Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಹದಗೆಟ್ಟ ಸಂಪಿಗೆಕಟ್ಟೆ ರಸ್ತೆ : ತುರ್ತು ದುರಸ್ತಿಗೆ ಆಮ್ ಆದ್ಮಿ ಪಾರ್ಟಿ ಯುವ ಘಟಕ ಆಗ್ರಹ*
  • *ಕುಶಾಲನಗರ : ಶರಣ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನೆ*
  • *ಮಿತಿ ಮೀರಿದ ವನ್ಯಜೀವಿ ದಾಳಿ : ಐದು ಜಿಲ್ಲೆಗಳಿಂದ ವಿಧಾನಸೌಧಕ್ಕೆ ಮುತ್ತಿಗೆ : ಬಿಜೆಪಿ ನಿರ್ಧಾರ*
  • *ಶರಣ ಸಾಹಿತ್ಯ ಸಮ್ಮೇಳನ : ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ*
  • *ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಆರ್‌ಎಫ್ ಅಡಿಯಲ್ಲಿ ರೂ.22 ಕೋಟಿ ಮಂಜೂರು : ಸಂಸದ  ಯದುವೀರ್ ಒಡೆಯರ್*
  • *ಜೂ.14ಕ್ಕೆ ಮರಾಠ-ಮರಾಟಿ ಸಮಾಜದ ವಾರ್ಷಿಕ ಮಹಾಸಭೆ*
  • *ಮಡಿಕೇರಿಯಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ*
  • *ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ*
  • *ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ : ಪ್ರಕೃತಿ, ವನ್ಯಜೀವಿಗಳ ಮೇಲೆ ಕಾಳಜಿ ಅಗತ್ಯ : ಸಂಸದ ಯದುವೀರ್ ಒಡೆಯರ್*
  • *ಬಿಜೆಪಿ ಪಕ್ಷದ ವಿರಾಜಪೇಟೆ ಮಂಡಲ ಕಚೇರಿಯನ್ನು ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿಗೆ ಸುವರ್ಣ ಮಹೋತ್ಸವದ ಸಂಭ್ರಮ : ಜ.28 ರಂದು ‘ದಶಮಿ’ ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ಸಮಾರಂಭ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿಗೆ ಸುವರ್ಣ ಮಹೋತ್ಸವದ ಸಂಭ್ರಮ : ಜ.28 ರಂದು ‘ದಶಮಿ’ ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ಸಮಾರಂಭ

