Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಂಡರ್-19 ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಚಿನ್ನ*
  • *ಪೊನ್ನಂಪೇಟೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ*
  • ಕೊಡಗು : ಹೋಟೆಲ್, ಬೇಕರಿಗಳಿಗೆ ಅನಿರೀಕ್ಷಿತ ದಾಳಿ
  • *ಮಡಿಕೇರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ : ಹಿರಿಯರನ್ನು ಗೌರವಿಸಿ, ಮಕ್ಕಳಿಗೆ ಮೌಲ್ಯವನ್ನು ಕಲಿಸಿ : ಶುಭ*
  • *ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡಾಕೂಟ*
  • *ವಕ್ಫ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕಲೀಲ್ ಬಾಷಾ ಅಸಮಾಧಾನ*
  • *ಸಿದ್ಧಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ; ಕೊಡವಲ್ಯಾಂಡ್ ಸ್ವಾಯತ್ತತೆಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು: ಎನ್.ಯು. ನಾಚಪ್ಪ; 2027ರ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಲು ಆಗ್ರಹ*
  • *7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಅಜ್ಜ– ಅಜ್ಜಿಯರ ದಿನಾಚರಣೆ*
  • *ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಖಂಡನೀಯ : ಕೊಡಗು ಬಿಜೆಪಿ ಅಸಮಾಧಾನ*
  • *ಅ.4ರಂದು ಮಡಿಕೇರಿಯಲ್ಲಿ “ಓಣಾ ಘೋಷಂ ಓಣಂ ಸಧ್ಯ” ಕಾರ್ಯಕ್ರಮ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೋಮವಾರಪೇಟೆ : ಮತದಾನ ಅತ್ಯಮೂಲ್ಯ ಹಕ್ಕು : ನ್ಯಾಯಾಧೀಶೆ ಹೆಚ್.ಸಿ.ರೇಖಾ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೋಮವಾರಪೇಟೆ : ಮತದಾನ ಅತ್ಯಮೂಲ್ಯ ಹಕ್ಕು : ನ್ಯಾಯಾಧೀಶೆ ಹೆಚ್.ಸಿ.ರೇಖಾ*

ಜನವರಿ 25, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link


ಸೋಮವಾರಪೇಟೆ ಜ.26 NEWS DESK : ಮತದಾನ ಎಂಬುದು ಸಂವಿಧಾನ ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಸಿ.ರೇಖಾ ಹೇಳಿದರು. ತಾಲ್ಲೂಕು ಆಡಳಿತ ಮತ್ತು ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೊತೆಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಆರ್ಹ ಪ್ರತಿನಿಧಿಯನ್ನು ಅರಿಸುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಯುವಜನಾಂಗ ಮತ್ತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ತಾಲ್ಲೂಕು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿ, ಯುವ ಮತದಾರರ ಮತದಾನ ಶೇ.100 ರಷ್ಟು ಪ್ರಗತಿ ಸಾಧಿಸಬೇಕೆಂಬುದು ಚುನಾವಣಾ ಅಯೋಗದ ನಿರೀಕ್ಷೆಯಿದೆ. ಯುವ ಸಮುದಾಯ ಮತದಾನ ಮಾಡಬೇಕು. ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು. 18 ವರ್ಷ ತುಂಬಿದ ತಕ್ಷಣ ಅಗತ್ಯ ದಾಖಲಾತಿಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಸುಭದ್ರ ಭಾರತ ಕಟ್ಟುವ ಜವಾಬ್ದಾರಿ ಯುವಜನಾಂಗ ಕೈಯಲ್ಲಿದೆ ಎಂದು ಹೇಳಿದರು. ಸಾವರ್ತಿಕ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನವಾಗುತ್ತಿಲ್ಲ. ಆರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್‍ಗೌಡ ಮಾತನಾಡಿ, ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಉದ್ದೇಶದಿಂದ 1950ರಲ್ಲಿ ಸ್ಥಾಪನೆಯಾದ ಚುನಾವಣಾ ಅಯೋಗದ ಸಂಸ್ಥಾಪನ ದಿನದ ನೆನಪಿಗಾಗಿ 2011ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ದೇಶದ ಪ್ರಗತಿಗೆ ಪ್ರತಿಯೊಬ್ಬ ಪ್ರಜೆಯ ಮತ ಅಗತ್ಯ. ವಿದ್ಯಾರ್ಥಿಗಳು ಮತದಾನ ಮಾಡಬೇಕು. ಅಭ್ಯರ್ಥಿಗಳು ಯೋಗ್ಯರಲ್ಲ ಎನಿಸಿದರೆ, ನೋಟದಲ್ಲೂ ಮತ ಚಲಾಯಿಸಬಹುದು ಎಂದು ಹೇಳಿದರು. ಸೋಮವಾರಪೇಟೆ ಜೆಎಂಎಫ್‍ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಗೋಪಾಲಕೃಷ್ಣ, ಸಿಆರ್‍ಪಿ ಪ್ರೇಮಾ ಮತದಾನದ ಮಹತ್ವದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲ ರಜಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ರೀದೇವಿ, ಉಪನೋಂದಣಾಧಿಕಾರಿ ಮಹಮ್ಮದ್ ಆಲಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಅಬಕಾರಿ ಉಪ ನಿರೀಕ್ಷಕರಾದ ಸುಮತಿ ಹಾಗು ಶಿಕ್ಷಕಿಯರಾದ ಸೌಮ್ಯ, ದಿವ್ಯ, ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*ಅಂಡರ್-19 ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಚಿನ್ನ*

