Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಾರ್ಷಿಕ ಕ್ರೀಡಾಕೂಟ : ಯೋಧರ ಬಗ್ಗೆ ಗೌರವ ಇರಲಿ : ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಾರ್ಷಿಕ ಕ್ರೀಡಾಕೂಟ : ಯೋಧರ ಬಗ್ಗೆ ಗೌರವ ಇರಲಿ : ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ*

ನವೆಂಬರ್ 27, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ನ.27 NEWS DESK : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಕ್ರೀಡಾಕೂಟ ಹಮ್ಮಿಕೊಂಡು ಇಳಿವಯಸ್ಸಿನಲ್ಲಿಯೂ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಒದಗಿಸಿರುವುದು ಶ್ಲಾಘನೀಯ. ಸೈನಿಕರ ತ್ಯಾಗ, ಬಲಿದಾನ, ಸೇವಾ ಮನೋಭಾವನೆಯಿಂದಾಗಿ ದೇಶ ಸ್ವತಂತ್ರವಾಗಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯೋಧನಿಗೂ ಗೌರವ ಸಲ್ಲಿಸಬೇಕು. ಯೋಧರ ಈ ತ್ಯಾಗಕ್ಕೆ ಗೌರವ ಸಲ್ಲಿಸಬೇಕೇ ಹೊರತು ಅಸಡ್ಡೆ, ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದೆಂದು ಸಲಹೆ ನೀಡಿದರು. ಅಲ್ಲದೆ ವೈಯುಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಎಲ್ಲಾ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಕ್ರೀಡೆಯಿಂದ ಶಿಸ್ತು, ಸಂಯಮ ಮೂಡುತ್ತದೆ. ಯುವಕರಿಗೆ ಕ್ರೀಡಾಬಿಮಾನವನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ. ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸು ಶಾಂತಿಗಾಗಿ ಕ್ರೀಡೆ ಬೇಕು. ಕೇವಲ ಬಹುಮಾನ ಗೆಲ್ಲಲು ಅಲ್ಲ. ಇಂದಿನ ಯುವಕರು ಆರೋಗ್ಯದತ್ತ ನಿರ್ಲಕ್ಷ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನು ಆರೋಗ್ಯಕ್ಕಾಗಿ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಕ್ರೀಡಾ ಪ್ರೌಢಮೆ ಕೆಲವರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಮಾಜಿ ಯೋಧರಿಗೂ ವಿವಿಧ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಾರ್ಥಕತೆ ಪಡೆದುಕೊಂಡಿದೆ ಎಂದರು. ಮಾಜಿ ಯೋಧರ ಸಂಘ ಅರೆಸೇನಾಪಡೆಯ ಸಂಚಾಲಕರಾದ ನೂರೇರ ಭೀಮಯ್ಯ ಮಾತನಾಡಿ, ಇಲ್ಲಿಯವರೆಗೆ ಇಂತಹ ಯಾವುದೇ ಕ್ರೀಡಾಕೂಟಗಳಿಗೆ ಅರೆಸೇನಾಪಡೆಯ ನಿವೃತ್ತ ಯೋಧರನ್ನು ಯಾವುದೇ ಸಂಘಟನೆಗಳು ಆಹ್ವಾನಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಘಟಕ ಆಹ್ವಾನಿಸಿದ್ದು ಹೆಮ್ಮೆ ತಂದಿದೆ ಎಂದರು. ಅಂತರಾಷ್ಟ್ರೀಯ ಮಟ್ಟದ ಅಥ್ಲೀಟ್, ಮಾಜಿ ಯೋಧರು ಹಾಗೂ ಕ್ರೀಡಾ ಸಂಚಾಲಕರಾದ ಹೊಸೊಕ್ಲು ಚಿನ್ನಪ್ಪ ಮಾತನಾಡಿ, ಸಂಘದ ಮೂಲಕ ಸೈನ್ಯ ಸೇರ್ಪಡೆ ಬಯಸುವ ಮಕ್ಕಳಿಗೆ ತರಬೇತಿ, ಮಾಜಿ ಯೋಧರ ಸಂಕಷ್ಟಗಳ ಪರಿಹಾರಕ್ಕೆ ಸಂಘದ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗುತ್ತಿದೆ. ಸಂಘದಿಂದ ಮಾಜಿ ಸೈನಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಾಲಿನ ಕ್ರೀಡಾಕೂಟದಲ್ಲಿ ಮಾಜಿ ಸೈನಿಕರುಗಳಿಗೆ ವೀರನಾರಿಯರಿಗೆ, ವಿಧವೆಯರಿಗೆ, ಅವಲಂಬಿತರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಅರೆಸೇನಾ ಪಡೆಗಳ ಮಾಜಿ ಯೋಧರು ಮತ್ತು ಅವರ ಕುಟುಂಬಸ್ಥರಿಗೂ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಕೊಟ್ಟುಕತ್ತಿರ ಪಿ. ಸೋಮಣ್ಣ ಹೇಳಿದರು. ಕ್ರೀಡಾಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಆಸ್ಪರ್ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಇದೇ ಸಂದರ್ಭ ಅಗತ್ಯ ಬಿದ್ದವರಿಗೆ ಇಸಿಜಿ ಪರೀಕ್ಷೆ ಕೂಡ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸುಧೀರ್, ಮಾಜಿ ಸೈನಿಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಕ್ರೀಡಾಕೂಟದ ಸಂಚಾಲಕ ಕುಟ್ಟಂಡ ಲವ ಪೊನ್ನಪ್ಪ, ಕಾರ್ಯದರ್ಶಿ ಸಿ.ಜಿ. ತಿಮ್ಮಯ್ಯ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ವಿರಾಜಪೇಟೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿಕೊಂಡು ಕ್ಯಾಪ್ಟನ್ ಹೊಸೋಕ್ಲು ಚಿನ್ನಪ್ಪ ಅವರು ಕ್ರೀಡಾ ಜ್ಯೋತಿಯೊಂದಿಗೆ, ಬೈಕ್ ಮತ್ತು ಜೀಪ್ ಗಳಲ್ಲಿ ಮಾಜಿ ಸೈನಿಕರು, ವೀರನಾರಿಯರೊಂದಿಗೆ ಮೆರವಣಿಗೆಯಲ್ಲಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಪಾರಿವಾಳ ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ 30 ಬಗೆಯ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಗ್ಗ ಜಗ್ಗಾಟ, ರಿಲೇ ಮೊದಲಾದ ಗುಂಪು ಸ್ಪರ್ಧೆಗಳು ತಾಲ್ಲೂಕು ತಂಡಗಳ ನಡುವೆ ನಡೆಯಿತು. ಉಳಿದಂತೆ ಇತರ ಸ್ಪರ್ಧೆಗಳಲ್ಲಿ ಎಲ್ಲರೂ ಪಾಲ್ಗೊಂಡರು. ಸೈನ್ಯ ಸೇರ್ಪಡೆಗೆ ಅನುಕೂಲವಾಗುವಂತೆ 800 ಮೀಟರ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಟಿಮಾಡ ಜಿಮ್ಮಿ ಮತ್ತು ಆರು ಜನ ಪೌರ ಕಾರ್ಮೀಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಕ್ರೀಡಾಪಟುಗಳು, ಮಾಜಿ ಯೋಧರು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.