
ವಿರಾಜಪೇಟೆ ಜ.30 NEWS DESK : ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ಪುತ್ತರಿ ಒತ್ತೋರ್ಮೆ ಕೂಟ ಸಂಭ್ರಮದಿಂದ ನಡೆಯಿತು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐಚೆಟ್ಟಿರ ಮೀನಾ ಅವರ ನಾಯಕತ್ವದಲ್ಲಿ ನೀಲಕ್ಕ ಗ್ರೂಪ್ ಸದಸ್ಯರು ವಿವಿಧ ರೀತಿಯ ಮನರಂಜನೆ ಹಾಗೂ ಕ್ರೀಡಾ ಪೈಪೋಟಿಗಳನ್ನು ನಡೆಸಿ ನೆರೆದಿದ್ದ ಸದಸ್ಯರನ್ನು ರಂಜಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಇಲ್ಲಿ ಎಲ್ಲ ಮಹಿಳೆಯರಿಗೂ ವೇದಿಕೆ ದೊರಕುವಂತಾಗಿದೆ. ಜಂಜಾಟದ ನಡುವೆ ಇರುವ ಮಹಿಳೆಯರಿಗೆ ಈ ರೀತಿಯ ಕಾರ್ಯಕ್ರಮ ಒಂದು ವೇದಿಕೆ ಕಲ್ಪಿಸಿದೆ. ಮಹಿಳೆಯರು ದಿನನಿತ್ಯ ಯೋಗ, ದ್ಯಾನ ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಇದರಿಂದ ಏಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತದೆ. ಒತ್ತಡ ಕಡಿಮೆ ಆಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಇತ್ತಮ ಹವ್ಯಾಸಗಳನ್ನಿಟ್ಟುಕೊಂಡು ಬದುಕನ್ನು ರೂಪಿಸಿಕೊಳ್ಳುವಂತಾಗಬೇಕೆಂದರು. ತಾಯಿ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ಜೊತೆಗೆ ವಿದ್ಯೆ ಕೊಡಬೇಕು. ಬುದ್ದಿ ಹೇಳಬೇಕು ಎಂದು ಹೇಳಿದರು.ನೀಲಕ್ಕ ಗ್ರೂಪ್ನ ಐಚೆಟ್ಟಿರ ಮೀನಾ ಸೇರಿದಂತೆ ಇತರ ಸದಸ್ಯರು ಮಾತನಾಡಿದರು. ಇದೇ ಸಂದರ್ಭ ಪೊಮ್ಮಕ್ಕಡ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಹಾಗೂ ಸ್ಥಾಪಕ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ನೀಲಕ್ಕ ಗ್ರೂಪ್ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಬಿದ್ದಂಡ ರಾಣಿ ಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಹಾಜರಿದ್ದರು. ಅಪ್ಪುಮಣಿಯಂಡ ಶೈಲಾ ಪ್ರಾರ್ಥಿಸಿದರು, ಚೇಂದ್ರಿಮಾಡ ರಾಣಿ ಸ್ವಾಗತಿಸಿದರು, ಮಾಚಪಂಡ ತುಳಸಿ ಸನ್ಮಾನಿತರ ಪರಿಚಯ ಮಾಡಿದರು. ಅಪ್ಪುಮಣಿಯಂಡ ಡೇಝಿ ಕಾರ್ಯಕ್ರಮದ ನಿರೂಪಿಸಿದರು.


















