

ಮಡಿಕೇರಿ ಜ.27 NEWS DESK : ಪುಟಾಣಿ ವಿಜ್ಞಾನ ಬಳಗ ದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆ ಯಲ್ಲಿ ಚೇರಂಬಾಣೆ ಕೊಟ್ಟೂರ್ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಒಟ್ಟು 72 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಭವಿಷ್ಯ ಕೆ. ಬಿ ರಾಷ್ಟ್ರಮಟ್ಟದಲ್ಲಿ ಐದನೇ ಸ್ಥಾನ, 7ನೇ ತರಗತಿಯ ಜಿಶ್ಮಿತ ಬಿ. ಜಿ ಐದನೇ ಸ್ಥಾನ,ರಾಜ್ಯಮಟ್ಟದಲ್ಲಿ 6ನೇ ತರಗತಿಯ ತನ್ಮಯಿ ಕೆ. ಕೆ 5ನೇ ಸ್ಥಾನ,7ನೇ ತರಗತಿಯ ತಾನಿಯ ಕೆ. ಟಿ . 6ನೇ ಸ್ಥಾನ,ಜಿಲ್ಲಾ ಮಟ್ಟದಲ್ಲಿ 6ನೇ ತರಗತಿಯ ಶ್ರಿಹರಿ ಪೊನ್ನಪ್ಪ 6ನೇ ಸ್ಥಾನ, 7ನೇ ತರಗತಿಯ ವರುಣಿಕ ಪಿ. ಎಂ. 6ನೇ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 6ನೇ ತರಗತಿಯ ವಾಸವಿ ಪಿ.ವಿ, 4ನೇ ಸ್ಥಾನ 7ನೇ ತರಗತಿಯ ದಕ್ಷ ಬೊಳ್ಳಮ್ಮ 4ನೇ ಸ್ಥಾನಪಡೆದು ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಕವನ್ ಕುದುಪಜೆ ಹಾಗೂ ವಿಜ್ಞಾನ ಶಿಕ್ಷಕಿ ಕೃತಿಕ ಹಾಜರಿದ್ದರು.









