Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ*
  • *21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ*
  • *ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಹೋರಾಟ*
  • *ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*
  • *ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*
  • *ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*
  • *ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*
  • *ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*
  • *ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*
  • *ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ವಿಡಿಯೋ ಗ್ಯಾಲರಿ

*ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*

ಜನವರಿ 30, 20257 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೆಂಗಳೂರು NEWS DESK ಜ.30 : ಮೊನ್ನೆಯಷ್ಟೆ ತಂದೆಯ ಪಿಂಡ ಪ್ರಧಾನ ಕಾರ್ಯಕ್ಕೆ ಭಾಗಮಂಡಲ ಹೋಗಿದ್ದೆ. ಕಾವೇರಿ ಸಂಗಮದ ಆ ಬದಿಯಲ್ಲಿ ಕಾರ್ಯ ನೆರವೇರಿಸುತ್ತಿರುವಾಗ ಫಳ ಫಳನೆ ಹೊಳೆಯುತ್ತಿದ್ದ ಫ್ಲೈ ಓವರ್ ಕಾಣಿಸಿತು. ಅರೇ ಇದೇನಿದು ಫ್ಲೈ ಓವರ್ ಸಿದ್ದವಾಗಿದೆ. ವಾಹನಗಳು ಸಂಚರಿಸುತ್ತಿವೆ. ಒಮ್ಮಗೆ ಆಶ್ಚರ್ಯ ಆಯ್ತು. ಕೈಂಕರ್ಯ ಮುಗಿಸಿದ ಬಳಿಕ ಅದೇ ಫ್ಲೈ ಓವರ್ ಕೆಳಗೆ ಹೋಗಿ ಸಂಪೂರ್ಣ ವೀಕ್ಷಿಸಿದೆ. ಫ್ಲೈ ಓವರ್ ನೋಡುತ್ತಿದ್ದಂತೆ 28 ವರ್ಷ (1997) ಹಿಂದಕ್ಕೆ ಜಾರಿದೆ. ಹಳೆಯ ನೆನಪುಗಳು ಎಳೆ ಎಳೆಯಾಗಿ ಹೊರ ಹೊಮ್ಮತೊಡಗಿದವು. ಅದು 1997. ಶಕ್ತಿ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ಒಂದು ವರ್ಷದಲ್ಲಿ ಕೊಡಗಿನ ಒಂದಷ್ಟು ಗಮನಾರ್ಹ ವಿಚಾರಗಳನ್ನು, ಸಮಸ್ಯೆಗಳನ್ನ ಕಣ್ಣಾರೆ ಕಂಡಿದ್ದೆ. 