Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗ್ಯಾರಂಟಿ ಯೋಜನೆಗಳ ಮಡಿಕೇರಿ ತಾಲ್ಲೂಕು ಸಮಿತಿ ಸಭೆ : ಹಲವು ಫಲಾನುಭವಿಗಳಿಗೆ ಒಂದೇ ಖಾತೆಗೆ ಯೋಜನೆಯ ಧನಸಹಾಯ*
  • *ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ : ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬಕ್ ವಿತರಣೆ*
  • *ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ  ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ*
  • *ಜು.3 ರಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಕೆ.ಎನ್.ಪಣೀಂದ್ರ ಕೊಡಗಿಗೆ ಭೇಟಿ*
  • *ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ : ಮನೆ-ಮನೆ ಪರಿಶೀಲನೆ ಆರಂಭ, ದಾಖಲೆ ಕಡ್ಡಾಯ*
  • *ವಿಬಿಜಿ ರಾಮ್ ಜಿ ಯೋಜನೆ : ವಿರಾಜಪೇಟೆಯಲ್ಲಿ ಅನುಷ್ಠಾನಕ್ಕೆ ಸಿದ್ಧತೆ*
  • *ಕನ್ನಡ ಜಾಗೃತಿ ಸಮಿತಿ ಸಭೆ : ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ : ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಹಾದಿಮನಿ*
  • *ಕಾನ್‍ಬೈಲ್ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*
  • *ಕೊಡಗು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ : ಮನುಜ ಮತದ ತತ್ವದಡಿ ಕರ್ತವ್ಯ ಪರರಾಗಿ : ಸಾಬು ವರ್ಗಿಸ್ ಕರೆ*
  • *ಹೋಂಸ್ಟೇಯಲ್ಲಿ ಜೂಜಾಟ: 11 ಲಕ್ಷ ರೂ. ನಗದು ಸಹಿತ 28 ಮಂದಿ ಪೊಲೀಸ್ ವಶ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಹಾಲಿ, ಮಾಜಿ ಶಾಸಕರು, ಸಂಸದರು ಭಿನ್ನಾಭಿಪ್ರಾಯ ಶಮನಗೊಳಿಸಲಿ : ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಹಾಲಿ, ಮಾಜಿ ಶಾಸಕರು, ಸಂಸದರು ಭಿನ್ನಾಭಿಪ್ರಾಯ ಶಮನಗೊಳಿಸಲಿ : ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು*