ಜನವರಿ 25, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜ.25 : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿ ಆರಂಭಗೊಂಡು ಐವತ್ತು ವಸಂತಗಳು ಪೂರೈಸಿ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ, ಸಮಿತಿಯ ಗತ ಇತಿಹಾಸವನ್ನು ತೆರೆದಿಡುವ ಪ್ರಯತ್ನವಾಗಿ ರಚಿಸಿರುವ ‘ದಶಮಿ’ ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ಸಮಾರಂಭ ಜ.28 ರಂದು ನಗರದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ನ ಟ್ರಸ್ಟಿಗಳು ಹಾಗೂ ಪುಸ್ತಕದ ಸಂಪಾದಕರಾದ ಟಿ.ಪಿ.ರಮೇಶ್, ಅಂದು ಸಂಜೆ 4 ಗಂಟೆಗೆ ರಾಜಾಸೀಟು ಬಳಿಯ ರಾಜದರ್ಶನ್ ಸಭಾಂಗಣದಲ್ಲಿ ‘ದಶಮಿ’ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಪುಸ್ತಕವನ್ನು ಶ್ರೀಧರ ಹೂವಲ್ಲಿ ಅವರ ಉಪ ಸಂಪಾದಕತ್ವ, ಡಾ.ದೇವದಾಸ್ ಅವರ ಪೋಷಕ ಸಂಪಾದಕತ್ವದ ಸಹಕಾರದೊಂದಿಗೆ, ಲಭ್ಯ ಮಾಹಿತಿಗಳನ್ನು ಕಲೆ ಹಾಕಿ ರಚಿಸಲಾಗಿದೆ. ಇದರ ಹಿಂದೆ ಮುಂದಿನ ಪೀಳಿಗೆಗೆ ಅಗತ್ಯ ಮಾಹಿತಿ ಒದಗಿಸುವ ಉದ್ದೇಶ ಇರುವುದಾಗಿ ತಿಳಿಸಿದರು. ಕಳೆದ 50 ವರ್ಷಗಳಲ್ಲಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ದಸರಾ ಸಮಿತಿಯ ಅಧ್ಯಕ್ಷರಾಗಿ 23 ಮಂದಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 6 ಮಂದಿ ಅಧ್ಯಕ್ಷರು ನಮ್ಮೊಂದಿಗಿಲ್ಲ. ಸಮಾರಂಭದಲ್ಲಿ ಪ್ರಸ್ತುತ ಇರುವ ಮಾಜಿ ಅಧ್ಯಕ್ಷರು ಮತ್ತು ಅಗಲಿರುವವರ ಕುಟುಂಬಸ್ಥರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಇದೇ ಸಂದರ್ಭ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಹಿರಿಯ 20 ಮಂದಿ ಸದಸ್ಯರನ್ನು ಗೌರವಿಸಲಾಗುತ್ತದೆ. ಇವರಲ್ಲಿ 8 ಮಂದಿ ದೈವಾಧೀನರಾಗಿದ್ದು, ಇವರ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು. ಹತ್ತು ಬಾರಿ ಮಂಟಪಕ್ಕೆ ಪ್ರಥಮ ಬಹುಮಾನ- ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಶ್ರೀ ಕುಂದುರುಮೊಟ್ಟೆ ದೇವಾಲಯ ವಿಜಯದಶಮಿಯ ಶೋಭಾಯಾತ್ರೆಯಲ್ಲಿ 10 ಬಾರಿ ಪ್ರಥಮ ಸ್ಥಾನವನ್ನು, 7 ಬಾರಿ ದ್ವಿತೀಯ, 6 ಬಾರಿ ತೃತೀಯ ಹಾಗೂ 3 ಬಾರಿ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದೆ. ಪ್ರಸ್ತುತ ದಸರಾ ಉತ್ಸವ ಸಮಿತಿ ರಿಜಿಸ್ಟರ್ಡ್ ಸಂಸ್ಥೆಯಾಗಿದ್ದು, ಇದರಲ್ಲಿ ಜಾತಿ ಮತ ಭೇದಗಳಿಲ್ಲದೆ 300 ಕ್ಕೂ ಅಧಿಕ ಸದಸ್ಯರು ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿದರು. ಸಮಾರಂಭ- ಅಂದು ಸಂಜೆ 4 ಗಂಟೆಗೆ ರಾಜಾಸೀಟು ಸಮೀಪದ ರಾಜದರ್ಶನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಉದ್ಘಾಟಿಸಲಿದ್ದು, ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯದ ಸಂಚಾಲಕ ಮೌಲಾನ ಯು.ಅಬ್ದುಸಲಾಮ್, ಮಡಿಕೇರಿ ಸಂತ ಮೈಕಲರ ಚರ್ಚ್ ನ ಧರ್ಮಾಧಿಕಾರಿ ರೆ.ಫಾ.ಜಾರ್ಜ್ ದೀಪಕ್ ಎ. ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆಂದರು. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಹಿರಿಯ ಟ್ರಸ್ಟಿ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ‘ದಶಮಿ’ ಪುಸ್ತಕ ಬಿಡುಗಡೆ ಮಾಡಲಿದ್ದು, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ರವಿ ಕರ್ಕೆರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಟ್ರಸ್ಟಿ ಹಾಗೂ ದಶಮಿ ಸ್ಮರಣ ಸಂಚಿಕೆ ಸಂಪಾದಕ ಟಿ.ಪಿ.ರಮೇಶ್, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ದಶಮಿ ಸ್ಮರಣ ಸಂಚಿಕೆ ಪೋಷಕ ಸಂಪಾದಕ ಡಾ.ಹೆಚ್.ವಿ.ದೇವದಾಸ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು. ಫೆ.27 ರಂದು ನಾಗಬನ ಪ್ರತಿಷ್ಟಾಪನೆ- ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇಗುಲದಲ್ಲಿ ನೂತನವಾಗಿ ನಾಗಬನವನ್ನು ಸಜ್ಜುಗೊಳಿಸಲಾಗುತ್ತಿದ್ದು, ಮುರುಡೇಶ್ವರದ ಶಿಲ್ಪಿಗಳು ಅಗತ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇದರ ಪ್ರತಿಷ್ಟಾಪನಾ ಕಾರ್ಯ ಫೆ.7 ರಂದು ನಡೆಯಲಿದೆಯೆಂದು ಟಿ.ಪಿ. ರಮೇಶ್ ಮಾಹಿತಿ ನೀಡಿದರು. ಮಾರ್ಚ್ನಲ್ಲಿ ದೈವ ಕೋಲ ಉತ್ಸವ- ದೇವಸ್ಥಾನದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿರುವ ದೈವ ಕೋಲ ಉತ್ಸವ ಈ ಬಾರಿ ಮಾ.27 ಮತ್ತು 28 ರಂದು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ರವಿ ಕರ್ಕೆರ, ಮಾಜಿ ಅಧ್ಯಕ್ಷರಾದ ನವೀನ್ ಪೂಜಾರಿ, ಮನು ಮಂಜುನಾಥ್, ಕಾರ್ಯಾಧ್ಯಕ್ಷ ಹೇಮ್ ಕುಮಾರ್ ಹಾಗೂ ಸಂಚಾಲಕ ಮಂಜುನಾಥ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಹದಗೆಟ್ಟ ಸಂಪಿಗೆಕಟ್ಟೆ ರಸ್ತೆ : ತುರ್ತು ದುರಸ್ತಿಗೆ ಆಮ್ ಆದ್ಮಿ ಪಾರ್ಟಿ ಯುವ ಘಟಕ ಆಗ್ರಹ*

