Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾಫಿ ಮಂಡಳಿ ಹಾಗೂ ಎನ್‌ಎಲ್‌ಎಂ ವತಿಯಿಂದ ಕರ್ನಾಟಕದಲ್ಲಿ 2500 ಕಾಫಿ ಕೆಫೆ ಸ್ಥಾಪನೆ ಯೋಜನೆ : ಒಂದು ಲಕ್ಷ ಮಹಿಳೆಯರ ಸಬಲೀಕರಣದ ಮೂಲಕ ಕಾಫಿ ಆಂತರಿಕ ಬೇಡಿಕೆ ಹೆಚ್ಚಳಕ್ಕೆ ಒತ್ತು
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ವಿಡಿಯೋ ಗ್ಯಾಲರಿ

ಕಾಫಿ ಮಂಡಳಿ ಹಾಗೂ ಎನ್‌ಎಲ್‌ಎಂ ವತಿಯಿಂದ ಕರ್ನಾಟಕದಲ್ಲಿ 2500 ಕಾಫಿ ಕೆಫೆ ಸ್ಥಾಪನೆ ಯೋಜನೆ : ಒಂದು ಲಕ್ಷ ಮಹಿಳೆಯರ ಸಬಲೀಕರಣದ ಮೂಲಕ ಕಾಫಿ ಆಂತರಿಕ ಬೇಡಿಕೆ ಹೆಚ್ಚಳಕ್ಕೆ ಒತ್ತು

