
ನಾಪೋಕ್ಲು ಜ.27 NEWS DESK : ನಾಪೋಕ್ಲು ನಾಡಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷ ಆರ್.ರವಿಕುಮಾರ್ ಧ್ವಜಾರೋಹಣ ನೆರವೇರಿಸಿ, ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಕಂದಾಯ ಗ್ರಾಮ ಆಡಳಿತ ಅಧಿಕಾರಿಗಳಾದ ಜನಾರ್ಧನ್, ಅಮೃತ, ಸ್ವಾತಿ, ದಾನೇಶ್ವರಿ, ಲೇಖನ, ಜನಸೇವಕರಾದ ತಿಮ್ಮಣ್ಣ, ಸೋಮಯ್ಯ, ಪೂಣಚ್ಚ, ಸಂಜಯ್, ಲಾಲು, ಪ್ರದೀಪ್ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









