪೇಟೆ ಬಿಜೆಪಿಯಿಂದ ಆ.20 ರಂದು ಮಡಿಕೇರಿಯಲ್ಲಿ ಪ್ರತಿಭಟನೆ*

ಆಗಷ್ಟ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.