
ಸಿದ್ದಾಪುರ ಫೆ.10 NEWS DESK : ಕೊಡಗು ಜಿಲ್ಲಾ, ತಾಲ್ಲೂಕು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಮ್ಮತ್ತಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ವಿ.ಎಸ್.ರಾಮಕೃಷ್ಣ ಮತ್ತು ಕೆ.ಟಿ.ಸುಬ್ಬರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮ ಫೆ.11 ರಂದು ನಡೆಯಲಿದೆ. ಅಮ್ಮತ್ತಿ ಪ್ರೌಢಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಅಮ್ಮತ್ತಿ ಪ್ರೌಢಶಾಲೆ ಸಮಿತಿ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಟಿ.ಹೆಚ್.ಮಂಜುನಾಥ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್,ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ, ದೇವಣಗೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಡಿ ಲೋಕೇಶ್,ಮಾಕುಟ್ಟ ನಿವೃತ್ತ ಮುಖ್ಯ ಶಿಕ್ಷಕ ಎ.ವಿ.ಮಂಜುನಾಥ್, ರಾಮಕೃಷ್ಣ, ಶ್ರೀಮತಿ ಕಂಜರ್ಪಣೆ ತಿಮ್ಮಪಯ್ಯ ನಾಗರತ್ನ, ದೊಡ್ಡತಮ್ಮಯ್ಯ, ಕಾವಾಡಿಚಂಡ ಯು. ಗಣಪತಿ, ಐನಂಡ ಪ್ರಕಾಶ್, ಸುಬ್ರಮಣಿ,ಎಂ ಬಿಜೊಯ್,ಟೋಮಿ ಥೋಮಸ್ (ನಾ ಕನ್ನಡಿಗ)
ಸಾವಿತ್ರಿ, ಶಭರೀಶ್ ಶೆಟ್ಟಿ, ವಿ.ಎಸ್. ಗುರುಧರ್ಶನ್, ಸಿ.ವಿಜಯಲಕ್ಷ್ಮೀ, ಕೆ.ಆರ್.ಸೂರಜ್, ಮುನೀರ್ ಅಹಮ್ಮದ್, ರೇವತಿ ರಮೇಶ್,ಎಸ್. ಎಸ್. ಸಂಪತ್ ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಟಿ. ಹೆಚ್ ಮಂಜುನಾಥ್ ತಿಳಿಸಿದ್ದಾರೆ.









