Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶಾಸಕ ಡಾ.ಮಂತರ್ ಗೌಡರಿಗೆ ಅಭಿನಂದನಾ ಸಮಾರಂಭ : ಗೌಡ ಸಮಾಜಕ್ಕೆ ಅಗತ್ಯ ಸಹಕಾರ : ಶಾಸಕರ ಭರವಸೆ*
  • *ಡಾ.ಅಂಬೇಡ್ಕರ್ ಕುರಿತು ಅವಹೇಳನ : ಆರೋಪಿಯ ಬಂಧನಕ್ಕೆ ಆಗ್ರಹ*
  • *ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*
  • *ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*
  • *ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*
  • *ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*
  • *ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*
  • *ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*
  • *ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜ.31 ರಿಂದ ಸರ್ವ ಧರ್ಮ ಸಮನ್ವಯ ಕೇಂದ್ರ ಪೇರಡ್ಕ-ಗೂನಡ್ಕ ಊರೂಸ್ ಸಮಾರಂಭ ಮತ್ತು ಸೌಹಾರ್ದ ಸಮ್ಮೇಳನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜ.31 ರಿಂದ ಸರ್ವ ಧರ್ಮ ಸಮನ್ವಯ ಕೇಂದ್ರ ಪೇರಡ್ಕ-ಗೂನಡ್ಕ ಊರೂಸ್ ಸಮಾರಂಭ ಮತ್ತು ಸೌಹಾರ್ದ ಸಮ್ಮೇಳನ*