1998ರ ಮಳೆಗಾಲ. ಎಂದಿನಂತೆ ಭಾಗಮಂಡಲ ಕಾವೇರಿ, ಕನ್ನಿಕೆ ನದಿ ಪ್ರವಾಹದಿಂದ ಜಲಾವೃತ್ತಗೊಂಡಿತ್ತು. ನಾನು ಈ ಸುದ್ದಿ ಫಾಲೋ ಅಪ್ ಮಾಡುತ್ತಿದ್ದೆ. ಎಲ್ಲಾ ಕಡೆಯಿಂದ ಸಂಪರ್ಕ ಕಡಿತಗೊಂಡು ದ್ವೀಪದಂತಾದ ಭಾಗಮಂಡಲ ಎಂದು ಬರೆದಿದ್ದೆ. ಭಾಗಮಂಡಲ – ತಲಕಾವೇರಿ – ಅಯ್ಯಂಗೇರಿ ರಸ್ತೆ ನಿವಾಸಿಗಳು ಅತ್ತಿಂದಿತ್ತ ತೆರಳಲಾಗದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿ, ಕೂಲಿಗೆ ಹೋಗಲಾಗದೆ ಉಪವಾಸ, ದಿನಿಸುಗಳು ತರಲಾಗದೆ ಬರೀ ಗಂಜೀ ತಿನ್ನಬೇಕಾದ ಅನಿವಾರ್ಯತೆ. ಹೀಗೆ ಅಲ್ಲಿನ ನಿವಾಸಿಗಳ ಪರದಾಟದ ಬಗ್ಗೆ ಖುದ್ದು ತೆರಳಿ ಪ್ರತ್ಯಕ್ಷವಾಗಿ ನೋಡಿ ಫೋಟೋ, ಕೋಟ್ ಸಮೇತ ಬರೆಯುತ್ತಿದ್ದೆ. ಶಾಲೆಗೆ ಹೋಗೋ ಮಕ್ಕಳು ನಡುಮಟ್ಟದ ನೀರಿನಲ್ಲೇ ಯೂನಿ ಫಾರ್ಮ್ ಸಮೇತ ಕ್ರಮಿಸಿ ಅದೇ ಒದ್ದೆ ಬಟ್ಟೆಯಲ್ಲಿ ಹೋಗುತ್ತಿದ್ದದ್ದು, ಕೂಲಿಗೆ ಹೋಗುವವರು ತಲೆ ಮೇಲೆ ಬುತ್ತಿ ಇಟ್ಟುಕೊಂಡು ಕುತ್ತಿಗೆ ವರೆಗಿನ ನೀರಿನಲ್ಲಿ ಪ್ರವಾಹ ದಾಟುತ್ತಿದ್ದದ್ದು, ಪುರುಷರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ನೀರಿನ ಸೆಳೆತದ ನಡುವೆಯೂ ದಾಟಿ ಬರುತ್ತಿದ್ದದ್ದು… ಹೀಗೆ ಮನಕಲಕುವ ದೃಶ್ಯಗಳನ್ನು ಫೋಟೋ ಸಮೇತ ವರದಿ ಮಾಡುತ್ತಿದ್ದೆ. ಶಕ್ತಿ ಪತ್ರಿಕೆ ಸಂಪಾದಕ ಜಿ ರಾಜೇಂದ್ರ, ಚಿದ್ವಿಲಾಸ್, ಅನಂತಶಯನ ಪತ್ರಿಕೆಯ ಮುಖ ಪುಟದಲ್ಲಿ ಈ ಸುದ್ದಿಗಳನ್ನು ಹಾಕುತ್ತಿದ್ದರು. ಒಂದು ದಿನ ನಾನು, ಅನಂತಶಯನ ಅವರು ಓಮಿನಿ ಕಾರಿನಲ್ಲಿ ಭಾಗಮಂಡಲ, ತಲಕಾವೇರಿ ಹೋದೇವು. ಭಾಗಮಂಡಲ ತಲಪಿದಾಗ ಮಳೆ ಇರಲಿಲ್ಲ. ಪ್ರವಾಹವೂ ಬರಲಿಲ್ಲ. ಹೀಗಾಗಿ ತಲಕಾವೇರಿಲಿ ಮಳೆ ಸಮಸ್ಯೆ ಏನಾಗಿದೆ ಎಂದು ನೋಡಿ ಬರೋಣ ಜಗ್ಗ ಅಂತಾ ಅನಂತಶಯನ ಕರೆದುಕೊಂಡು ಹೋದರು. ದೇವರ ದರ್ಶನ ಬಳಿಕ ಅಲ್ಲಿ ದಿವಂಗತ ಭಟ್ ಅವರ ಮನೆಗೆ ತೆರಳಿ ಒಂದಷ್ಟು ಮಾತು, ಊಟ.. ಹೀಗೆ ಎರಡ್ಮೂರು ಗಂಟೆ ಕಳೆದಿದ್ದೆ  ಗೊತ್ತಾಗಲಿಲ್ಲ. ಮಳೆಯೂ ಸುಯ್ಯಿಂ ಅಂತಾ ಸುರಿಯುತ್ತಲೇ ಇತ್ತು. ಸಂಜೆ 5 ಗಂಟೆಗೆ ಭಾಗಮಂಡಲ ಬರುವಷ್ಟರಲ್ಲಿ ಅಯ್ಯಂಗೇರಿ ರಸ್ತೆ, ಮಡಿಕೇರಿ ರಸ್ತೆ ಜಲಾವೃತ್ತಗೊಂಡಿತ್ತು. ಹೇಗೆ ವ್ಯಾನ್ ದಾಟಿಸುವುದು.. ಮಡಿಕೇರಿ ಹೋಗೋದು ಹೇಗೆ. ಇಬ್ಬರಿಗೂ ಫುಲ್ ಟೆನ್ಸನ್. ಭಾಗಮಂಡಲ ಹಳೆ ಸೇತುವೆ ಮೇಲೆ ವ್ಯಾನ್ ನಿಲ್ಲಿಸಿದ್ದ ಅನಂತಶಯನ ನೋಡೋನಾ ಜಗ್ಗ ಒಂದು ಕೈ ಅಂತಾ… ಏಕಾಏಕಿ ವ್ಯಾನ್ ಅನ್ನ ಪ್ರವಾಹಕ್ಕೆ ಇಳಿಸಿ ಸ್ಪೀಡಾಗಿ ಓಡಿಸಿದ್ರು. ಮಧ್ಯ ತಲಪಿದಾಗ ನೀರಿನ ಸೆಳೆತಕ್ಕೆ ವ್ಯಾನ್ ತೇಲಿತು. ಇನ್ನೇನು ಕೊಚ್ಚಿಕೊಂಡು ಹೋಗಬೇಕು, ಇಬ್ಬರಿಗೂ ಗಾಬರಿ. ನಾನು ಡೋರ್ ಓಪನ್ ಮಾಡಿದೆ. ನೀರು ವ್ಯಾನ್ ಒಳಗೆ ಬಂದು ವ್ಯಾನ್ ಮತ್ತೆ ರಸ್ತೆಗೆ ತಾಗಿತು. ಅನಂತಶಯನ ಕೊಟ್ಟ ಫುಲ್ ಎಕ್ಸಲೇಟರ್ಗೆ ವ್ಯಾನ್ ಮಡಿಕೇರಿ ಬದಿ ರಸ್ತೆ ಸೇರಿಕೊಂಡಿತು. ಇಬ್ಬರಿಗೂ ಮರು ಜೀವ ಬಂದಾಗಾಯಿತು. ಅಲ್ಲಿ ನಿಂತಿದ್ದವರೆಲ್ಲ. ನಿಮಗೆ ತಲೆ ಸರಿ ಇಲ್ಲಾವಾ ಅಂತಾ ಬೈದಿದ್ದೇ ಬೈದಿದ್ದು.. ಎಲ್ಲೂ ನಿಲ್ಲಿಸದೆ ಮಡಿಕೇರಿ ಶಕ್ತಿ ಕಚೇರಿ ತಲಪಿಕೊಂಡೇವು. ಹೀಗೆ 2003ರವರೆಗೂ ಮಳೆಗಾಲ ಬಂದಾಗ ಇದೇ ರೀತಿ ಸುದ್ದಿ ಮಾಡುತ್ತಲೇ ಇದ್ದೆ. ಕಾರ್ಗತ್ತಲಲ್ಲಿ ಭಾಗಮಂಡಲ, ದ್ವೀಪದಂತಾದ ಭಾಗಮಂಡಲ, ಭಾಗಮಂಡಲ ಜಲಾವೃತ, ತಲಕಾವೇರಿಗೆ 100 ಇಂಚು ಮಳೆ. ಇದೇ ಹೆಡ್ಡಿಂಗ್. ನಂತರ ನಾನು ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವಾಗಲೂ ಇದೇ ರೀತಿ ಸುದ್ದಿ. ನಂತರ ಬಂದ ಬೇರೆ ಬೇರೆ ಪತ್ರಿಕೆಯವರೂ ಇದನ್ನೆ ಅನುಸರಿಸುತ್ತಿದ್ದರು. 2006ರಲ್ಲಿ ನಾನು ಬೆಂಗಳೂರು ಸೇರಿದೆ. ಒಂದಷ್ಟು ತಿಂಗಳು ಕೆಲಸ ಮಾಡಿದ ನಂತರ ಮೊದಲ ನ್ಯೂಸ್ ಚಾನಲ್ ಟಿವಿ9 ಸೇರಿಕೊಂಡು ಮತ್ತೆ ಅದೇ ವರ್ಷ ಕೊಡಗಿಗೆ ಬಂದೆ. 2007ರಲ್ಲಿ ಮಳೆಗಾಲ ಶುರು ಆದಾಗ ಮತ್ತೆ ಭಾಗಮಂಡಲ, ತಲಕಾವೇರಿಯತ್ತ ಪಯಣ. ಇಷ್ಟು ದಿನ ಪತ್ರಿಕೆಯಲ್ಲಿ ಬರೆಯುತ್ತಿದ್ದುದ್ದನ್ನು ಟಿವಿಯಲ್ಲಿ ತೋರಿಸಲು ಶುರು ಮಾಡಿದೆ. ಆ ವರ್ಷ ಒಂದು ದಿನ ಭಾಗಮಂಡಲ ಜಲಾವೃತವಾಗಿದ್ದುದ್ದನ್ನು ನೋಡುತ್ತಿದ್ದ ನನಗೆ ಹಾಗಾದ್ರೆ ಈ ಸಮಸ್ಯೆಗೆ ಸೊಲ್ಯೂಷನ್ ಇಲ್ಲವಾ? ಎಷ್ಟು ದಿನ ಅಂತಾ ಆ ಭಾಗದ ಜನ ಹೀಗೆ ಇರಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಆವಾಗ ಟಿವಿ9 ಕಚೇರಿ ಪಕ್ಕ ಇದ್ದ ಫ್ಲೈ ಓವರ್ ನಲ್ಲಿ ಓಡಾಡುತ್ತಿದ್ದ ನನಗೆ ಅದೇ ತರಹದ ಫ್ಲೈ ಓವರ್ ಅನ್ನು ಭಾಗಮಂಡಲದಲ್ಲಿ ಯಾಕೆ ನಿರ್ಮಿಸಬಾರದು ಅಂತಾ ಯೋಚಿಸಿದೆ. ಅದೇ ಆ್ಯಂಗಲ್ ನಲ್ಲಿ ಸ್ಟೋರಿ ಮಾಡಿ ಭಾಗಮಂಡಲಕ್ಕೆ ಬೇಕಿದೆ ಫ್ಲೈ ಓವರ್ ಅಂತಾ ಸುದ್ದಿ ಮಾಡಿದೆ. ನೋಡಿದವರೆಲ್ಲ ಭಾಗಮಂಡಲಕ್ಕೆ ಫ್ಲೈ ಓವರಾ? ಅಂತಾ ನನ್ನ ಛೇಡಿಸಿದ್ರು, ವ್ಯಂಗ್ಯ ಮಾಡಿದ್ರು. ಕೇವಲ ಮೂರು ತಿಂಗಳಿಗೆ, ಅದರಲ್ಲೂ ಹತ್ತು ಸಾವಿರದಷ್ಟು ಇಲ್ಲದ ಆ ಗ್ರಾಮಕ್ಕೆ ಫ್ಲೈ ಓವರ್ ನಿರ್ಮಿಸಲು ನೂರಾಋಉ ಕೋಟಿ ಹಣ ಬೇಕು. ಅದು ವೇಸ್ಟ್ ಅಂತಾನೂ ನನ್ನ ಬಳಿ ಕೆಲವರು ಹೇಳಿದ್ದಾರೆ. ಹೋಗಲೀ ಸುದ್ದಿ ಮಾಡುವಾಗ ಭಾಗಮಂಡಲಕ್ಕೆ ಫ್ಲೈ ಓವರ್ ಮಾಡಿಕೊಡಿ ಅಂತಾ ಒಂದು ಬೈಟ್ ಕೊಡಿ ಅಂತಾ ಕೇಳಿದ್ರೂ ಯಾರೂ ಕೊಡುತ್ತಿರಲಿಲ್ಲ. ಕೊನೆಗೆ ಕುದುಕುಳಿ ಭರತ್, ಆಟೋ ಚಾಲಕ ಅಣ್ಣಯ್ಯ, ಜೀಪ್ ಚಾಲಕ ತೀರ್ಥರಾಮ, ದಿವಂಗತ ನಾರಾಯಣ ಆಚಾರ್, ಇನ್ನಿತರರಿಗೆ ಹೀಗೆ ಮಾತಾಡಿ ಅಂತಾ ಹೇಳಿ ಬೈಟ್ ತಗೊಂಡು ಸ್ಟೋರಿ ಮಾಡುತ್ತಲೇ ಇದ್ದೆ. ಇದೇ ತರಹ ಕುಶಾಲನಗರ ಸಮೀಪದ ಕಣಿವೆಯಲ್ಲೂ ಕಾವೇರಿ ಉಕ್ಕಿ ಹರಿದಾಗ ಅಲ್ಲಿನ ಜನರು ಅತ್ತಿಂದಿತ್ತ ಓಡಾಡಲಾಗದೇ ಪರದಾಡುತ್ತಿದ್ದರು. ಅದನ್ನು ಸುದ್ದಿ ಮಾಡಿದ್ದ ನನಗೆ ಮುಂದಿನ ವರ್ಷ ಅದೇ ಸುದ್ದಿ ಮಾಡುತ್ತಿದ್ದಾಗ ನಮ್ಮ ನಿಸರ್ಗಧಾಮದ ಹ್ಯಾಂಗಿಗ್ ಬ್ರಿಡ್ಜ್ ನೆನಪಾಗಿ ಕಣಿವೆಗೆ ಬೇಕಿದೆ ಹ್ಯಾಂಗಿಂಗ್ ಬ್ರಿಡ್ಜ್ ಅಂತಾ ದೊಡ್ಡದಾಗಿ ಟಿವಿ9 ನಲ್ಲಿ ಸುದ್ದಿ ಮಾಡಿದ್ದೆ. ಈ ಸುದ್ದಿ ನೋಡಿದ ಶಿವಮೊಗ್ಗದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಒಬ್ಬರು ನನಗೆ ಕರೆ ಮಾಡಿ ನಿಮ್ಮ ಸುದ್ದಿ ನೋಡಿದೆ. ಮುಂದಿನ ವರ್ಷ ಈ ಸಮಸ್ಯೆ ಇರಲ್ಲ. ನಾವು ಕಣಿವೆಗೆ ಹ್ಯಾಂಗಿಂಗ್ ಬ್ರಿಡ್ಜ್ ಮಾಡಿಕೊಡುತ್ತೇವೆ ಎಂದರು. ಅವಾಗ ಥಟ್ಟನೆ ನೆನಪು ಬಂದು ಭಾಗಮಂಡಲಕ್ಕೂ ಒಂದು ಬ್ರಿಡ್ಜ್ ಮಾಡಿಕೊಡಿ ಪ್ಲೀಸ್ ಅಂದೆ. ಅವಾಗ ಅವ್ರು ಅದು ದೊಡ್ಡ ಪ್ರಾಜೆಕ್ಟ್. ನಮ್ಮಲ್ಲಿ ಅಷ್ಟು ಅನುದಾನ ಇಲ್ಲ. ಇದನ್ನು ಸರಕಾರವೇ ನೇರವಾಗಿ ಮಾಡಬೇಕು ಅಂದ್ರು. ಸದ್ಯಕ್ಕೆ ಭಾಗಮಂಡಲಕ್ಕೆ ಮೋಟಾರು ಬೋಟ್ ವ್ಯವಸ್ಥೆ ಮಾಡಿಕೊಡುತ್ತೇವೆ ಅಂದ್ರು. ಅಲ್ಲಿಗೆ ಫ್ಲೈ ಓವರ್ ಮಾಡುವ ನನ್ನ ಕನಸು ಹಾಗೇಯೇ ಉಳಿಯಿತು. ನಂತರ 2012ರವರೆಗೂ ಭಾಗಮಂಡಲಕ್ಕೆ ಪ್ಲೈ ಓವರ್ ಬೇಕು ಅಂತಾ ನಿರಂತರ ಸ್ಟೋರಿ ಮಾಡುತ್ತಲೇ ಇದ್ದೆ. 2012ರಲ್ಲಿ ಟಿವಿ9 ನಿಂದ ವಿಜಯ ಕರ್ನಾಟಕ ಪತ್ರಿಕೆಗೆ ಬಂದೆ. ಅಲ್ಲೂ ಇದೇ ರೀತಿ ಸುದ್ದಿ ಮಾಡುತ್ತಲೇ ಇದ್ದೆ. ಆದ್ರೆ ಫ್ಲೈ ಓವರ್ ಮಾಡೋ ಇಚ್ಚಾ ಶಕ್ತಿ ಯಾರಿಗೂ ಬರಲಿಲ್ಲ. 2014ರಲ್ಲಿ ನಾನು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷನಾದೆ. ಆಗ ಸಿದ್ದರಾಮಯ್ಯ ಸರಕಾರ ಇತ್ತು. ಅದೇ ಸಮಯಕ್ಕೆ ಕೊಡಗಿನವರೇ ಆದ ಕೆ ಜೆ ಜಾರ್ಜ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದರು. ಆಗ ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿದ್ದ, ನನ್ನ ಆತ್ಮೀಯ ಮಾರ್ಗದರ್ಶಕ ಮಿಟ್ಟು ಚಂಗಪ್ಪ ಅವರು ಕರೆ ಮಾಡಿ, ಜಗದೀಶ್ ಬೆಳ್ಯಪ್ಪ… ನಮ್ಮ ಜಾರ್ಜ್ ಇನ್ ಚಾರ್ಜ್ ಮಿನಿಸ್ಟರ್ ಆಗಿದ್ದಾನೆ. ನೀನು ಪ್ರೆಸ್ ಕ್ಲಬ್ ಅಧ್ಯಕ್ಷ ಅಲ್ವಾ. ಅವ್ರ ಇಂಟರ್ ವಿವ್ಯೂ, ಪ್ರೆಸ್ ಮೀಟ್ ಮಾಡಿಸು. ಅಲ್ಲಿ ಸಮಸ್ಯೆ.. ಇಲ್ಲಿ ಸಮಸ್ಯೆ ಅಂತಾ ಬರೀತಾ ಇರ್ತಿಯಾ ಅಲ್ಲ. ಅದನ್ನ ಜಾರ್ಜ್ ಹತ್ರ ನೇರವಾಗಿ ಕೇಳು. ಅವ್ರು ಕೊಡಗಿಗೆ ಏನಾದ್ರೂ ಮಾಡಬೇಕು ಅಂತಾ ಇದ್ದಾರೆ ಅಂದ್ರು. ನಾನು ವೆರಿ ನೆಸ್ಕ್ಟ್ ವೀಕ್ ಜಾರ್ಜ್ ಅವರೊಂದಿಗೆ ಪ್ರೆಸ್ ಕ್ಲಬ್ನಿಂದ ಸಂವಾದ ಕಾರ್ಯಕ್ರಮ ಮಾಡಿದೆ. ಹಿಂದಿನ ದಿನ ನಾನು ಏನ್ ಕೇಳಲಿ ಅಂತಾ ಯೋಚನೆ ಮಾಡುತ್ತಿದ್ದೆ. ಆಗ ಹೊಳೆದಿದ್ದೆ ಭಾಗಮಂಡಲಕ್ಕೆ ಫ್ಲೈ ಓವರ್ ಮಾಡಿಕೊಡಿ ಅನ್ನೋದು. ಮರು ದಿನ ಸಂವಾದದಲ್ಲಿ ಎಲ್ಲಾ ಪತ್ರಕರ್ತರು ಪ್ರಶ್ನೆ ಕೇಳಿದ್ರು. ಜಾರ್ಜ್ ಕೂಡ ಮಾಡ್ತೀನಿ ಅಂದ್ರು. ನನಗೆ ಸಂವಾದ ಏರ್ಪಡಿಸೋ ಟೆನ್ಸನ್ ಲಿ ಯಾವ ಸಮಸ್ಯೆ ಹೇಳಕ್ಕೂ ಆಗಲಿಲ್ಲ.  ನಂತರ ಸಂಜೆ ಪತ್ರಕರ್ತರಿಗೆ ಜಾರ್ಜ್ ಔತಣ ಕೂಟ ಏರ್ಪಡಿಸಿದ್ರು. ಅವರೊಂದಿಗೆ ಮಿಟ್ಟು ಚಂಗಪ್ಪ, ಎಂ ಎಂ ನಾಣಯ್ಯ, ಅಂದಿನ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ ಎ ಪೊನ್ನಪ್ಪ, ತಲಕಾವೇರಿ ಭಾಗಮಂಡಲ ದೇವಾಲಯ ನಿಧಿ ವ್ಯವಸ್ಥಾಪನಾ ಸಮಿತಿಯ ಡಾ. ಕಾವೇರಪ್ಪ ಮತ್ತಿತರರು ಇದ್ರು. ಪಾರ್ಟಿ ಮಧ್ಯೆ ಮಿಟ್ಟು ಚಂಗಪ್ಪ ನನ್ನನ್ನು ಮತ್ತೆ ಜಾರ್ಜ್ ಹತ್ರ ಕೂರಿಸಿದ್ರು. ಕೊಡಗಿಗೆ ಏನ್ ಬೇಕು ಕೇಳು ಅಂದ್ರು. ನಾನು ಜಾರ್ಜ್ ಅವರಿಗೆ ಯಾರಿಂದಲೂ ಸಾಧ್ಯವಾಗದ ಕೆಲಸ ಒಂದು ಇದೆ. ಅದನ್ನ ನೀವು ಮಾಡಬಹುದು. ನೀವು ಸಿಎಂ ಗೆ ಕ್ಲೋಸ್ ಇದ್ದೀರ. ನೀವು ಟ್ರೈ ಮಾಡಿದ್ರೆ ಆಗುತ್ತೆ ಎಂದೆ. ಏನು ಅಂತಾ ಥಟ್ಟನೆ ಜಾರ್ಜ್ ಕೇಳಿದ್ರು. ಮಳೆಗಾಲದಲ್ಲಿ ಭಾಗಮಂಡಲದ ಎಲ್ಲಾ ಸಮಸ್ಯೆ ಹೇಳಿದೆ. ಅದಕ್ಕೆ ಫ್ಲೈ ಓವರ್ನಾ ಪರಿಹಾರವೂ ಹೇಳಿದೆ. ಜಾರ್ಜ್ ಫ್ಲೈ ಓವರಾ? ಭಾಗಮಂಡಲಕ್ಕೆ ಅಂದ್ರು. ಅಷ್ಟಕ್ಕೆ ಮಿಟ್ಟು ಚಂಗಪ್ಪ ಏ ಜಾರ್ಜ್.. ನಿನ್ನ ಕೈಯಲ್ಲಿ ಆಗದಿರೋದು ಯಾವುದು ಇದೆ ಹೇಳು. ಇದು ಮಾಡು ಅಂದ್ರು. ತಕ್ಷಣ ಜಾರ್ಜ್ ತಮ್ಮ ಪಿ ಎ ಕರೆದು ಭಾಗಮಂಡಲ ಟೂರ್ ಫಿಕ್ಸ್ ಮಾಡು ಅಂದ್ರು. ಆ ನಂತರ ಭಾಗಮಂಡಲಕ್ಕೆ ತೆರಳಿದ ಜಾರ್ಜ್ ಎಲ್ಲಾ ನೋಡಿಕೊಂಡು ಬಂದ್ರು. ಡಾ. ಕಾವೇರಪ್ಪ, ಸ್ಥಳಿಯರು ಜಾರ್ಜ್ಗೆ ಸಾಕಷ್ಟು ಮಾಹಿತಿ ನೀಡಿದ್ರು. ಬೆಂಗಳೂರಿಗೆ ತೆರಳಿದ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಸಿದ್ದಪಡಿಸಿದ್ರು. ಅದಕ್ಕೆ ಅನುದಾನವೂ ಸಿಕ್ಕಿತ್ತು. ಬೆಂಗಳೂರಿನಿಂದ ನನಗೆ ಪೋನ್ ಕರೆ ಮಾಡಿದ ಜಾರ್ಜ್, ಎಲ್ಲಾ ರೆಡಿ, ಭಾಗಮಂಡಲಕ್ಕೆ ಫ್ಲೈ ಓವರ್ ಬರುತ್ತೆ ಅಂದ್ರು. ನನಗೋ ನಂಬಲಾಗದ ಸ್ಥಿತಿ. ಕನಸು ನನಸಾಗುತ್ತಿದೆಯಲ್ಲ ಅನ್ನೋ ಭಾವುಕತೆ. ಕೂಡಲೇ ಮಿಟ್ಟು ಚಂಗಪ್ಪ ಅವರಿಗೆ ಥ್ಯಾಂಕ್ಸ್ ಹೇಳಿದೆ. ಅದೇ ಸಂದರ್ಭದಲ್ಲಿ ಜಾರ್ಜ್ ಅವರು ಮಡಿಕೇರಿಯ ಚಾಮರಾಜ ವಿಲಾ ಖರೀದಿ ಮಾಡಿದ್ದರು. ನನ್ನ ಮನೆ ಕೂಡ ಅಲ್ಲೆ ಇತ್ತು. ಹೀಗಾಗಿ ಅವರು ಬಂದಾಗೆಲ್ಲ ಮಿಟ್ಟು ಚಂಗಪ್ಪ ಅವರ ಜೊತೆ ಜಾರ್ಜ್ ಅವರನ್ನ ಮೀಟ್ ಮಾಡುತ್ತಿದ್ದೆ. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವು. ಇನ್ನು ಏನಾದ್ರೂ ಸಮಸ್ಯೆ ಇದ್ರೆ ಜಾರ್ಜ್ಗೆ ಹೇಳು ಅಂತಾ ಮಿಟ್ಟು ಚಂಗಪ್ಪ ನನಗೆ ಹೇಳುತಿದ್ರು. ಇದಾದ ಕೆಲವೇ ದಿನಗಳಲ್ಲಿ ಅಂದ್ರೆ 2015ಕ್ಕೆ ನಾನು ಮತ್ತೆ ಬೆಂಗಳೂರಿಗೆ ಶಿಪ್ಟ್ ಆದೆ. ಆನಂತರ ಫ್ಲೈ ಓವರ್ ಬಗ್ಗೆ ಫಾಲೋ ಅಪ್ ಮಾಡಲಿಲ್ಲ. 2016ರಲ್ಲಿ ಜಾರ್ಜ್ ಅವರು ಡಿವೈ ಎಸ್ಪಿ ಗಣಪತಿ ಕೇಸ್ ನಲ್ಲಿ ರಾಜೀನಾಮೆ ಕೊಡೋ ಪರಿಸ್ಥಿತಿ ಬಂತು. ಕೆಲವು ದಿನದ ನಂತರ ನಾನು ಜಾರ್ಜ್ ಅವರಿಗೆ ಪೋನ್ ಮಾಡಿದ್ದೆ. ನಾನು ಕೊಡಗಿನವರಿಗೆ ಏನು ತೊಂದರೆ ಮಾಡಿದ್ದೆ? ನನ್ನ ಮೇಲೆ ಯಾಕೆ ಇಂತಹ ಆರೋಪ ಬಂತು. ನನಗೆ ಕೊಡಗಿನ ಬಗ್ಗೆ ಬೇಜಾರು ಆಗಿದೆ. ನಾನು ಅಲ್ಲಿಗೆ ಹೋಗಲ್ಲ ಅಂತಾ ಹೇಳಿ ಬೇಸರದಿಂದ ಫೋನ್ ಇಟ್ಟರು. ನನಗೋ ಏನೂ ಹೇಳಲಾಗದ ಸ್ಥಿತಿ. ನಂತರ ನಾನು ಒಂದೆರಡು ಬಾರಿ ಭಾಗಮಂಡಲ ಬಂದಾಗ ಫ್ಲೈ ಓವರ್ ಪಿಲ್ಲರ್ಗಳಷ್ಟೆ ಕಾಣುತ್ತಿದ್ದವು. ವಿಚಾರಿಸಿದಾಗ ಗುತ್ತಿಗೆದಾರರಿಗೆ ಏನೋ ಸಮಸ್ಯೆ ಅಂತಾ ಹೇಳಿದ್ರು. ಕಳೆದ ಮೂರು ವರ್ಷದಿಂದ ಭಾಗಮಂಡಲ ಬರಲು ಸಾಧ್ಯವಾಗಲಿಲ್ಲ. ಮೊನ್ನೆ ಅಪ್ಪನ ಕ್ರಿಯೆಗೆ ಬಂದಾಗ ಫ್ಲೈ ಓವರ್ ಕಂಪ್ಲೀಟ್ ಆಗಿದ್ದು ನೋಡಿದಾಗ ಇವೆಲ್ಲ ನೆನಪಾದವು. ಉದ್ಘಾಟನೆ ಆಯ್ತಾ ಅಂತಾ ಅಲ್ಲಿದ್ದವರನ್ನ ಕೇಳಿದೆ. ಎರಡ್ಮೂರು ಸಲ ಪ್ಲಾನ್ ಮಾಡಿದ್ರು. ಇನ್ನೂ ಉದ್ಘಾಟನೆ ಆಗಿಲ್ಲ ಅಂದ್ರು. ಹಾಗಾದ್ರೆ ಬೆಂಗಳೂರಿಗೆ ಹೋದ ಮೇಲೆ ಜಾರ್ಜ್ ಅವರತ್ರ ಮಾತಾಡಿ ಫ್ಲೈ ಓವರ್ ಕಂಪ್ಲೀಟ್ ಆಗಿದೆ ಅಂತಾ ಹೇಳ್ತಿನಿ ಅಂದುಕೊಂಡೆ. ಬೆಂಗಳೂರಿಗೆ ಬಂದು ಜಾರ್ಜ್ ಅವರಿಗೆ ಕಾಲ್ ಮಾಡಲು ನಿನ್ನೆ ಫೋನ್ ಎತ್ತಿಕೊಂಡಾಗ ವಾಟ್ಸ್ ಅಪ್ ಮೆಸೆಜ್ ಬಂತು. ಅದು ಸಿಎಂ  ಮಿಡಿಯಾ ಗ್ರೂಪ್. ಅದರಲ್ಲಿ ಸಿಎಂ ಪ್ರೋಗ್ರಾಂ ಲಿಸ್ಟ್ ಇತ್ತು. ಜನವರಿ 