Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ : ಶ್ರದ್ಧಾಭಕ್ತಿಯಿಂದ ಜರುಗಿದ ಸಂತ ಅಂತೋಣಿ ಅವರ ವಾರ್ಷಿಕೋತ್ಸವ*
  • *ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*
  • *ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*
  • *ಪೊನ್ನಂಪೇಟೆ : ಮೇ 12 ರಂದು ವಿವಿಧೆಡೆಯಿಂದ ವಿದ್ಯುತ್ ವ್ಯತ್ಯಯ*
  • *ಮೇ 13 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಸಿಸಿ ರಸ್ತೆ ಕಾಮಗಾರಿ : ಸೋಮವಾರಪೇಟೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ*
  • *ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*
  • *ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ*
  • *ಕೊಡಗು : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್.ಹಾದಿಮನಿ ಅಧಿಕಾರ ಸ್ವೀಕಾರ*
  • *ಅಹೋರಾತ್ರಿ ಪ್ರತಿಭಟನೆ ಅರ್ಥಹೀನ : ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಬಡವರಿಗೆ ನಿವೇಶನ ನೀಡಲು ಆಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*

ಜನವರಿ 27, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.27 NEWS DESK : ಅಂಗವಿಕಲತೆಯಿಂದ ಸಮಾಜದ ಮುಖ್ಯ ವಾಹಿನಿಯಿಂದ ದೂರ ಸರಿದವರಿಗೆ ‘ಕೃತಕ ಅಂಗಾಂಗ’ಗಳನ್ನು ಉಚಿತವಾಗಿ ನೀಡಿ, ನೊಂದವರಲ್ಲಿ ಜೀವನೋತ್ಸಾಹವನ್ನು ತುಂಬುವ ಮಹತ್ವದ ಶಿಬಿರ ನಗರದಲ್ಲಿ ನಡೆಯಿತು. ಕೊಡಗು ಜಿಲ್ಲೆಯ ನ್ಯಾಷನಲ್ ಮೆಡಿಕೋಸ್ ಸಂಸ್ಥೆ, ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್, ಸ್ವಸ್ಥ ಕೂರ್ಗ್ ಫೌಂಡೇಶನ್ ಸಹಯೋಗದಲ್ಲಿ  ನಗರದ ಮೈತ್ರಿ ಸಭಾಂಗಣದಲ್ಲಿ ಆಯೋಜಿತ ‘ಕೃತಕ ಅಂಗಾಂಗಗಳ ಉಚಿತ ಜೋಡಣೆ, ವಿತರಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರದಲ್ಲಿ 58 ಮಂದಿ ಕೃತಕ ಅಂಗಾಂಗಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇವರಿಗೆ ನೆರವನ್ನು ಒದಗಿಸುವ ಕಾರ್ಯ ನಡೆಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಬೃಹತ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಅಂಗವೈಕಲ್ಯತೆಯಿಂದ ಬಳಲುತ್ತಿರುವವರಿಗೆ, ಕೃತಕ ಅಂಗಾಂಗಳನ್ನು ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಈ ಶಿಬಿರ ಶ್ಲಾಘನೀಯ. ರಾಜ್ಯ ಸರ್ಕಾರವು ಆರೋಗ್ಯ ಇಲಾಖೆಯ ಮೂಲಕ ಬಡ ಮಂದಿಗೆ ಅಗತ್ಯವಾದ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತನ್ನು ನೀಡಿರುವುದಾಗಿ ತಿಳಿಸಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಅಂಗವೈಕಲ್ಯತೆ ಎನ್ನುವುದು ಎಂದಿಗೂ ಸಾಧನೆಗೆ ಅಡ್ಡಿಯಾಗಬಾರದೆಂದು ತಿಳಿಸಿ, ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ನಾಲ್ಕೈದು ಮಂದಿಗೆ ಕೃತಕ ಅಂಗಾಂಗಗಳ ವಿತರಣೆಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಆರು ಮಂದಿ ಸಾಧಕರಿಗೆ ಸನ್ಮಾನ ::  ಸಮಾರಂಭದಲ್ಲಿ ಮಂಡ್ಯದ ಮಾತ ನರ್ಸಿಂಗ್ ಹೋಮ್ ಮಾಲೀಕರಾದ ಡಾ. ಪಿ.ಎಂ. ಜಗದೀಶ್, ವೈದ್ಯರು ಹಾಗೂ ಸಮಾಜ ಸೇವಕರಾದ ಡಾ. ಯಶೋಧರ ಪೂಜಾರಿ, ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು, ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಬೊಪ್ಪಂಡ ದಿಯಾ ಭೀಮಯ್ಯ, ರಾಷ್ಟ್ರೀಯ ಹಾಕಿ ಆಟಗಾರ್ತಿ ಎ.ಜಿ.ಪರ್ಲಿನ್ ಪೊನ್ನಮ್ಮ ಮತ್ತು ರಾಜ್ಯ ವಾಲಿಬಾಲ್ ಆಟಗಾರರಾದ ಎಂ.ಬಿ.ಕುಟ್ಟಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಖ್ಯಾತ ಇ.ಎನ್.ಟಿ ವೈದ್ಯರು ಹಾಗೂ ಸಂಸ್ಕೃತಿ ಸಿರಿ ಬಳಗದ ಟ್ರಸ್ಟಿ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ, ಜಿಲ್ಲಾ ಆಸ್ಪತ್ರೆಯ ನಿವೃತ್ತ ಜಿಲ್ಲಾ ಸರ್ಜನ್ ಡಾ. ಮುತ್ತಪ್ಪ, ಮಡಿಕೇರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಎ.ಜೆ. ಲೋಕೇಶ್, ಕೊಡಗು ಸಂಸ್ಕೃತಿ ಸಿರಿ ಬಳಗ ಮತ್ತು ಟ್ರಸ್ಟ್ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಕ್ಯಾಪ್ಟನ್ ಚಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ಆರೋಗ್ಯ ತಪಾಸಣೆ :: ಶಿಬಿರದಲ್ಲಿ 2ಡಿ ಇಕೋ ಮತ್ತು ಉಚಿತ ಲ್ಯಾಬ್ ಪರೀಕ್ಷೆ, ಶ್ರವಣ, ಹಲ್ಲಿನ ತಪಾಸಣೆ ಸೇರಿದಂತೆ ರಕ್ತದಾನ ಶಿಬಿರವು ನಡೆಯಿತು. ಶಿಬಿರದಲ್ಲಿ ಮಂಗಳೂರಿನ ಯೆನಪೋಯ ವೈದ್ಯಕೀಯ ಕಾಲೇಜು, ಮೈಸೂರಿನ ಸುಯೋಗ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಕೃತಕ ಅಂಗಾಂಗಳನ್ನು ಬೆಂಗಳೂರಿನ ಕರ್ನಾಟಕ ಮಾರ್ವಾರಿ ಅಸೋಸಿಯೇಷನ್ ತಂಡ ಒದಗಿಸುವ ವ್ಯವಸ್ಥೆ ಮಾಡಿತ್ತು.