ಜನವರಿ 30, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.30 NEWS DESK : ಇತಿಹಾಸ ಪ್ರಸಿದ್ಧ ಪೇರಡ್ಕ-ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ ಮತ್ತು ಸರ್ವಧರ್ಮ ಸಮ್ಮೇಳನವು ಜ.31 ರಿಂದ ಫೆ.2ರ ವರೆಗೆ ಪೇರಡ್ಕ ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಎಂದು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇರಡ್ಕ ಮುಹಿಯದ್ದೀನ್ ಜುಮ್ಮಾ ಮಸೀದಿ ಮತ್ತು ದರ್ಗಾದಲ್ಲಿ ಜ.31 ರಂದು ಜುಮಾ ನಮಾಜಿನ ಬಳಿಕ ಎಂ.ಜೆ.ಎಂ ಪೇರಡ್ಕ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧಜ್ವಾರೋಹಣದ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು. ಅಪರಾಹ್ನ 2 ಗಂಟೆಗೆ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಪಾಣಕ್ಕಾಡ್ ಅಲ್‍ಹಾಜ್ ಹಮೀದಲೀ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಖುತ್‍ಮುಲ್ ಖುರಾನ್ ದುಃಆ ನೇತೃತ್ವ ವಹಿಸಲಿದ್ದಾರೆ. ಪತ್ತನಂತಿಟ್ಟ ಅಬ್ದುಲ್ ರಝಾಕ್ ಅಬ್ರಾರಿ ಧಾರ್ಮಿಕ ಪ್ರಭಾಷಣ ಮಾಡಲಿದ್ದು, ವೇದಿಕೆಯಲ್ಲಿ ಸ್ಥಳದಾನಿಗಳಾದ ತೆಕ್ಕಿಲ್ ಬಾಬ ಹಾಜಿ, ತಾಜ್ ಮೊಹಮದ್, ಭಯಂಬಾಡಿ ಅಬೂಬಕ್ಕರ್ ಸಹಿತ ವಿವಿಧ ಗಣ್ಯರು ಉಪಸ್ಥಿತರಿಲಿದ್ದಾರೆ ಎಂದರು. ಫೆ.1 ರಂದು ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಸಂಜೆ 7.30ಕ್ಕೆ ಮಗರಿಬ್ ನಮಾಜಿನ ನಂತರ ಕಾಸರಗೋಡ್‍ನ ರೌಲತುಲ್ ಉಲೂಂ ದಫ್ ಕಳಿ ಸಂಘಂ ಪೋವ್ವಲ್ ಅವರಿಂದ “ದಫ್ ಸ್ಪರ್ಧೆ, ಬುರ್ದಾ ಮಜ್ಲೀಸ್, ರಸೂಲ್ ಮದ್‍ಹ್ ಗಾನಂ” ನಡೆಯಲಿದೆ. ಕಾರ್ಯಕ್ರಮವನ್ನು ಕೇರಳದ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪೇರಡ್ಕ ಎಂ.ಜೆ.ಎಂ ಮಾಜಿ ಅಧ್ಯಕ್ಷ ಇಬ್ರಾಹಿಂ ಹಾಜಿ ಮೈಲುಕಲ್ಲು ವಹಿಸಲಿದ್ದಾರೆ. ಖತೀಬರಾದ ಅಹ್ಮದ್ ನಈಮ್ ಫೈಝಿ ಅಲ್ ಮಅಬರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.2 ರಂದು ಸಂಜೆ 7 ಗಂಟೆಯಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ದುವಾಃ ನೇತೃತ್ವವನ್ನು ಪೇರಡ್ಕ ಎಂ.ಜೆ.ಎಂ ಖತೀಬರಾದ ಅಹ್ಮದ್ ನಈಮ್ ಫೈಝಿ ಅಲ್ ಮಅïಬರಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಲಿದ್ದು, ಖತೀಬ ಪತ್ತನಂತಿಟ್ಟ ಅಬ್ದುಲ್ ರಝಾಕ್ ಅಬ್ರಾರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಜಮ್ಮು ಕಾಶ್ಮೀರ ಸಿ.ಆರ್.ಪಿ.ಎಫ್ ಸಬ್‍ಇನ್ಸ್‍ಪೆಕ್ಟರ್ ಅನ್ವರ್ ಪಿ.ಎಂ.ತೆಕ್ಕಿಲ್, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ಹೈಕೋರ್ಟ್ ವಕೀಲ ಅಬೂಬಕ್ಕರ್ ಅಡ್ಕಾರ್, ಕಾಂಗ್ರೆಸ್ ಮುಖಂಡ ಕೃಷ್ಣಪ್ಪ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ವಿ.ವೆಂಕಪ್ಪ ಗೌಡ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಮೌಲೂದ್ ಪಾರಾಯಣ ನಡೆಯಲಿದ್ದು, ರಾತ್ರಿ 9 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದುಗ್ಗಲಡ್ಕ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಃಆ ನೇತೃತ್ವ ವಹಿಸಲಿದ್ದು, ಬಹು ಶಮೀರ್ ದಾರಿಮಿ ಕೊಲ್ಲಂ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಉಲಮಾ, ಉಮರಾ ಹಾಗೂ ಸಾಮಾಜಿಕ, ರಾಜಕೀಯ, ನೇತರಾರರು ಪಾಲಗೊಳ್ಳಲಿದ್ದಾರೆ ಎಂದು ತಿಳಿಸಿದರು. ಫೆ.3 ರಂದು ಮಧ್ಯಾಹ್ನ 2 ಗಂಟೆಗೆ ಪಳ್ಳಿನೇರ್ಚೆ ನಡೆಯಲಿದ್ದು, ಪ್ರತಿ ದಿನ ಸಂಜೆ 7.30 ಗಂಟೆಗೆ ತೆಕ್ಕಿಲ್ ಮಹಮ್ಮದ್ ಹಾಕಿ ಮೆಮೋರಿಯಲ್ ತಖ್‍ವೀಯ್ಯತ್ತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಹಾಗೂ ಅನ್ನದಾನ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಸಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಸ್ತೆ ಅಭಿವೃದ್ಧಿಗೆ ಅನುದಾನ :: ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಈ ಭಾಗದಲ್ಲೂ ಹಾನಿ ಸಂಭವಿಸಿದ್ದು, ಅಂದಿನ ಸಂಪಾಜೆ ಗ್ರಾ.ಪಂ ಅಧ್ಯಕ್ಷರಾಗಿದ್ದ ಜಿ.ಕೆ.ಹಮೀದ್ ಗೂನಡ್ಕ ಉತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಯ್ಯ ನೇತೃತ್ವದ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗಾಗಿ ಹಾಗೂ ತೋಡಿಕಾನ-ಭಾಗಮಂಡಲ ಸಂಪರ್ಕಕ್ಕೆ ರೂ.5 ಕೋಟಿ ಅನುದಾನವನ್ನು ಒದಗಿಸಿ ಕೆಲಸ ಕಾರ್ಯಗಳು ಸಗಮವಾಗಿ ನಡೆಸಿದೆ. ಇದೀಗ ಮತ್ತೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಸಚಿವರೊಂದಿಗೆ ಚರ್ಚಿಸಿ ಜಿ.ಕೆ.ಹಮೀದ್ ಗೂನಡ್ಕ ಅವರ ನೇತೃತ್ವದಲ್ಲಿ ಅನುದಾನ ತರಲು ಶ್ರಮಿಸುವುದಾಗಿ ಶಾಹಿದ್ ತೆಕ್ಕಿಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪೇರಡ್ಕ ಎಂ.ಜೆ.ಎಂ ಮಾಜಿ ಅಧ್ಯಕ್ಷ ಇಬ್ರಾಹಿಂ ಮೈಲುಕಲ್ಲು, ಗೂನಡ್ಕ-ಪೇರಡ್ಕ ಎಂ.ಆರ್.ಡಿ.ಎ.ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಎಸ್‍ಕೆಎಸ್‍ಎಸ್‍ಎಫ್ ಗೂನಡ್ಕ ಶಾಖೆ ಅಧ್ಯಕ್ಷ ಮುನೀರ್ ದಾರಿಮಿ, ಗೂನಡ್ಕ ಎಂಆರ್‌ಡಿಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶಾಸಕ ಡಾ.ಮಂತರ್ ಗೌಡರಿಗೆ ಅಭಿನಂದನಾ ಸಮಾರಂಭ : ಗೌಡ ಸಮಾಜಕ್ಕೆ ಅಗತ್ಯ ಸಹಕಾರ : ಶಾಸಕರ ಭರವಸೆ*

