Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾಫಿ ಬೆಳೆಗಾರರಿಗೆ ಖುಲಾಯಿಸಿದ ಅದೃಷ್ಟ : ಅರೇಬಿಕಾ ಪಾರ್ಚ್‌ ಮೆಂಟ್‌ ದರ 26,200 ಕ್ಕೆ ಏರಿಕೆ : ಸರ್ವ ಕಾಲಿಕ ದಾಖಲೆ : 30 ಸಾವಿರ ತಲುಪುವ ಸಾದ್ಯತೆ ?
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕಾಫಿ ಬೆಳೆಗಾರರಿಗೆ ಖುಲಾಯಿಸಿದ ಅದೃಷ್ಟ : ಅರೇಬಿಕಾ ಪಾರ್ಚ್‌ ಮೆಂಟ್‌ ದರ 26,200 ಕ್ಕೆ ಏರಿಕೆ : ಸರ್ವ ಕಾಲಿಕ ದಾಖಲೆ : 30 ಸಾವಿರ ತಲುಪುವ ಸಾದ್ಯತೆ ?

ಫೆಬ್ರವರಿ 5, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು ಫೆ.5 NEWS DESK : ಜಗತ್ತಿನ ಕಾಫಿ ಬೆಳೆಯುವ ದೈತ್ಯ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಕಾಫಿಯ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಇದು ಸಹಜವಾಗಿಯೇ ಕಾಫಿಯ ದರ ಏರಿಕೆಗೂ ಕಾರಣವಾಗಿದೆ.
ಮಂಗಳವಾರ ಕಾಫಿ ಬೆಳೆಗಾರರಿಗೆ ಶುಭ ಮಂಗಳವಾರವೇ ಆಗಿದೆ. ಕಳೆದ 7 ದಿನಗಳ ಹಿಂದೆ 24,100 ರೂಪಾಯಿ ತಲುಪಿದ್ದ ಅರೇಬಿಕಾ ಪಾರ್ಚ್‌ ಮೆಂಟ್‌ ಕಾಫಿ ದರ ಇಂದು ಸರ್ವಕಾಲಿಕ ದಾಖಲೆ ಬೆಲೆ ಆಗಿರುವ 26,200 ರೂಪಾಯಿಗಳನ್ನು ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗಿಸಿದೆ. ಈ ಬಾರಿಯ ದರ ಏರಿಕೆಯ ವಿಶೇಷವೆಂದರೆ ಸಾಮಾನ್ಯವಾಗಿ ಕಾಫಿ ದರವು ಕೊಯ್ಲು ಸಮಯದಲ್ಲಿ ಕಾಫಿಯ ಆವಕ ಹೆಚ್ಚಾಗುವುದರಿಂದ ಕೊಂಚ ಕುಸಿತ ಇರುತ್ತದೆ . ಕೊಯಿಲು ಮುಗಿದ ಮೂರು ನಾಲ್ಕು ತಿಂಗಳಿನಲ್ಲಿ ಅಲ್ಪ ಏರಿಕೆ ದಾಖಲಿಸುತ್ತದೆ. ಆದರೆ ಈ ಬಾರಿ ಕಾಫಿ ಕೊಯ್ಲು ಇನ್ನೂ ಪೂರ್ಣಗೊಳ್ಳುವ ಮೊದಲೇ ಬೆಲೆಗಳು ಜಿಗಿತ ದಾಖಲಿಸಿವೆ. ಶುಕ್ರವಾರವಷ್ಟೇ 50 ಕೆಜಿ ಚೀಲಕ್ಕೆ 24 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತಿದ್ದ ಅರೇಬಿಕಾ ಪಾರ್ಚ್ಮೆಂಟ್ ಸೋಮವಾರ ಚೀಲಕ್ಕೆ 25 ಸಾವಿರದ ಐದು ನೂರು ಹಾಗೂ ಮಂಗಳವಾರ ಮತ್ತೂ ಏಳು ನೂರು ರೂಪಾಯಿ ಬೆಲೆ ಏರಿಸಿಕೊಂಡು 26,200 ರೂಪಾಯಿ ತಲುಪಿದೆ. ಅಂದರೆ ಕಾಫಿ ದರ ಕೇವಲ ಮೂರೇ ದಿನದಲ್ಲಿ ಚೀಲಕ್ಕೆ 1500 ರೂಪಾಯಿ ನಷ್ಟು ಏರಿಕೆ ದಾಖಲಿಸಿದೆ. ಈ ದಿಢೀರ್‌ ದರ ಏರಿಕೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಅಪರೂಪ ಆಗಿದ್ದು ಉದ್ಯಮದಲ್ಲಿ ತೀವ್ರ ಅಚ್ಚರಿಗೂ ಕಾರಣವಾಗಿದೆ.