31ಕ್ಕೆ ಭಾಗಮಂಡಲ ಫ್ಲೈ ಓವರ್ ಉದ್ಘಾಟನೆ ಅಂತಾ ನೋಡಿ ಖುಷಿ ಆಯ್ತು. ಜಾರ್ಜ್ ಅವ್ರೂ ಹೋಗ್ತಿದ್ದಾರೆ ಅಂತಾ ಗೊತ್ತಾಯ್ತು. ಆಮೇಲೆ ಜಾರ್ಜ್ ಅವರಿಗೆ ಪೋನ್ ಮಾಡಲಿಲ್ಲ. ಹಾಗೇಯೇ ಖುರ್ಚಿಗೆ ಒರೆಗಿಕೊಂಡ ನನಗೆ ಏನೋ ಸಾರ್ಥಕ ಭಾವನೆ. ಹತ್ತು ವರ್ಷ ಆದ್ರೂ ಫ್ಲೈ ಓವರ್ ಬಂತಲ್ಲ. ಇನ್ನು ಭಾಗಮಂಡಲ ಜಲಾವೃತ – ಸಂಪರ್ಕ ಕಡಿತ, ಭಾಗಮಂಡಲ ದ್ವೀಪ, ಕಾರ್ಗತ್ತಲಲ್ಲಿ ಭಾಗಮಂಡಲ ಈ ಹೆಡ್ಡಿಂಗ್ ಗಳಿಗೆಲ್ಲ ಇನ್ನು ಅವಕಾಶ ಇಲ್ಲ. ಇದುವರೆಗೂ ಕೊಡಗಿನ ಶಕ್ತಿ ಪತ್ರಿಕೆ, ಟಿವಿ9 ಸೇರಿದಂತೆ ನಂತರ ಬಂದ ಪತ್ರಿಕೆಗಳು, ಚಾನಲ್ಗಳು ಕೂಡ ಭಾಗಮಂಡಲ ಸಮಸ್ಯೆ ಬಗ್ಗೆ, ಫ್ಲೈ ಓವರ್ ಕಾಮಾಗಾರಿ ಅರ್ಧಕ್ಕೆ ನಿಂತ ಬಗ್ಗೆ ಸಾಕಷ್ಟು ಭಾರೀ ವರದಿ ಮಾಡಿವೆ. ಭಾಗಮಂಡಲದ ಹಿರಿಯ ಪತ್ರಕರ್ತ ಸುನಿಲ್ ಕುಯ್ಯಮುಡಿ, ಜೀವನ್, ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿ, ಇಂದಿನ, ಅಂದಿನ ಶಾಸಕರು, ಜಿಲ್ಲಾಧಿಕಾರಿಗಳು, ರಾಜಕಾರಣಿಗಳು, ಭಾಗಮಂಡಲ ಸುತ್ತಮುತ್ತಲಿನ ಮುಖಂಡರು ಈ ಫ್ಲೈ ಓವರ್ ಕಂಪ್ಲೀಟ್ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಅವರೆಲ್ಲರೂ ಈಗ ಖುಷಿ ಪಡುವ ಸಮಯ. *ಇಚ್ಚಾ ಶಕ್ತಿ ಎದುರು ಇನ್ನೊಂದಿಲ್ಲ* ಇಚ್ಚಾ ಶಕ್ತಿ ಅನ್ನೋದು ಮನುಷ್ಯನಿಗೆ ಅತೀ ಮುಖ್ಯ.. ಏ ಅದೆಲ್ಲ ಆಗಲ್ಲ ಅಂದ್ರೆ ಅದು ಆಗಲ್ಲ. ಯಾಕೆ ಆಗಲ್ಲ ನಾನು ಮಾಡ್ತೀನಿ ಅಂದ್ರೆ ಅದು ಆಗುತ್ತೆ. ಇದಕ್ಕೆ ಈ ಫ್ಲೈ ಓವರ್ ಸಾಕ್ಷಿ. ಇನ್ನೂ ಒಂದು ಮುಖ್ಯ ಯೋಜನೆ ಜಾರಿಯಾಗಬೇಕಿದೆ. ಅದು ಮಡಿಕೇರಿಗೆ ಬೇತ್ರಿ ಕಾವೇರಿ ನದಿಯಿಂದ ಕುಡಿಯುವ ನೀರು. ಮಡಿಕೇರಿ ದಿನೇ ದಿನೇ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಹೆಚ್ಚಿದೆ. ಹಾಗಾಗಿ ಬೇತ್ರಿಯಿಂದ ಕುಡಿಯುವ ನೀರು ಯೋಜನೆ ಮಾಡಿದ್ರೆ ಅದು ಶಾಶ್ವತ ಯೋಜನೆ ಆಗುತ್ತದೆ. ಜೊತೆಗೆ ಬೇತ್ರಿಯಿಂದ ಮಡಿಕೇರಿವರೆಗಿನ ಪ್ರದೇಶಕ್ಕೂ ನೀರು ಸಿಗುತ್ತದೆ. ಏ ಇದು ಆಗಲ್ಲ ಅಂದ್ರೆ ಆಗಲ್ಲ.. ಆಗುತ್ತೆ ಅಂದ್ರೆ ಆಗುತ್ತೆ. ನಾಳೆ ಸಿಎಂ ಬರುತ್ತಿದ್ದಾರೆ.  ಈ ಬಗ್ಗೆ ಅವರ ಜೊತೆ ಮಾತನಾಡಿದ್ರೆ ಆನ್ ದಿ ಸ್ಪಾಟ್ ನಲ್ಲೇ ಅನುಮೋದನೆ ಸಿಗೋದು ಗ್ಯಾರಂಟಿ. ಯಾಕಂದ್ರೆ ಇದು ಗ್ಯಾರಂಟಿ ಸರಕಾರ ಅಂತಾ ಅವ್ರೆ ಹೇಳ್ಕೊಂಡವ್ರೆ! (*ಜಗದೀಶ್ ಬೆಳ್ಯಪ್ಪ, ಹಿರಿಯ ಪತ್ರಕರ್ತರು, ಬೆಂಗಳೂರು*)