ಸೆಪ್ಟೆಂಬರ್ 6, 2026

*ಡಾ.ಅಂಬೇಡ್ಕರ್ ಕುರಿತು ಅವಹೇಳನ : ಆರೋಪಿಯ ಬಂಧನಕ್ಕೆ ಆಗ್ರಹ*

ಸೆಪ್ಟೆಂಬರ್ 6, 2026

*ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*

ಸೆಪ್ಟೆಂಬರ್ 5, 2026

*ಡಾ.ಅಂಬೇಡ್ಕರ್ ಕುರಿತು ಅವಹೇಳನ : ಆರೋಪಿಯ ಬಂಧನಕ್ಕೆ ಆಗ್ರಹ*

ಸೆಪ್ಟೆಂಬರ್ 6, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮಾತುಗಳನ್ನಾಡಿ ಅವಮಾನಿಸಿರುವ ವ್ಯಕ್ತಿಯನ್ನು…

*ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*

ಸೆಪ್ಟೆಂಬರ್ 5, 2026

*ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 5, 2026

*ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*

ಸೆಪ್ಟೆಂಬರ್ 5, 2026

*ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*

ಸೆಪ್ಟೆಂಬರ್ 5, 2026

*ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*

ಸೆಪ್ಟೆಂಬರ್ 5, 2026

*ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*

ಸೆಪ್ಟೆಂಬರ್ 5, 2026

*ಸೆಪ್ಟೆಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ 61ನೇ ಪುಣ್ಯಸ್ಮರಣೆ; ಮಡಿಕೇರಿಯಲ್ಲಿ ಸಮರ ವೀರನಿಗೆ ಗೌರವ ಸಮರ್ಪಣೆ*

ಸೆಪ್ಟೆಂಬರ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.