ಟ್ರಂಪ್‌ ಕಟ್ಟು ನಿಟ್ಟಿನ ಕ್ರಮ ::  ಅಮೇರಿಕಾ ನೂತನ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದ್ಯಕ್ಷರಾಗಿ ಚುನಾಯಿತರಾದ ನಂತರ ಅಮೇರಿಕಾದ ಹಿತಾಸಕ್ತಿಗೆ ಅನುಗುಣವಾಗಿ ಕೈಗೊಂಡಿರುವ ಕೆಲವೊಂದು ಕ್ರಮಗಳ ಕಾರಣದಿಂದ ಡಾಲರ್‌ ಮೌಲ್ಯ ಏರಿಕೆ ದಾಖಲಿಸುತಿದ್ದು ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿತ ಅನುಭವಿಸುತ್ತಿದೆ. ಅಲ್ಲದೆ ಇದೇ ಕಾರಣದಿಂದಾಗಿ ದೇಶದ ಷೇರು ಮಾರುಕಟ್ಟೆಯಲ್ಲೂ ಕಂಪನ ದಾಖಲಾಗಿದ್ದು ಸೆನ್ಸೆಕ್ಸ್‌ ಮತ್ತು ನಿಫ್ಟಿ ಕಳೆದ ಆರು ತಿಂಗಳ ಕನಿಷ್ಟ ಮಟ್ಟಕ್ಕೆ ಕುಸಿದಿವೆ. ಆದರೆ ಸರಕು ಮುಖ್ಯವಾಗಿ ಚಿನ್ನದ ಬೆಲೆಯಲ್ಲೀ ತೀವ್ರ ಹೆಚ್ಚಳ ಆಗುತಿದ್ದು ಇದೇ ರೀತಿ ಕಾಫಿ ದರವೂ ಏರಿಕೆ ದಾಖಲಿಸುತ್ತಿದೆ. ಮಂಗಳವಾರ ಸೋಮವಾರಪೇಟೆಯ ಬ್ಲಾನ್‌ ಕಮಾಡಿಟೀಸ್‌ ನಲ್ಲಿ ಕಾಫಿ ದರ ಅರೇಬಿಕಾ ಪಾರ್ಚ್ಮೆಂಟ್2̧6,200 ರೂಪಾಯಿ ದಾಖಲಾಗಿದ್ದರೆ ಮೂಡಿಗೆರೆಯ ಮುದ್ರೆ ಮನೆ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ನಲ್ಲಿ 26,000 ರೂಪಾಯಿ ದಾಖಲಾಗಿತ್ತು. ಅರೇಬಿಕಾ ಚೆರಿ ಕಾಫಿ 50 ಕೆಜಿ ಚೀಲಕ್ಕೆ 13,500 , ರೊಬಸ್ಟಾ ಚೆರಿ 12,500 ಮತ್ತು ರೊಬಸ್ಟಾ ಪಾರ್ಚ್ಮೆಂಟ್‌ ದರ 22,500 ರೂಪಾಯಿಗಳಿಗೆ ಏರಿಕೆ ಆಗಿದೆ. ಚಿಕ್ಕಮಗಳೂರು ಹಾಗೂ ಕೊಡಗಿನ ಕಾಪಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ದರ ವ್ಯತ್ಯಾಸ ಇರಲಿಲ್ಲ. ಮುಂದಿನ ತಿಂಗಳುಗಳಲ್ಲಿ ಕಾಫಿ ದರ ಹೆಚ್ಚಾಗಿ 30 ಸಾವಿರ ತಲುಪುವ ಸಾದ್ಯತೆಯೂ ಇದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಹೆಚ್ಚಿದ ಚಿಕೋರಿ ಬಳಕೆ ::  ಕಾಫಿ ದರ ಏರಿಕೆ ಬೆಳೆಗಾರರಿಗೆ ಹರುಷ ತಂದಿದ್ದರೂ ಕಾಫಿ ಬಳಕೆದಾರರಿಗೆ ಮಾತ್ರ ಬಾಯಿ ಕಹಿ ಆಗಿದೆ. ಈ ನಡುವೆ ಕಾಫಿಯ ರುಚಿಗಾಗಿ ಮಿಶ್ರಣ ಮಾಡುವ ಚಿಕೋರಿ ಬೇರಿನ ಬಳಕೆ ಹೆಚ್ಚಾಗಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಶಕ್ತಿ ಗೆ ತಿಳಿಸಿದರು. ಕಾಫಿಯ ದರ ಹೆಚ್ಚಳವನ್ನು ಸರಿದೂಗಿಸಲು ಕಾಫಿಗೆ ಶೇಕಡಾ 20 ರಷ್ಟು ಚಿಕೋರಿ ಮಿಶ್ರಣ ಮಾಡುವ ಬದಲಿಗೆ ಶೇಕಡಾ 40 ರಿಂದ 50 ರ ವರೆಗೆ ಚಿಕೋರಿ ಮಿಶ್ರಣ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ. ರುಚಿಗಾಗಿ ನಿಗದಿತ ಪ್ರಮಾಣದ ಚಿಕೋರಿ ಬೆರೆಸಲು ಅನುಮತಿ ಇದೆಯಾದರೂ ಇದನ್ನು ಪೊಟ್ಟಣದ ಮೇಲೆ ಸ್ಪಷ್ಟವಾಗಿ ನಮೂದಿಸಬೇಕಿದೆ. ಆದರೆ ಹೆಚ್ಚಿನ ಪ್ರಮಾಣದ ಸಿಕೋರಿ ಮಿಶ್ರಣ ಕಲಬೆರಕೆ ಎನಿಸಿಕೊಳ್ಳುತ್ತದೆ. ಆದರೆ ಬೆಂಗಳುರು , ಇತರ ನಗರ ಪ್ರದೇಶಗಳಲ್ಲಿ ವ್ಯಾಪಕ ಕಲಬೆರಕೆ ಮಾಡಿ ಕಾಫಿಯ ಸ್ವಾದ ಮತ್ತು ಗುಣಮಟ್ಟ ಕುಸಿಯುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಕಾಫಿಯ ನೂತನ ಗ್ರಾಹಕರು ರುಚಿಯಾಗಿಲ್ಲ ಎಂದು ಇತರ ಪಾನೀಯದತ್ತ ಮುಖ ಮಾಡುವ ಸಾದ್ಯತೆ ಇದೆ ಎಂದು ಕಾಫಿ ಉದ್ಯಮಿಯೊಬ್ಬರು ತಿಳಿಸಿದರು. ಈಗ ಚಿಕೋರಿ ಬೇರಿನ ದರ ಕಿಲೋಗೆ 40-50 ರೂಪಾಯಿ ಇದೆ.
ಕೊಡಗಿನ ರಿಯಲ್ಎಸ್ಟೇಟ್‌ ಮೇಲೆ ಪ್ರಭಾವ ::  ಕೊಡಗಿನಲ್ಲಿ ಸಾವಿರಾರು ಎಕರೆ ತೋಟಗಳು ಮಾರಾಟಕ್ಕಿವೆ. ಯುವ ಜನಾಂಗ ಉದ್ಯೋಗದ ನಿಮಿತ್ತ ಬೆಂಗಳುರಿಗೆ ವಲಸೆ ಹೋಗಿ ಅಲ್ಲಿಯೇ ಸೈಟು ಮನೆ ಖರೀದಿಸಿ ಸೆಟಲ್ಆಗುತ್ತಿರುವುದರಿಂದ ಮತ್ತು ಕೊಡಗಿಗೆ ಹೋಗಲು ಐದರಿಂದ ಆರು ಘಂಟೆ ಪ್ರಯಾಣದ ಅವಧಿ ಇರುವುದರಿಂದ , ತೋಟಗಳನ್ನು ನೋಡಿಕೊಳ್ಳಲು ಕಾರ್ಮಿಕರ ಅಭಾವವೂ ಇರುವುದರಿಂದ ನೂರಾರು ಬೆಳೆಗಾರರು ತೋಟಗಳ ಮಾರಾಟಕ್ಕೆ ಮುಂದಾಗುತಿದ್ದಾರೆ. ಇಲ್ಲಿ ಮಾರಾಟ ಮಾಡಿ ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೊಡಗಿನ ತೋಟಗಳನ್ನು ಖರೀದಿಸುವವರಲ್ಲಿ ಹೊರಗಿನವರೇ ಹೆಚ್ಚಾಗಿದ್ದಾರೆ. ಈ ರೀತಿ ಖರೀದಿಸುವವರು ಹೋಂ ಸ್ಟೆ ನಡೆಸುವ ಆಶಯ ಹೊಂದಿರುವುದರಿಂದ ಭೂಮಿ ಬೆಲೆಯೂ ಏರಿಕೆ ಆಗಿದೆ. ಇದೀಗ ಕಾಫಿ ದರ ಏರಿಕೆ ಹಿನ್ನೆಲೆ ತೋಟಗಳ ದರವೂ ಹೆಚ್ಚಾಗಿದೆ. ಮೂರು ತಿಂಗಳ ಹಿಂದೆ ಎಕರೆಗೆ ರೂ 30 ಲಕ್ಷಕ್ಕೆ ಮಾರಾಟಕಿಟ್ಟಿದ್ದ ತೋಟ ಮಾಲೀಕರು ಇದೀಗ ಕಾಫಿ ದರ ಹೆಚ್ಚಳದಿಂದ 35 ಲಕ್ಷ ಕೇಳುತಿದ್ದಾರೆ ಎಂದು ರಿಯಲ್ಎಸ್ಟೇಟ್ ಉದ್ಯಮಿಯೊಬ್ಬರು ತಿಳಿಸಿದರು.
ಒಟ್ಟಿನಲ್ಲಿ ಕಾಫಿ ದರ ಏರಿಕೆ ಕೊಡಗಿನಲ್ಲಿ ವ್ಯಾಪಕ ಸಂಚಲನಕ್ಕೂ ಕಾರಣವಾಗಿದೆ.

ವರದಿ : ಕೋವರ್‌ ಕೊಲ್ಲಿ ಇಂದ್ರೇಶ್ 

Follow us Follow us
Share. WhatsApp Facebook Twitter Email Telegram Copy Link

Related Posts

ಭಾಗಮಂಡಲ : ಅ.26 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ

ಅಕ್ಟೋಬರ್ 23, 2026

ಅಹಿಂದ ಬಳಗ ಕೊಡಗು ಜಿಲ್ಲೆ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ನಾಪಂಡ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಈ.ಸುರೇಶ್ ಆಯ್ಕೆ

ಅಕ್ಟೋಬರ್ 23, 2026

ಕನ್ನಡ ರಾಜ್ಯೋತ್ಸವ : ನ.2ರಂದು ವಿರಾಜಪೇಟೆಯಲ್ಲಿ ಕರ್ನಾಟಕ ಸಂಘದಿಂದ ತಾಲ್ಲೂಕು ಮಟ್ಟದ ಸ್ಪರ್ಧೆ

ಅಕ್ಟೋಬರ್ 23, 2026

ಅಹಿಂದ ಬಳಗ ಕೊಡಗು ಜಿಲ್ಲೆ ನೂತನ ಸಮಿತಿ ರಚನೆ : ಅಧ್ಯಕ್ಷರಾಗಿ ನಾಪಂಡ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಈ.ಸುರೇಶ್ ಆಯ್ಕೆ

ಅಕ್ಟೋಬರ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.23 : ಕೊಡಗು ಜಿಲ್ಲೆಯ ಅಹಿಂದ ಸಮುದಾಯದ ಪ್ರಮುಖರು ಹಾಗೂ ಪ್ರಗತಿಪರರು ಸಭೆ ಸೇರಿ ಅಹಿಂದ…

ಕನ್ನಡ ರಾಜ್ಯೋತ್ಸವ : ನ.2ರಂದು ವಿರಾಜಪೇಟೆಯಲ್ಲಿ ಕರ್ನಾಟಕ ಸಂಘದಿಂದ ತಾಲ್ಲೂಕು ಮಟ್ಟದ ಸ್ಪರ್ಧೆ

ಅಕ್ಟೋಬರ್ 23, 2026

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಸ್ವಚ್ಛತಾ ಅಭಿಯಾನ ನಡೆಯಲಿ: ರಾಜೇಶ್; ಪಾಲಿಬೆಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ; 100ಕ್ಕೂ ಅಧಿಕ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಭಾಗಿ

ಅಕ್ಟೋಬರ್ 23, 2026

ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ ಪ್ರೊ. ಭಾರತಿ ಹಿರೇಮಠ ಅಧಿಕಾರ ಸ್ವೀಕಾರ

ಅಕ್ಟೋಬರ್ 23, 2026

ಕಿತ್ತೂರು ರಾಣಿ ಚೆನ್ನಮ್ಮರ ತ್ಯಾಗ ಮತ್ತು ಶೌರ್ಯದ ಬದುಕು ಎಲ್ಲರಿಗೂ ಆದರ್ಶ : ಪುದಿಯನೆರವನ ರೇವತಿ ರಮೇಶ್

ಅಕ್ಟೋಬರ್ 23, 2026

ಮಡಿಕೇರಿ ಗಾಂಧಿ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ : ವರ್ಷದ 365 ದಿನವೂ ಸ್ವಚ್ಛತೆಗೆ ಆದ್ಯತೆ ನೀಡಿ : ಶಾಸಕ ಡಾ.ಮಂತರ್ ಗೌಡ

ಅಕ್ಟೋಬರ್ 23, 2026

ಗೋಣಿಕೊಪ್ಪಲು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯ ನಂದಿನಿ ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನ

ಅಕ್ಟೋಬರ್ 22, 2026

ಮೂರ್ನಾಡಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ ಆಯುಧ ಪೂಜೆ : ಸಾಧಕರಿಗೆ ಸನ್ಮಾನ

ಅಕ್ಟೋಬರ್ 22, 2026

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಸಂಭ್ರಮದ ಆಯುಧ ಪೂಜೆ

ಅಕ್ಟೋಬರ್ 22, 2026

ವಿರಾಜಪೇಟೆ : ಶಿವಕೇರಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ನವರಾತ್ರಿ ಉತ್ಸವ

ಅಕ್ಟೋಬರ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.