ಜನವರಿ 28, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು  ಜ.28 NEWS DESK : ಮಹಿಳೆಯರನ್ನು ಕಾಫಿ ಉದ್ಯಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವರಿಗೆ ಸೂಕ್ತ ಉದ್ಯೋಗಾವಕಾಶ ಒದಗಿಸುವ ಜತೆಗೇ ಕಾಫಿಯ ಆಂತರಿಕ ಬೇಡಿಕೆಯನ್ನೂ ಹೆಚ್ಚಿಸಲು ಕಾಫಿ ಮಂಡಳಿಯು ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಮಿಷನ್‌ ನ ಸಹಯೋಗದೊಂದಿಗೆ ಮಹತ್ತರವಾದ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಕಾರ ಕರ್ನಾಟಕದಾದ್ಯಂತ ರಾಷ್ಟ್ರೀಯ ಜೀವನೋಪಾಯ ಮಿಷನ್ ಸ್ವ-ಸಹಾಯ ಗುಂಪುಗಳ (SHGs) ಸುಮಾರು ಒಂದು ಲಕ್ಷ ಮಹಿಳಾ ಸದಸ್ಯರಿಗೆ ಕಾಫಿ ತಯಾರಿಸುವ ತಂತ್ರಗಳು ಮತ್ತು ಗ್ರಾಮೀಣ ಕೆಫೆ ನಿರ್ವಹಣೆಯಲ್ಲಿ ಸಬಲೀಕರಣ ನೀಡುವ ಯೋಜನೆಯನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. ಇದು ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಫೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ, ಇದು ಅಧಿಕೃತ ಉತ್ಕೃಷ್ಟ ಫಿಲ್ಟರ್ ಕಾಫಿಯ ಅನುಭವವನ್ನು ಕಾಫಿ ಪ್ರಿಯರಿಗೆ ನೀಡಲಿದೆ. ಈ ಈ ಯೋಜನೆಯ ತಿಳುವಳಿಕೆ ಒಪ್ಪಂದಕ್ಕೆ (MoU) ಇತ್ತೀಚೆಗೆ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‌ನ ಮಿಷನ್ (National Livlihood Mission) ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಸಹಿ ಹಾಕಿದರು. ಮಹಿಳಾ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಪ್ರಭಾವೀ ಪರಿಣಾಮವನ್ನು ಸೃಷ್ಟಿಸುವಲ್ಲಿ ಈ ಯೋಜನೆಯು ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ಮಂಡಳಿಯು ವಿಷಯ ತಜ್ಞರು ಮತ್ತು ಆಂತರಿಕ ತಜ್ಞರ ಸಹಯೋಗದೊಂದಿಗೆ, ಪರಿಣಾಮಕಾರಿ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಅನುಷ್ಠಾನ ಮತ್ತು ಮೇಲ್ವಿಚಾರಣಾ ಪಾಲುದಾರರಾದ ಅಟಲ್ ಇನ್ಕ್ಯುಬೇಷನ್ ಸೆಂಟರ್ ಆಫ್ ಕಾಫಿ ಮಂಡಳಿ (AIC-CCRI-CED) ನೊಂದಿಗೆ ಕೆಲಸ ಮಾಡುತ್ತದೆ. ರಾಜ್ಯಾದ್ಯಂತ ಕಾಫಿಯನ್ನು ಉತ್ತೇಜಿಸುವ ನಮ್ಮ ದೀರ್ಘಕಾಲೀನ ಯೋಜನೆಯ ಮೊದಲ ಹೆಜ್ಜೆ ಈ ಮೈಲಿಗಲ್ಲು ಯೋಜನೆಯಾಗಿದೆ ಎಂದು ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ಶಕ್ತಿ ಗೆ ತಿಳಿಸಿದರು. ಶನಿವಾರ ಈ ವರದಿಗಾರನೊಂದಿಗೆ ಮಾತನಾಡುತಿದ್ದ ಅವರು “ಜೀವನೋಪಾಯಕ್ಕೆ ಬೆಂಬಲ ನೀಡುವ ಎನ್‌ಎಲ್‌ಎಂ ಅಡಿಯಲ್ಲಿ ಮಹಿಳೆಯರಿಗೆ ಇತರ ಉದ್ಯಮಶೀಲತಾ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಈ ಕಾಫಿ ಸೂಕ್ಷ್ಮ ಉದ್ಯಮಶೀಲತಾ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದರು. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು ಆರಂಭದಲ್ಲಿ ಎನ್‌ಎಲ್‌ಎಂ ಗುರುತಿಸಿದ 400 ಮಹಿಳೆಯರಿಗೆ ಬೆಂಗಳೂರಿನಲ್ಲಿರುವ ಕಾಫಿ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಮಾಸ್ಟರ್ ತರಬೇತುದಾರರಾಗಲು ಒಂದು ವಾರದ ತರಬೇತಿ ನೀಡಲಾಗುವುದು, ಎರಡನೇ ಹಂತದಲ್ಲಿ ತರಬೇತಿ ಪಡೆದವರು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇತರ ಸಾವಿರಾರು ಮಹಿಳೆಯರಿಗೆ ಆಯಾ ಜಿಲ್ಲೆಗಳಲ್ಲಿಯೇ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಇಂದಿಗೂ ಫಿಲ್ಟರ್‌ ಕಾಫಿಗೆ ಬೇಡಿಕೆ ಇದ್ದರೂ ಗುಣಮಟ್ಟದ ಕಾಫಿ ತಯಾರಿಕೆಯಲ್ಲಿ ಮಾರಾಟಗಾರರು ಹಿಂದುಳಿದಿದ್ದಾರೆ ಎಂದು ಹೇಳಿದ ಜಗದೀಶ ಆ ಸ್ಥಾನವನ್ನು ಮಹಿಳೆಯರಿಂದ ತುಂಬಲು ಯೋಜಿಸಲಾಗಿದ್ದು ಅವರಿಗೂ ಉದ್ಯೋಗಾವಕಾಶ ದೊರೆಯಲಿದೆ ಎಂದರು. ತರಬೇತುದಾರರ ತರಬೇತಿ (nMn) ಕಾರ್ಯಕ್ರಮದ ಪರಿಣಾಮಕಾರಿ ಕಾರ್ಯಗತಗೊಳಿಸುವಿಕೆಯನ್ನು ಸುಗಮಗೊಳಿಸಲು ಮತ್ತು ಕ್ಷೇತ್ರ ಮಟ್ಟದ ತರಬೇತಿ ಅವಧಿಗಳ ಆರಂಭಿಕ ಬ್ಯಾಚ್‌ಗಳನ್ನು ಮೇಲ್ವಿಚಾರಣೆ ಮಾಡಲು ಎನ್‌ಎಲ್‌ಎಂ ಭಾರತೀಯ ಕಾಫಿ ಮಂಡಳಿಯ ಸಲಹಾ ಪರಿಣತಿಯನ್ನು ತೊಡಗಿಸಿಕೊಂಡಿದೆ. ಅನುಷ್ಠಾನ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಎಐಸಿ-ಸಿಸಿಆರ್‌ಐ-ಸಿಇಡಿ, ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳು ಮತ್ತು ಕೆಫೆ ನಿರ್ವಹಣಾ ಕಾರ್ಯಾಗಾರಗಳ ಮೂಲಕ ಯೋಜನೆಯನ್ನು ತಲುಪಿಸಲು ಬದ್ಧವಾಗಿದೆ. ಈ ಉಪಕ್ರಮದ ಮೂಲಕ 2,500 ಕಾಫಿ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಮತ್ತು ಯಶಸ್ವಿ ಕಾಫಿ ಉದ್ಯಮಿಗಳಾಗಲು ಸ್ವ-ಸಹಾಯ ಗುಂಪುಗಳ (SHGs) ಒಂದು ಲಕ್ಷ ಮಹಿಳೆಯರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಪ್ರತೀ ಕೆಫೆಯಲ್ಲಿ ನಿತ್ಯ 250 ಕಪ್‌ ಗಳಷ್ಟು ಕಾಫಿಯನ್ನು ಮಾರಾಟ ಮಾಡಿದರೆ ಮಾತ್ರ ಕಫೆ ನಡೆಸುವುದು ಲಾಭದಾಯಕ ಆಗುತ್ತದೆ ಎಂದು ಹೇಳಿದ ಜಗದೀಶ್‌ ಅವರು ಎನ್‌ಎಲ್‌ಎಂ ಅಧಿಕಾರಿಗಳು ಕೆಫೆ ತೆರೆಯಲು ಸರ್ಕಾರಿ ಕಚೇರಿಗಳ ಆವರಣ, ಬಿಬಿಎಂಪಿ ಪ್ರದೇಶ ಇತರ ಸ್ಥಳಗಳ ಗುರುತು ಮಾಡಿ ಕೊಡಲಿದೆ. ಮಂಡಳಿಯು ಕಾಫಿ ತಯಾರಿಕೆಯ ತಂತ್ರಜ್ಞಾನ ಮತ್ತು ಮೆಷೀನ್‌ ನಿಂದಲೂ ಕಾಫಿ ತಯಾರಿಕೆಯ ತರಬೇತಿಯನ್ನು ಒದಗಿಸಲಿದೆ ಎಂದು ಹೇಳಿದರು. 2024-25 ರ ರಾಜ್ಯ ಬಜೆಟ್‌ಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು NLM SHGs ನಿಂದ 1 ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಿ ತರಬೇತಿ ನೀಡಲು ₹25 ಕೋಟಿ ಹಂಚಿಕೆ ಮಾಡಿದೆ, ಈ ಉಪಕ್ರಮವು ಮಹಿಳಾ ನೇತೃತ್ವದ ಉದ್ಯಮಗಳನ್ನು ಸಬಲೀಕರಣಗೊಳಿಸುತ್ತದೆ, ಕೌಶಲ್ಯ, ಉತ್ಪಾದಕತೆ ಮತ್ತು ಮಾರುಕಟ್ಟೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ. ಸಂಭಾವ್ಯ ಮತ್ತು ಅಸ್ತಿತ್ವದಲ್ಲಿರುವ ಉದ್ಯಮಿಗಳನ್ನು ಬೆಂಬಲಿಸುವ ಮೂಲಕ, ಇದು ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ, ಬಡತನವನ್ನು ಕಡಿಮೆ ಮಾಡುತ್ತದೆ ಮತ್ತು ಬಡತನದ ಅಂಚಿನಲ್ಲಿರುವ ಮಹಿಳೆಯರಿಗೆ ಅವಕಾಶಗಳನ್ನು ಬೆಳೆಸುತ್ತದೆ.

ವರದಿ : ಕೋವರ್‌ ಕೊಲ್ಲಿ ಇಂದ್ರೇಶ್‌ 

Follow us Follow us
Share. WhatsApp Facebook Twitter Email Telegram Copy Link

Related Posts

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 16: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾದ…

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026

ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ : ಭಾವನೆ ಕಟ್ಟಿಕೊಡುವಲ್ಲಿ ಕಥೆ, ಕವನ, ಕವಿತೆ ಸಹಕಾರಿ : ಡಾ.ಎನ್.ಕೆ.ಲೋಲಾಕ್ಷಿ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಮಾಜಿ ಸೈನಿಕರ 84ನೇ ಇಎಂಇ ಕಾರ್ಪ್ಸ್ ದಿನಾಚರಣೆ ಸಂಭ್ರಮ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.