
ವಿರಾಜಪೇಟೆ ಫೆ.6 NEWS DESK : ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಎ.ಹನಿಯ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇವಳು ಅಮ್ಮತ್ತಿಯ ಕಂದಾಯ ಇಲಾಖೆಯ ಪರಿವೀಕ್ಷಕರಾದ ಅನಿಲ್ ಹಾಗೂ ರಂಜಿನಿ ದಂಪತಿಯ ಪುತ್ರಿ. ಖ್ಯಾತ ಚಿತ್ರಕಲಾವಿದರು ಹಾಗೂ ಚಿತ್ರಕಲಾ ಶಿಕ್ಷಕ ಕ್ಲಿಫರ್ಡ್ ಡಿ ಮೆಲ್ಲೋ ಅವರಲ್ಲಿ ಚಿತ್ರಕಲೆಯ ತರಬೇತಿ ಪಡೆಯುತ್ತಿದ್ದಾಳೆ.