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ*

ಮಾರ್ಚ್ 5, 2026

*21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ*

ಮಾರ್ಚ್ 5, 2026

*ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಹೋರಾಟ*

ಮಾರ್ಚ್ 5, 2026

*21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ*

ಮಾರ್ಚ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಮಾ.5 : ಕೊಡಗು ಮುಸ್ಲಿಂ ಸ್ಟೋಟ್ಸ್ ಟ್ರಸ್ಟ್ ವತಿಯಿಂದ 21ನೇ ವರ್ಷದ ಕೊಡಗು ಮುಸ್ಲಿಂ ಕಪ್…

*ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಹೋರಾಟ*

ಮಾರ್ಚ್ 5, 2026

*ಜಿಲ್ಲಾ ಮಟ್ಟದ ಮಾದಕ ದ್ರವ್ಯ ಸಮನ್ವಯ ಸಮಿತಿ ಸಭೆ*

ಮಾರ್ಚ್ 5, 2026

*ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ – ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ*

ಮಾರ್ಚ್ 5, 2026

*ರಾಷ್ಟ್ರೀಯ ಮಹಿಳಾ ಕಲಾಶಿಬಿರಕ್ಕೆ ಚಾಲನೆ : ಚಿತ್ರಕಲಾ ಗ್ಯಾಲರಿ ಆರಂಭಿಸಲು ಪರಶುರಾಮ ಸಂಪತ್ ಕುಮಾರ್ ಕರೆ*

ಮಾರ್ಚ್ 5, 2026

*ಏ.5 ರಿಂದ ಮೇ 2 ರವರೆಗೆ ಚೇನಂಡ ಕಪ್ ಹಾಕಿ ಉತ್ಸವ : 4 ಮೈದಾನಗಳಲ್ಲಿ ಪಂದ್ಯಾವಳಿ : ಹೆಸರು ನೋಂದಣಿಗೆ ಮಾ.20 ಕೊನೆ ದಿನ*

ಮಾರ್ಚ್ 5, 2026

*ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗಲಿದೆ ಹೊಸ ವಿದ್ಯುತ್ ದರ: ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಕಂಪ್ಲೀಟ್ ಚಾರ್ಟ್*

ಮಾರ್ಚ್ 5, 2026

*ನಿಮ್ಮ ಏರಿಯಾದಲ್ಲಿ ನೀರಿಲ್ಲವೇ?: ಕೂಡಲೇ ಈ ಕೆಲಸ ಮಾಡಿ! ಮನೆ ಬಾಗಿಲಿಗೇ ಬರಲಿದೆ ಕಾವೇರಿ ನೀರು; ಹೇಗೆ ಗೊತ್ತಾ?*

ಮಾರ್ಚ್ 5, 2026

*ಸೆಟ್ಟೇರಿತು ‘ನನ್ನ ಸೈಕಲ್ ಸವಾರಿ’*

ಮಾರ್ಚ್ 5, 2026

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.