ಜನವರಿ 25, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಜ.25 : ಕೊಡಗಿನ ಅಭಿವೃದ್ಧಿ, ರಾಷ್ಟ್ರ ರಕ್ಷಣೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿರುವ ಜಿಲ್ಲೆಯ ಎರಡು ಪ್ರಬಲ ಸಮುದಾಯಗಳಾದ ಅರೆಭಾಷಾ ಗೌಡ ಸಮೂಹ ಮತ್ತು ಕೊಡವ ಸಮುದಾಯಗಳ ನಡುವೆ ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಿರುವ ಭಿನ್ನಾಭಿಪ್ರಾಯದ ಬಗೆಹರಿಕೆಗೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮುಂದಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ಎರಡು ಜನಾಂಗಗಳು ಹೋರಾಟದ ಹಾದಿಯಲ್ಲಿ ಮುನ್ನಡೆದರೆ, ಪ್ರವಾಸಿ ಕೇಂದ್ರವಾದ ಕೊಡಗಿನ ಬಗ್ಗೆ ಹೊರ ಭಾಗಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವಿದೆ ಎನ್ನುವ ಭಾವನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ಸಮುದಾಯಗಳ ನಡುವಿನ ಭಿನ್ನಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ, ಮಧ್ಯಸ್ಥಿಕೆ ವಹಿಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕಾದ ಜಿಲ್ಲೆಯ ಶಾಸಕರು ಮೌನವಾಗಿರುವುದೇ ಕಾರಣ ಎಂದು ಆರೋಪಿಸಿದರು. ಗಂಭೀರ ವಿಚಾರವನ್ನು ಜಿಲ್ಲಾಡಳಿತ ನೀಡುವ ಗಡುವಿನ ಮೂಲಕ ಇತ್ಯರ್ಥಪಡಿಸುವುದು ಕಷ್ಟ ಸಾಧ್ಯವೆಂದರು. ::: ದುರಸ್ತಿಗೆ ಆಗ್ರಹ :::
ಕಳೆೆದ ಚುನಾವಣೆಯ ಹಂತದಲ್ಲಿ ರಾಜಕೀಯ ಕಾರಣಗಳಿಗೆ ಕೇಂದ್ರ ಬಿಂದುವಾಗಿದ್ದ ಜಿಲ್ಲಾಡಳಿತ ಭವನದ ತಡೆಗೋಡೆಯ ವಿಚಾರ, ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಡೆಗೋಡೆಯ ದುರಸ್ತಿ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲವೆಂದು ಅಮೀನ್ ಮೊಹಿಸಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ್ದೆಂದು ತಿಳಿಸಿ ನಿರ್ಮಿಸಲಾದ ತಡೆಗೋಡೆ, ಕುಸಿತದ ಭೀತಿಗೆ ಒಳಗಾದ ಬಳಿಕ ಅದನ್ನು ದುರಸ್ತಿ ಪಡಿಸುವ ಕಾರ್ಯ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ತುರ್ತಾಗಿ ಕಾಮಗಾರಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ಅಸಹಾಯಕರಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖಾ ಸಚಿವರು ಏಪ್ರಿಲ್ ಅಂತ್ಯದೊಳಗೆ ದುರಸ್ತಿ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ. ಅದರಂತೆಯೆ ಕಾಮಗಾರಿ ನಡೆಯದಿದ್ದಲ್ಲಿ ಎಸ್‌ಡಿಪಿಐ ಬೀದಿಗಿಳಿದು ಹೋರಾಟ ನಡೆಸಲಿದೆಯೆಂದು ಎಚ್ಚರಿಕೆ ನೀಡಿದರು. ::: ಭೂ ಗುತ್ತಿಗೆ ಆದೇಶ ರದ್ದುಗೊಳಿಸಿ ::: ರಾಜ್ಯ ವ್ಯಾಪಿ ಒಟ್ಟಾಗಿ 2.58 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಸಿ ಮತ್ತು ಡಿ ಜಮೀನುಗಳನ್ನು ಅರಣ್ಯ ಇಲಾಖೆಗೆ ಲ್ಯಾಂಡ್ ಬ್ಯಾಂಕ್‌ನಡಿ ವರ್ಗಾವಣೆ ಮಾಡಿದೆ. ಇದರಲ್ಲಿ ಜಿಲ್ಲೆಯ ಸುಮಾರು 33,377 ಎಕರೆ ಸಿ ಮತ್ತು ಡಿ ಭೂ ಇದೆ. ಈ ಜಾಗವನ್ನು ಮರಳಿ ಕಂದಾಯ ಇಲಾಖೆಗೆ ಪಡೆದುಕೊಂಡು ಭೂ ರಹಿತರಿಗೆ ಹಂಚಬೇಕೆಂದು ಅಮೀನ್ ಮೊಹಿಸಿನ್ ಆಗ್ರಹಿಸಿದರು. ಎಕರೆಯೊಂದಕ್ಕೆ 1 ಸಾವಿರ ರೂ.ನಂತೆ ಗರಿಷ್ಠ 25 ಎಕರೆ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ನೀಡುವ ಆದೇಶವನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಬೇಕು ಮತ್ತು ಕಳೆದ ಹಲವಾರು ತಿಂಗಳಿನಿಂದ ನಡೆದ ಅಕ್ರಮ ಸಕ್ರಮ ಸಮಿತಿ ಸಭೆಯನ್ನು ನಡೆಸಿ ಭೂ ರಹಿತರಿಗೆ ನಿವೇಶನಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಭೂಗುತ್ತಿದೆ ಆದೇಶ ರದ್ದುಗೊಳಿಸುವಂತೆ ಜಿಲ್ಲೆಯ ಇಬ್ಬರು ಶಾಸಕರು ಅಧಿವೇಶನದಲ್ಲಿ ಒತ್ತಾಯಿಸಬೇಕೆಂದು ತಿಳಿಸಿದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ಪ್ರಬಲ ಜನಾಂಗಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮುಂದೆ ಬಾರದಿರುವುದು ವಿಷಾದನೀಯವೆಂದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ನಗರಾಧ್ಯಕ್ಷ ರಿಜ್ವಾನ್, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಜಲೀಲ್, ಮೇರಿ ವೇಗಸ್ ಹಾಗೂ ನಗರ ಸಮಿತಿ ಸದಸ್ಯ ಉಮ್ಮರ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗ್ಯಾರಂಟಿ ಯೋಜನೆಗಳ ಮಡಿಕೇರಿ ತಾಲ್ಲೂಕು ಸಮಿತಿ ಸಭೆ : ಹಲವು ಫಲಾನುಭವಿಗಳಿಗೆ ಒಂದೇ ಖಾತೆಗೆ ಯೋಜನೆಯ ಧನಸಹಾಯ*

ಜುಲೈ 1, 2026

*ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ : ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬಕ್ ವಿತರಣೆ*

ಜುಲೈ 1, 2026

*ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ  ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ*

ಜುಲೈ 1, 2026

*ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆ : ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬಕ್ ವಿತರಣೆ*

ಜುಲೈ 1, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಜು.1 NEWS DESK : ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ…

*ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ  ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ*

ಜುಲೈ 1, 2026

*ಜು.3 ರಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಕೆ.ಎನ್.ಪಣೀಂದ್ರ ಕೊಡಗಿಗೆ ಭೇಟಿ*

ಜುಲೈ 1, 2026

*ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ : ಮನೆ-ಮನೆ ಪರಿಶೀಲನೆ ಆರಂಭ, ದಾಖಲೆ ಕಡ್ಡಾಯ*

ಜುಲೈ 1, 2026

*ವಿಬಿಜಿ ರಾಮ್ ಜಿ ಯೋಜನೆ : ವಿರಾಜಪೇಟೆಯಲ್ಲಿ ಅನುಷ್ಠಾನಕ್ಕೆ ಸಿದ್ಧತೆ*

ಜುಲೈ 1, 2026

*ಕನ್ನಡ ಜಾಗೃತಿ ಸಮಿತಿ ಸಭೆ : ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ : ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಹಾದಿಮನಿ*

ಜುಲೈ 1, 2026

*ಕಾನ್‍ಬೈಲ್ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ*

ಜುಲೈ 1, 2026

*ಕೊಡಗು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ : ಮನುಜ ಮತದ ತತ್ವದಡಿ ಕರ್ತವ್ಯ ಪರರಾಗಿ : ಸಾಬು ವರ್ಗಿಸ್ ಕರೆ*

ಜುಲೈ 1, 2026

*ಹೋಂಸ್ಟೇಯಲ್ಲಿ ಜೂಜಾಟ: 11 ಲಕ್ಷ ರೂ. ನಗದು ಸಹಿತ 28 ಮಂದಿ ಪೊಲೀಸ್ ವಶ*

ಜುಲೈ 1, 2026

*ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ : ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ*

ಜುಲೈ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.