ಅಕ್ಟೋಬರ್ 1, 2026

*ಪೊನ್ನಂಪೇಟೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ*

ಅಕ್ಟೋಬರ್ 1, 2026

ಕೊಡಗು : ಹೋಟೆಲ್, ಬೇಕರಿಗಳಿಗೆ ಅನಿರೀಕ್ಷಿತ ದಾಳಿ

ಅಕ್ಟೋಬರ್ 1, 2026

*ಪೊನ್ನಂಪೇಟೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ*

ಅಕ್ಟೋಬರ್ 1, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.1 NEWS DESK : ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಸ್ವಚ್ಛತಾ ಹೀ ಸೇವಾ-2026 ಪಾಕ್ಷಿಕ ಕಾರ್ಯಕ್ರಮಕ್ಕೆ…

ಕೊಡಗು : ಹೋಟೆಲ್, ಬೇಕರಿಗಳಿಗೆ ಅನಿರೀಕ್ಷಿತ ದಾಳಿ

ಅಕ್ಟೋಬರ್ 1, 2026

*ಮಡಿಕೇರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ : ಹಿರಿಯರನ್ನು ಗೌರವಿಸಿ, ಮಕ್ಕಳಿಗೆ ಮೌಲ್ಯವನ್ನು ಕಲಿಸಿ : ಶುಭ*

ಅಕ್ಟೋಬರ್ 1, 2026

*ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡಾಕೂಟ*

ಅಕ್ಟೋಬರ್ 1, 2026

*ವಕ್ಫ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕಲೀಲ್ ಬಾಷಾ ಅಸಮಾಧಾನ*

ಅಕ್ಟೋಬರ್ 1, 2026

*ಸಿದ್ಧಾಪುರದಲ್ಲಿ ಸಿಎನ್‌ಸಿ ಮಾನವ ಸರಪಳಿ ಕಾರ್ಯಕ್ರಮ; ಕೊಡವಲ್ಯಾಂಡ್ ಸ್ವಾಯತ್ತತೆಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು: ಎನ್.ಯು. ನಾಚಪ್ಪ; 2027ರ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಲು ಆಗ್ರಹ*

ಅಕ್ಟೋಬರ್ 1, 2026

*7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಅಜ್ಜ– ಅಜ್ಜಿಯರ ದಿನಾಚರಣೆ*

ಅಕ್ಟೋಬರ್ 1, 2026

*ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಖಂಡನೀಯ : ಕೊಡಗು ಬಿಜೆಪಿ ಅಸಮಾಧಾನ*

ಅಕ್ಟೋಬರ್ 1, 2026

*ಅ.4ರಂದು ಮಡಿಕೇರಿಯಲ್ಲಿ “ಓಣಾ ಘೋಷಂ ಓಣಂ ಸಧ್ಯ” ಕಾರ್ಯಕ್ರಮ*

ಅಕ್ಟೋಬರ್ 1, 2026

*ಅ.6ರಂದು ಪೊನ್ನಂಪೇಟೆಯಲ್ಲಿ ರಾಜ್ಯ ಮಟ್ಟದ ಜೇನು ಕೃಷಿಕರ ಸಮಾವೇಶ*

ಅಕ್ಟೋಬರ್ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.