ಆಕರ್ಷಕ ನೃತ್ಯ ಸ್ಪರ್ಧೆ ::  ಗಣರಾಜ್ಯೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯೂ ಇದೇ ಸಂದರ್ಭ ನಡೆದು ಗಮನ ಸೆಳೆಯಿತು. ಶಿಬಿರದ ಯಶಸ್ಸಿಗೆ ಐ.ಎಂ.ಒ. ಅಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ,  ಬಳಗ ಮತ್ತು ಟ್ರಸ್ಟ್ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್, ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ ಹಾಗೂ ಗೌರವ ಕಾರ್ಯದರ್ಶಿ ಕೇಚಂಡ ಸುನೀತ ಗಣೇಶ್, ಪದಾಧಿಕಾರಿಗಳಾದ ಎಂ.ಪಿ.ಕೃಷ್ಣರಾಜು, ಜಾನ್ಸನ್ ಪಿಂಟೋ ಮತ್ತು ಪದಾಧಿಕಾರಿಗಳು ಸಹಕರಿಸಿದರು. ಮೂರ್ನಾಡು ಕಾಲೇಜು ಉಪನ್ಯಾಸಕರಾದ ಕಲ್ಪನಾ ಸಾಮ್ರಾಟ್ ಕಾರ್ಯಕ್ರಮ ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ : ಶ್ರದ್ಧಾಭಕ್ತಿಯಿಂದ ಜರುಗಿದ ಸಂತ ಅಂತೋಣಿ ಅವರ ವಾರ್ಷಿಕೋತ್ಸವ*

ಮೇ 11, 2026

*ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*

ಮೇ 11, 2026

*ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*

ಮೇ 11, 2026

*ಕೊಡಗು ಬ್ಲಡ್ ಡೋನರ್ಸ್ ನಿಂದ ಪಿ.ಕೆ.ರಾಜುಗೆ ಬೀಳ್ಕೊಡುಗೆ*

ಮೇ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 11 NEWS DESK :  ಮಡಿಕೇರಿ ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ಟಿ.ಕೆ.ರಾಜು ಅವರಿಗೆ ಆತ್ಮೀಯ ಬೀಳ್ಕೊಡುಗೆ…

*ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ*

ಮೇ 11, 2026

*ಪೊನ್ನಂಪೇಟೆ : ಮೇ 12 ರಂದು ವಿವಿಧೆಡೆಯಿಂದ ವಿದ್ಯುತ್ ವ್ಯತ್ಯಯ*

ಮೇ 11, 2026

*ಮೇ 13 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಮೇ 11, 2026

*ಸಿಸಿ ರಸ್ತೆ ಕಾಮಗಾರಿ : ಸೋಮವಾರಪೇಟೆಯಲ್ಲಿ ವಾಹನ ಸಂಚಾರ ಬದಲಿ ಮಾರ್ಗ ವ್ಯವಸ್ಥೆ*

ಮೇ 11, 2026

*ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*

ಮೇ 11, 2026

*ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ*

ಮೇ 11, 2026

*ಕೊಡಗು : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್.ಹಾದಿಮನಿ ಅಧಿಕಾರ ಸ್ವೀಕಾರ*

ಮೇ 11, 2026

*ಅಹೋರಾತ್ರಿ ಪ್ರತಿಭಟನೆ ಅರ್ಥಹೀನ : ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಬಡವರಿಗೆ ನಿವೇಶನ ನೀಡಲು ಆಗ್ರಹ*

ಮೇ 11, 2026

*ಕೊಡಗು ಪ್ರಶಿಕ್ಷಣ ವರ್ಗ ಕಾರ್ಯಕ್ರಮ : ನಿರ್ದಿಷ್ಟ ಗುರಿ ಹೊಂದಿರುವ‌ ನಮ್ಮ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ : ಸಂಸದ ಯದುವೀರ್*

ಮೇ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.