ಜೂನ್ 10, 2026

*ಕುಶಾಲನಗರ : ಶರಣ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನೆ*

ಜೂನ್ 10, 2026

*ಮಿತಿ ಮೀರಿದ ವನ್ಯಜೀವಿ ದಾಳಿ : ಐದು ಜಿಲ್ಲೆಗಳಿಂದ ವಿಧಾನಸೌಧಕ್ಕೆ ಮುತ್ತಿಗೆ : ಬಿಜೆಪಿ ನಿರ್ಧಾರ*

ಜೂನ್ 10, 2026

*ಕುಶಾಲನಗರ : ಶರಣ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನೆ*

ಜೂನ್ 10, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಜೂ.10 NEWS DESK : ಕುಶಾಲನಗರದಲ್ಲಿ ಜೂ.23 ರಂದು ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನದ…

*ಮಿತಿ ಮೀರಿದ ವನ್ಯಜೀವಿ ದಾಳಿ : ಐದು ಜಿಲ್ಲೆಗಳಿಂದ ವಿಧಾನಸೌಧಕ್ಕೆ ಮುತ್ತಿಗೆ : ಬಿಜೆಪಿ ನಿರ್ಧಾರ*

ಜೂನ್ 10, 2026

*ಶರಣ ಸಾಹಿತ್ಯ ಸಮ್ಮೇಳನ : ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ*

ಜೂನ್ 10, 2026

*ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಆರ್‌ಎಫ್ ಅಡಿಯಲ್ಲಿ ರೂ.22 ಕೋಟಿ ಮಂಜೂರು : ಸಂಸದ  ಯದುವೀರ್ ಒಡೆಯರ್*

ಜೂನ್ 10, 2026

*ಜೂ.14ಕ್ಕೆ ಮರಾಠ-ಮರಾಟಿ ಸಮಾಜದ ವಾರ್ಷಿಕ ಮಹಾಸಭೆ*

ಜೂನ್ 9, 2026

*ಮಡಿಕೇರಿಯಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ*

ಜೂನ್ 9, 2026

*ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ*

ಜೂನ್ 9, 2026

*ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ : ಪ್ರಕೃತಿ, ವನ್ಯಜೀವಿಗಳ ಮೇಲೆ ಕಾಳಜಿ ಅಗತ್ಯ : ಸಂಸದ ಯದುವೀರ್ ಒಡೆಯರ್*

ಜೂನ್ 9, 2026

*ಬಿಜೆಪಿ ಪಕ್ಷದ ವಿರಾಜಪೇಟೆ ಮಂಡಲ ಕಚೇರಿಯನ್ನು ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್*

ಜೂನ್ 9, 2026

*ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ : ಮಾದಕ ವ್ಯಸನದಿಂದ ದೂರವಿರಲು ಎನ್.ಜೆ.ಲತಾ ಕರೆ*

ಜೂನ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.